ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ತುಮಕೂರು ರಸ್ತೆಯ ಹುಣ್ಣಿಗೆರೆ(ದಾಸನಪುರ ಹೋಬಳಿ) ಯಲ್ಲಿ 271.46 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ವಿಲ್ಲಾ ಯೋಜನೆ 2023ರ ಮಾರ್ಚ್-ಏಪ್ರಿಲ್ ಅಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಹೀಗಾಗಿ, ವಿಲ್ಲಾ ಹೊಂದಬೇಕೆಂಬುವವರ ಕನಸು ನನಸಾಗುವ ದಿನಗಳು ಹತ್ತಿರವಾಗುತ್ತಿವೆ.ಬಿಡಿಎ ಮೊದಲ ವಿಲ್ಲಾ ಯೋಜನೆ ಸಂಪೂರ್ಣ ಯಶಸ್ವಿಯಾಗಿದ್ದು, ಆಲೂರಿನಲ್ಲಿ ನಿರ್ಮಿಸಿದ್ದ 452 ವಿಲ್ಲಾಗಳು ಶೇ.100ರಷ್ಟು ಮಾರಾಟವಾಗಿವೆ. ಇದರ ಯಶಸ್ಸಿನಿಂದ ಪ್ರೇರಣೆಗೊಂಡ ಬಿಡಿಎ ಹುಣ್ಣಿಗೆರೆಯಲ್ಲಿ ಮತ್ತೊಂದು ವಿಲ್ಲಾ ಯೋಜನೆಗೆ ಕೈಹಾಕಿತ್ತು.ಹುಣ್ಣಿಗೆರೆಯಲ್ಲಿ ವಿಲ್ಲಾ ಯೋಜನೆಗೆಂದು 31 ಎಕರೆ ಜಾಗ ಬಳಕೆ ಮಾಡಿಕೊಳ್ಳಲಾಗಿದೆ. ಇದರಲ್ಲಿ 170 ನಾಲ್ಕು ಬಿಎಚ್ಕೆ ವಿಲ್ಲಾ (35*50 ಅಡಿ ಅಳತೆ), 31 ಮೂರು ಬಿಎಚ್ಕೆ ವಿಲ್ಲಾ(35-50 ಅಡಿಅಳತೆ) ಮತ್ತು 121 ಮೂರು ಬಿಎಚ್ಕೆ ವಿಲ್ಲಾಗಳ (30-40 ಅಡಿಅಳತೆ) ನಿರ್ಮಾಣ ಕಾಮಗಾರಿ ಶೇ.85ರಷ್ಟು ಪೂರ್ಣಗೊಂಡಿದ್ದು, ಇನ್ನು ಕೇವಲ ಶೇ.15ರಷ್ಟು ಕಾಮಗಾರಿ ಮಾತ್ರ ಬಾಕಿಯಿದೆ.ಹುಣ್ಣಿಗೆರೆ ವಿಲ್ಲಾ ಯೋಜನೆಯನ್ನು 2018ರ ಸೆ.25 ರಂದು ಹೊಂಬಾಳೆ ಕನ್ಸ್ಟ್ರಕ್ಷನ್ ಆ್ಯಂಡ್ ಎಸ್ಟೇಟ್ ಪ್ರೈ.ಲಿ. ಕಂಪನಿಗೆ ಕಾಮಗಾರಿ ಆರಂಭಿಸಲು ಕಾರ್ಯಾದೇಶ ನೀಡಲಾಗಿತ್ತು. ಈ ಯೋಜನೆಯು 2023ರ ಮೇ ಅಂತ್ಯದೊಳಗೆ ಪೂರ್ಣಗೊಳಿಸುವ ಭರವಸೆಯನ್ನು ಗುತ್ತಿಗೆ ಪಡೆದಿರುವ ಕಂಪನಿಯು ನೀಡಿತ್ತು. ಎಸಿಎಸ್ ಡಿಸೈನ್ ಕನ್ಸಲ್ಟೆಂಟ್ಸ್ ಕಂಪನಿಯು ಕಟ್ಟಡಗಳ ವಿನ್ಯಾಸ ಮಾಡಿದ್ದು, ಡಿಸೈನ್ ಪಾಯಿಂಟ್ ಕನ್ಸಲ್ಟೆಂಟ್ಸ್ ಯೋಜನೆಯ ನಿರ್ವಹಣೆ ಮಾಡುತ್ತಿದೆ.ಕಾಂಪೌಂಡ್ ನಿರ್ಮಿಸಲಾಗಿದೆ. 0.6 ಮೀಟರ್ ಮುಳ್ಳುತಂತಿ ಬೇಲಿ ಅಳವಡಿಸಲಾಗಿದೆ. 6 ಮೀಟರ್ ಅಗಲದ ರಸ್ತೆ, 5 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿಉದ್ಯಾನ, ಬ್ಯಾಸ್ಕೆಟ್ಬಾಲ್, ಕ್ರಿಕೆಟ್ ಮತ್ತು ಮಕ್ಕಳ ಆಟದ ಮೈದಾನ, 600 ಕೆಎಲ್ಡಿಯ ಎಸ್ಟಿಪಿ ಘಟಕ, 1.5 ಲಕ್ಷ ಲೀಟರ್ ಕುಡಿಯುವ ನೀರಿನ ಓವರ್ಹೆಡ್ ಟ್ಯಾಂಕ್ (ಒಎಚ್ಟಿ), 1.5 ಲಕ್ಷ ಲೀಟರ್ ಸಾಮರ್ಥ್ಯದ ಸಂಪ್, 10 ಕೊಳವೆ ಬಾವಿಗಳು ಇರಲಿದ್ದು, ಸಾಮರ್ಥ್ಯಕ್ಕೆ ಅನುಗುಣವಾಗಿ ಪಂಪ್ಗಳು, ಪೈಪ್ ಸಂಪರ್ಕ ಇತ್ಯಾದಿಗಳನ್ನು ಅಳವಡಿಸಲಾಗುತ್ತಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada