ಈ ‘ಮನೆ ಮದ್ದು’ ಉಪಯೋಗಿಸಿ ಭೇದಿ ಸಮಸ್ಯೆ ನಿವಾರಿಸಿಕೊಳ್ಳಿ

ಈ 'ಮನೆ ಮದ್ದು' ಉಪಯೋಗಿಸಿ ಭೇದಿ ಸಮಸ್ಯೆ ನಿವಾರಿಸಿಕೊಳ್ಳಿ

ತಿಂದ ಆಹಾರ ಸರಿಯಾಗಿ ಜೀರ್ಣವಾಗದೇ ಇರುವುದು, ಅಥವಾ ಕೆಲವೊಮ್ಮೆ ಹೊರಗಡೆ ಆಹಾರ ತಿನ್ನುವುದರಿಂದ ಅಜೀರ್ಣವಾಗಿ ಭೇದಿ ಶುರುವಾಗುತ್ತದೆ. ಇದರಿಂದ ಹೊಟ್ಟೆನೋವು ಕೂಡ ಕಾಣಿಸಿಕೊಳ್ಳುತ್ತದೆ. ಮಾತ್ರೆಗಳನ್ನು ತಿನ್ನುವ ಬದಲು ಮನೆಯಲ್ಲಿಯೇ ಇರುವ ಔಷಧಿಗಳನ್ನು ಉಪಯೋಗಿಸುವುದರಿಂದ ಇದನ್ನು ಕಡಿಮೆ ಮಾಡಿಕೊಳ್ಳಬಹುದು.

1 ಕಪ್ ಮೊಸರಿಗೆ 1 ಬಾಳೆಹಣ್ಣನ್ನು ಚಿಕ್ಕಚಿಕ್ಕದ್ದಾಗಿ ಕತ್ತರಿಸಿಕೊಂಡು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ತಿನ್ನುವುದರಿಂದ ಭೇದಿ ಕಡಿಮೆಯಾಗುತ್ತದೆ.

ಇನ್ನು ಒಂದು ಗ್ಲಾಸ್ ಮಜ್ಜಿಗೆಗೆ 1 ಟೀ ಸ್ಪೂನ್ ನಷ್ಟು ಮೆಂತೆ ಪುಡಿಯನ್ನು ಸೇರಿಸಿ ಕುಡಿಯುವುದರಿಂದ ಭೇದಿ ನಿಯಂತ್ರಣಕ್ಕೆ ಬರುತ್ತದೆ.

ಒಂದು ಕಪ್ ಮೊಸರಿಗೆ ಮೆಂತೆ ಪುಡಿ 2 ಟೀ ಸ್ಪೂನ್, ಜೀರಿಗೆ ಪುಡಿ-2 ಟೀ ಸ್ಪೂನ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ತಿನ್ನಿ ಇದರಿಂದ ಭೇದಿ ಕಡಿಮೆಯಾಗುತ್ತದೆ.

½ ಟೀ ಸ್ಪೂನ್ ಸಾಸಿವೆ ಪುಡಿ, ½ ಟೀ ಸ್ಪೂನ್ ಜೀರಿಗೆ ಪುಡಿಗೆ 1 ಟೀ ಸ್ಪೂನ್ ಜೇನುತುಪ್ಪ ಸೇರಿಸಿ ತಿನ್ನಿ ಇದು ಕೂಡ ಭೇದಿಯನ್ನು ಶಮನ ಮಾಡುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವ್ಯಾಯಾಮ ಮಾಡಿದ್ರೂ ತೂಕ ಹೆಚ್ಚಾಗಲು ಕಾರಣವೇನು ಗೊತ್ತಾ...?

Wed Dec 22 , 2021
ತೂಕ ಕಡಿಮೆ ಮಾಡಿಕೊಳ್ಳಲು ನೀವೂ ಜಾಸ್ತಿ ಕಸರತ್ತು ಮಾಡ್ತಿದ್ದೀರಾ? ಎಷ್ಟೇ ವ್ಯಾಯಾಮ ಮಾಡಿದ್ರೂ ಏನೂ ಪ್ರಯೋಜನವಾಗಲಿಲ್ವಾ? ವ್ಯಾಯಾಮ ಮಾಡೋದ್ರಿಂದ ತೂಕ ಕಡಿಮೆಯಾಗುವ ಬದಲು ಹೆಚ್ಚಾಗ್ತಾ ಇದೆ ಎಂಬ ಗೊಂದಲ್ಲ ನಿಮ್ಮಲ್ಲಿದ್ದರೆ ನೀವು ಮಾಡುವ ತಪ್ಪುಗಳೇ ಇದಕ್ಕೆ ಕಾರಣ. ಜನರು ವ್ಯಾಯಾಮ ಮಾಡಲು ಶುರುಮಾಡಿದ ಆರಂಭಿಕ ದಿನಗಳಲ್ಲಿ ಅವರ ತೂಕ ಮತ್ತಷ್ಟು ಜಾಸ್ತಿಯಾಗುತ್ತದೆ. ಆರಂಭಿಕ ದಿನಗಳಲ್ಲಿ ವ್ಯಾಯಾಮ ಮಾಡಿದಾಗ ಬರ್ನ್ ಆದ ಕ್ಯಾಲೋರಿಯಷ್ಟು ತೂಕ ಇಳಿಯೋದಿಲ್ಲ. ಈ ಬಗ್ಗೆ ನಡೆದ ಸಂಶೋಧನೆಯೊಂದು […]

Advertisement

Wordpress Social Share Plugin powered by Ultimatelysocial