ವ್ಯಾಯಾಮ ಮಾಡಿದ್ರೂ ತೂಕ ಹೆಚ್ಚಾಗಲು ಕಾರಣವೇನು ಗೊತ್ತಾ…?

ವ್ಯಾಯಾಮ ಮಾಡಿದ್ರೂ ತೂಕ ಹೆಚ್ಚಾಗಲು ಕಾರಣವೇನು ಗೊತ್ತಾ...?

ತೂಕ ಕಡಿಮೆ ಮಾಡಿಕೊಳ್ಳಲು ನೀವೂ ಜಾಸ್ತಿ ಕಸರತ್ತು ಮಾಡ್ತಿದ್ದೀರಾ? ಎಷ್ಟೇ ವ್ಯಾಯಾಮ ಮಾಡಿದ್ರೂ ಏನೂ ಪ್ರಯೋಜನವಾಗಲಿಲ್ವಾ? ವ್ಯಾಯಾಮ ಮಾಡೋದ್ರಿಂದ ತೂಕ ಕಡಿಮೆಯಾಗುವ ಬದಲು ಹೆಚ್ಚಾಗ್ತಾ ಇದೆ ಎಂಬ ಗೊಂದಲ್ಲ ನಿಮ್ಮಲ್ಲಿದ್ದರೆ ನೀವು ಮಾಡುವ ತಪ್ಪುಗಳೇ ಇದಕ್ಕೆ ಕಾರಣ.

ಜನರು ವ್ಯಾಯಾಮ ಮಾಡಲು ಶುರುಮಾಡಿದ ಆರಂಭಿಕ ದಿನಗಳಲ್ಲಿ ಅವರ ತೂಕ ಮತ್ತಷ್ಟು ಜಾಸ್ತಿಯಾಗುತ್ತದೆ. ಆರಂಭಿಕ ದಿನಗಳಲ್ಲಿ ವ್ಯಾಯಾಮ ಮಾಡಿದಾಗ ಬರ್ನ್ ಆದ ಕ್ಯಾಲೋರಿಯಷ್ಟು ತೂಕ ಇಳಿಯೋದಿಲ್ಲ. ಈ ಬಗ್ಗೆ ನಡೆದ ಸಂಶೋಧನೆಯೊಂದು ನಾವು ಸೇವಿಸುವ ಆಹಾರ ಇದಕ್ಕೆ ಕಾರಣ ಎಂದಿದೆ.

ವ್ಯಾಯಾಮ ಮಾಡುವುದರಿಂದ ಹಸಿವು ಹೆಚ್ಚಾಗುತ್ತದೆ. ನಾವು ತಿನ್ನುವ ಪ್ರಮಾಣ ಜಾಸ್ತಿಯಾಗುತ್ತದೆ. ಅದ್ರಲ್ಲೂ ವ್ಯಾಯಾಮ ಶುರುಮಾಡಿದ ಆರಂಭಿಕ ದಿನಗಳಲ್ಲಿ ಹಸಿವಾಗುವ ಪ್ರಮಾಣ ಹೆಚ್ಚು. ಸ್ವಿಮ್ಮಿಂಗ್ ಮಾಡಿದಲ್ಲಿ, ಸೈಕಲ್ ಚಲಾಯಿಸಿದ್ರೆ, ಓಡಿದ್ರೆ ಹಸಿವಾಗುವ ಪ್ರಮಾಣ ಜಾಸ್ತಿ. ಹಸಿವಾಗ್ತಿದ್ದಂತೆ ಹೆಚ್ಚು ಆಹಾರ ಸೇವನೆ ಮಾಡ್ತಾರೆ. ಒಮ್ಮೆ ವ್ಯಾಯಾಮ ಮಾಡಿ ಕ್ಯಾಲೋರಿ ಬರ್ನ್ ಮಾಡಿ ಹೊಟ್ಟೆ ತುಂಬಾ ಆಹಾರ ಸೇವನೆ ಮಾಡಿ ಕುಳಿತಲ್ಲಿಯೇ ಕೆಲಸ ಮಾಡುವುದು ಕೂಡ ತೂಕ ಏರಲು ಕಾರಣ.

ವ್ಯಾಯಾಮ ಮಾಡಿದ್ರೆ ಮಾತ್ರ ಸಾಲದು ದಿನದಲ್ಲಿ ನೀವು ಎಷ್ಟು ಆಯಕ್ಟೀವ್ ಆಗಿರುತ್ತೀರಾ? ಎಷ್ಟು ಓಡಾಡ್ತೀರಾ ಎಂಬುದು ಮಹತ್ವ ಪಡೆಯುತ್ತದೆ. ಹಾಗೆ ನೀವು ಸೇವಿಸುವ ಆಹಾರದಲ್ಲಿ ಹೆಚ್ಚು ಕ್ಯಾಲೋರಿ ಇದ್ದಲ್ಲಿ ಅದು ಕೂಡ ನಿಮ್ಮ ತೂಕ ಹೆಚ್ಚಿಸುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅನಾರೋಗ್ಯದ ವೇಳೆ ಈ 'ಜ್ಯೂಸ್' ನಿಂದ ದೂರವಿರಿ

Wed Dec 22 , 2021
ತರಕಾರಿ, ಹಣ್ಣಿನ ಜ್ಯೂಸ್ ತುಂಬಾ ಒಳ್ಳೆಯದು. ಜ್ಯೂಸ್ ಸೇವನೆ ಮಾಡಬೇಕೆಂದು ವೈದ್ಯರು ಸಲಹೆ ನೀಡ್ತಾರೆ. ಆದ್ರೆ ಎಲ್ಲ ಸಮಯದಲ್ಲಿ ಜ್ಯೂಸ್ ಸೇವನೆ ಒಳ್ಳೆಯದಲ್ಲ. ಅನಾರೋಗ್ಯದಿಂದ ಬಳಲುತ್ತಿರುವವರು ಎಲ್ಲ ಹಣ್ಣಿನ ಜ್ಯೂಸ್ ಸೇವನೆ ಮಾಡಬಾರದು. ಜ್ಯೂಸ್ ಹಾಗೂ ಔಷಧಿ ಎರಡೂ ದೇಹ ಸೇರುವುದ್ರಿಂದ ಕೆಲವೊಂದು ಸಮಸ್ಯೆಗಳು ಕಾಡುವ ಸಾಧ್ಯತೆಯಿರುತ್ತದೆ. ಸೇಬು ಜ್ಯೂಸ್: ಕ್ಯಾನ್ಸರ್ ನಿಂದ ಬಳಲುತ್ತಿರುವ, ಕಿಮೋಥೆರಪಿ ಮಾಡಿಸಿಕೊಳ್ಳುತ್ತಿರುವ ವ್ಯಕ್ತಿ ಸೇಬು ಹಣ್ಣಿನ ಜ್ಯೂಸ್ ಸೇವನೆ ಮಾಡಬಾರದು. ಪೈನಾಪಲ್ ಜ್ಯೂಸ್: ರಕ್ತಕ್ಕೆ ಸಂಬಂಧಿಸಿದ ಸಮಸ್ಯೆಯಿದ್ರೆ […]

Advertisement

Wordpress Social Share Plugin powered by Ultimatelysocial