ಭಾರತವೇ ಗುರಿ, ಪಾಕ್‌ನಿಂದಲೇ ಮುಂದುವರಿದ ಉಗ್ರ ಸಂಘಟನೆಗಳ ಕಾರ್ಯಾಚರಣೆ

ಭಾರತವೇ ಗುರಿ, ಪಾಕ್‌ನಿಂದಲೇ ಮುಂದುವರಿದ ಉಗ್ರ ಸಂಘಟನೆಗಳ ಕಾರ್ಯಾಚರಣೆ: ಅಮೆರಿಕ

ವಾಷಿಂಗ್ಟನ್‌: ಭಾರತವನ್ನು ಗುರಿಯಾಗಿಸಿಕೊಂಡಿರುವ ಭಯೋತ್ಪಾದನಾ ಸಂಘಟನೆಗಳು ಪಾಕಿಸ್ತಾನದಿಂದಲೇ ಕಾರ್ಯಾಚರಣೆ ಮುಂದುವರಿಸಿವೆ. ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆ ಘೋಷಿಸಿರುವ ಮಸೂದ್ ಅಜರ್‌ ಸೇರಿದಂತೆ ಹಲವು ಉಗ್ರರ ವಿರುದ್ಧವೂ ಪಾಕಿಸ್ತಾನ ಆಡಳಿತವು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಮೆರಿಕದ ವಿದೇಶಾಂಗ ವ್ಯವಹಾರಗಳ ಇಲಾಖೆಯು ಇತ್ತೀಚಿನ ವರದಿಯಲ್ಲಿ ಉಲ್ಲೇಖಿಸಿದೆ.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೊನಿ ಬ್ಲಿಂಕನ್‌ ಭಯೋತ್ಪಾದನೆಗೆ ಸಂಬಂಧಿಸಿದ 2020ರ ವರದಿಯನ್ನು ಗುರುವಾರ ಬಿಡುಗಡೆ ಮಾಡಿದ್ದಾರೆ.

ವರದಿಯ ಪ್ರಕಾರ, ‘ಅಫ್ಗಾನಿಸ್ತಾನವನ್ನು ಗುರಿಯಾಗಿಸಿಕೊಂಡಿರುವ ಆಫ್ಗನ್‌ ತಾಲಿಬಾನ್‌ ಹಾಗೂ ಹಕ್ಕಾನಿ ನೆಟವರ್ಕ್‌, ಭಾರತವನ್ನು ಗುರಿಯಾಗಿಸಿಕೊಂಡಿರುವ ಲಷ್ಕರ್‌ ಎ ತೈಬಾ (ಎಲ್‌ಇಟಿ), ಅದರೊಂದಿಗೆ ಸಂಯೋಜನೆಗೊಂಡಿರುವ ಇತರೆ ಸಂಘಟನೆಗಳು ಹಾಗೂ ಜೈಷ್‌ ಎ ಮೊಹಮ್ಮದ್‌ ಉಗ್ರರ ಸಂಘಟನೆಗಳು ಪಾಕಿಸ್ತಾನದಿಂದ ಕಾರ್ಯಾಚರಣೆ ನಡೆಸುವುದು ಮುಂದುವರಿದಿದೆ.’

Please follow and like us:

Leave a Reply

Your email address will not be published. Required fields are marked *

Next Post

ಡಿಕೆ ಸಹೋದರರ ಶತಾಯುಷಿ ಅಜ್ಜಿ ನಿಂಗಮ್ಮ ನಿಧನ

Fri Dec 17 , 2021
ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಅವರ ಶತಾಯುಷಿ ಅಜ್ಜಿ ನಿಂಗಮ್ಮ ಅವರು ಶುಕ್ರವಾರ ಬೆಳಗಿನ ಜಾವ ನಿಧನರಾಗಿದ್ದಾರೆ. ನಿಂಗಮ್ಮ ಅವರಿಗೆ 106 ವರ್ಷ ವಯಸ್ಸಾಗಿದ್ದು, ಇಂದು ಬೆಳಗಿನ ಜಾವ ನಕಪುರದ ಹಾರೋಹಳ್ಳಿಯ ದಯಾನಂದಸಾಗರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆಂದು ತಿಳಿದುಬದಿದೆ. ನಿಂಗಮ್ಮ ಅವರ ಅಂತ್ಯಕ್ರಿಯೆಯನ್ನು ಕನಕಪುರದ ಸಾತನೂರಿನ ದೊಡ್ಡಾಲಹಳ್ಳಿಯಲ್ಲಿ ಇಂದು ಸಂಜೆ 4.30ಕ್ಕೆ ನಡೆಸಲಾಗುತ್ತಿದೆ. ಈ ನಡುವೆ ಬೆಳಗಾವಿ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರದ ಕಲಾಪದಲ್ಲಿ ಭಾಗವಹಿಸುವುದನ್ನು […]

Advertisement

Wordpress Social Share Plugin powered by Ultimatelysocial