12 ವರ್ಷದ ಹಿಂದೆ ಕಳೆದುಹೋದ ಗಂಡ, ಸತ್ತ ಎಂದು ಬೇರೆ ಮದ್ವೆಯಾಗಿದ್ದ ಪತ್ನಿ

ಬಕ್ಸರ್: 12 ವರ್ಷಗಳ ಹಿಂದೆ ಸತ್ತಿದ್ದಾನೆ ಎಂದು ನಂಬಲಾಗಿದ್ದ ಮಗ ಈಗ ಜೀವಂತವಾಗಿದ್ದಾನೆ. ಆತನನ್ನು ಸತ್ತನೆಂದು ಪರಿಗಣಿಸಿ ಅಂತಿಮ ವಿಧಿವಿಧಾನಗಳನ್ನು ನಡೆಸಿದ ಕುಟುಂಬ ಸದಸ್ಯರಿಗೆ ಈಗ ಅವನು ಜೀವಂತವಾಗಿದ್ದಾನೆ ಎಂಬ ಸುದ್ದಿ ತಿಳಿದು ಮೂಕ ವಿಸ್ಮಿತರಾಗಿದ್ದಾರೆ.

ಆದರೆ, ಆತ ಬಾರ್ಡರ್ ಪ್ರವೇಶಿಸಿದ್ದರಿಂದ ಪಾಕಿಸ್ತಾನದ ಜೈಲಿನಲ್ಲಿ ಇರಿಸಲಾಗಿದೆ. ಯುವಕ ಮೃತಪಟ್ಟಿರುವ ವಿಷಯ ತಿಳಿದ ಆತನ ಪತ್ನಿ ಮತ್ತೆ ಮದುವೆಯಾಗಿ ಮಕ್ಕಳೊಂದಿಗೆ ತೆರಳಿದ್ದಾಳೆ. ಯುವಕ ಜೀವಂತವಾಗಿರುವ ಮತ್ತು ಪಾಕಿಸ್ತಾನದಲ್ಲಿ ಇರುವ ಸುದ್ದಿ ತಿಳಿದ ನಂತರ, ಆಕೆಯ ತಾಯಿ ಸಾಯುವ ಮೊದಲು ಅವನ ಮುಖವನ್ನು ಒಮ್ಮೆಯಾದರೂ ನೋಡಬೇಕು ಎಂದು ಹಾತೊರೆಯುತ್ತಿದ್ದಾಳೆ. ಪಾಕಿಸ್ತಾನಿ ಜೈಲಿನಲ್ಲಿರುವ ವ್ಯಕ್ತಿಯನ್ನು ಬಕ್ಸರ್ ಜಿಲ್ಲೆಯ ಚೌಸಾ ನಗರ ಪಂಚಾಯತ್ ವ್ಯಾಪ್ತಿಯ ಖಿಲಾಫತ್‌ಪುರದ ಬಸ್ತಿ ನಿವಾಸಿ ಛವಿ ಮುಸಾಹರ್ ಎಂದು ಗುರುತಿಸಲಾಗಿದೆ.

ಮುಫಾಸಿಲ್ ಪೊಲೀಸ್ ಠಾಣೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ವ್ಯಕ್ತಿಯ ಗುರುತಿನ ಪತ್ರವನ್ನು ತಲುಪಿಸಿದ್ದು, ಪೊಲೀಸರು ಬಸ್ತಿಗೆ ತಲುಪಿ ಛವಿಯ ಕುಟುಂಬ ಸದಸ್ಯರನ್ನು ಸಂಪರ್ಕಿಸಿದ್ದಾರೆ. ಹಾಗೆ ಆತನ ಚಿತ್ರವನ್ನು ಕುಟುಂಬ ಸದಸ್ಯರಿಗೆ ತೋರಿಸಿದಾಗ ತಮ್ಮ ಮಗ ಇವನೇ ಎಂದು ಪತ್ತೆ ಮಾಡಿದ್ದಾರೆ. ಛವಿ ಮುಷಾರ್ ಅವರ ಕುಟುಂಬ ಸದಸ್ಯರು, 12 ವರ್ಷಗಳ ಹಿಂದೆ ನಾಪತ್ತೆಯಾಗುವ ಮೊದಲು, ಆತ ತಮ್ಮ ತಾಯಿ, ಸಹೋದರ, ಹೆಂಡತಿ ಮತ್ತು ಅವರ ಮಗುವಿನೊಂದಿಗೆ ಇಲ್ಲಿ ವಾಸಿಸುತ್ತಿದ್ದರು. ಆದರೆ, ಒಂದು ದಿನ ಇದ್ದಕ್ಕಿದ್ದಂತೆ ಬಸ್ತಿಯಿಂದ ನಾಪತ್ತೆಯಾಗಿದ್ದ. ಆರಂಭದಲ್ಲಿ, ಅವನು ಮತ್ತೆ ಬರುತ್ತಾನೆ ಎಂದು ನಾವು ಭಾವಿಸಿದ್ದೆವು. ಏಕೆಂದರೆ ಅವನು ಆಗಾಗ್ಗೆ ಹೀಗೆ ಹೋಗಿ ಬರುತ್ತಿದ್ದ ಎಂದಿದ್ದಾರೆ. ಆದರೆ, ಈ ಬಾರಿ ಅವರು ಬಹಳ ಸಮಯದವರೆಗೆ ಹಿಂತಿರುಗಲಿಲ್ಲ. ಪರಿಣಾಮ ನಾವು ಆತನನ್ನು ಎಲ್ಲ ಕಡೆ ಹುಡುಕಿದೆವು. ಆದರೆ, ಯಾವುದೇ ಮಾಹಿತಿ ಸಿಗದ ಕಾರಣ ಸತ್ತಿದ್ದಾನೆ ಎಂದು ಪರಿಗಣಿಸಿ ಅಂತ್ಯಕ್ರಿಯೆಯನ್ನೂ ಮಾಡಿದೆವು.

Please follow and like us:

Leave a Reply

Your email address will not be published. Required fields are marked *

Next Post

ರಾಜಕೀಯ ಪ್ರವೇಶಿಸಿ ಹೆಚ್ ಡಿಕೆಗೆ ಉತ್ತರ ನೀಡುತ್ತೇನೆ

Fri Dec 17 , 2021
ಬೆಂಗಳೂರು : ಒಕ್ಕಲಿಗರ ಸಂಘದ ಚುನಾವಣೆಯ ನಿರ್ದೇಶಕರ ಚುನಾವಣೆಯಲ್ಲಿ ಪರಾಜಿತರಾಗಿರುವ ಡಾ. ಕೆ ಮಹದೇವ್ ಅವರು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಆಕ್ರೋಶ ಹೊರ ಹಾಕಿದ್ದು, ರಾಜಕೀಯ ಪ್ರವೇಶಿಸಿ ಉತ್ತರ ನೀಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ರಾಜ್ಯ ಒಕ್ಕಲಿಗರ ಸಂಘಕ್ಕೆ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ನನ್ನ ಸೋಲಿಗೆ ಮಾಜಿ ಸಿಎಂ ಕುಮಾರಸ್ವಾಮಿ ಕಾರಣ ಎಂದು ಪರಾಜಿತ ಅಭ್ಯರ್ಥಿ ಡಾ ಕೆ ಮಹದೇವ್ ಗಂಭೀರ ಆರೋಪ ಮಾಡಿದ್ದಾರೆ. ನನಗೆ ಏಳು ಸಾವಿರ ಮತದಾರರ […]

Advertisement

Wordpress Social Share Plugin powered by Ultimatelysocial