ನಂದಿತಾ ಕನ್ನಡ ಚಿತ್ರಲೋಕದ ಪ್ರತಿಭಾನ್ವಿತ ಹಿನ್ನೆಲೆಗಾಯಕಿ.ನಂದಿತಾ ಅವರು 1978ರ ಫೆಬ್ರವರಿ 28ರಂದು ಜನಿಸಿದರು. ಕಳೆದ ಎರಡೂವರೆ ದಶಕದ ಕನ್ನಡ ಚಿತ್ರರಂಗದಲ್ಲಿ ಗಾಯಕಿಯಾಗಿ ಹೆಸರು ಮಾಡಿದವರಲ್ಲಿ ನಂದಿತ ಅವರದು ಪ್ರಮುಖ ಹೆಸರು. ಆರ್.ವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹೊರಬಂದ ಪ್ರತಿಭಾವಂತ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾದ ನಂದಿತಾ ಪ್ರತಿಷ್ಟಿತ ಅಂತರರಾಷ್ಟ್ರೀಯ ಸಂಸ್ಥೆ ‘ಸಿಸ್ಕೋ’ದಲ್ಲಿ ಹೊಂದಿದ್ದ ಉದ್ಯೋಗವನ್ನು ತ್ಯಜಿಸಿ ಸಂಗೀತಕ್ಕೆ ಒಲಿದು ಬಂದಿದ್ದು ಪ್ರಮುಖ ಸುದ್ಧಿಯಾಗಿತ್ತು.ನಂದಿತಾ ಅವರ ತಂದೆ ವೀಣಾ ವೆಂಕಟಗಿರಿಯಪ್ಪನವರ ವೀಣಾ ಪರಂಪರೆಗೆ ಸೇರಿದವರು. ತಾಯಿ ಕೂಡಾ ವೀಣಾ ವಿದ್ವಾಂಸರಾಗಿ ಮಗಳು ನಂದಿತಾಗೆ ಗುರುವಾದರು. ನಂದಿತಾ ವೀಣೆಯಲ್ಲಿ ವಿದ್ವತ್ ಪರೀಕ್ಷೆಯಲ್ಲಿ ಉತ್ತೀರ್ಣರು.ಹಂಸಲೇಖಾ ಅವರ ಮೂಲಕ ‘ಹಬ್ಬ’ ಚಿತ್ರದಲ್ಲಿ ಹಿನ್ನಲೆಗಾಯಕಿಯಾದ ನಂದಿತ ಮುಂದೆ ನೂರಾರು ಚಿತ್ರಗಳಲ್ಲಿ, ದೂರದರ್ಶನ ಕಾರ್ಯಕ್ರಮಗಳಲ್ಲಿ, ಮತ್ತು ಪ್ರಮುಖ ವೇದಿಕೆಗಳಲ್ಲಿ ಕಾಣಿಸಿಕೊಂಡು ತಮ್ಮ ಗಾಯನ ಮತ್ತು ನಗೆಮೊಗದಿಂದ ಕನ್ನಡ ಜನತೆಯ ಹೃದಯವನ್ನು ಗೆದ್ದಿದ್ದಾರೆ. ಹಲವಾರು ನಟಿಯರಿಗೆ ಸಂಭಾಷಣಾ ಧ್ವನಿದಾನ ಕೂಡಾ ಮಾಡಿದ್ದಾರೆ.ಶಾಸ್ತ್ರೀಯ ಸಂಗೀತದ ನಿರತ ಅಧ್ಯಯನದ ಜೊತೆಗೆ ಹಲವು ಹೊಸ ಚಿಂತನೆಗಳಲ್ಲೂ ಶ್ರಮ ವಹಿಸಿರುವ ನಂದಿತ ಆ ನಿಟ್ಟಿನಲ್ಲೂ ಹಲವಾರು ಧ್ವನಿಮುದ್ರಿಕೆಗಳನ್ನು ಹೊರತಂದಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: