ನವದೆಹಲಿ : ಭಾರತದಲ್ಲಿ ಸದ್ಯ 4G ನೆಟ್ವರ್ಕ್ ಸಂಪರ್ಕ ಸೇವೆ ಲಭ್ಯವಿದೆ. 2022ರಲ್ಲಿ ಭಾರತ ಒಂದು ಹೆಜ್ಜೆ ಮುಂದೆ ಹೋಗಲಿದೆ. ಭಾರತದಲ್ಲಿ ಮುಂದಿನ ವರ್ಷವೇ 5ಜಿ ಸಂಪರ್ಕ ಸೇವೆ ಆರಂಭವಾಗಲಿದೆ. 5ಜಿ ಸಂಪರ್ಕ ಸೇವೆಯಿಂದ ವೇಗದ ಇಂಟರ್ ನೆಟ್ ಸಂಪರ್ಕ ಸಾಧ್ಯವಾಗಲಿದೆ.
ದೇಶದ ಆರೋಗ್ಯ, ದೂರಸಂಪರ್ಕ, ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಟೆಲಿಕಾಂ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯೇ 5ಜಿ ಸಂಪರ್ಕ ಸೇವೆಯಿಂದ ಸಾಧ್ಯವಾಗುವ ನಿರೀಕ್ಷೆ ಇದೆ. ಆದರೆ, 5ಜಿ ಸಂಪರ್ಕ ಸೇವೆಯನ್ನು ಮೊದಲಿಗೆ ಎಲ್ಲೆಲ್ಲಿ ಆರಂಭಿಸಲಾಗುತ್ತದೆ ಎನ್ನುವುದರ ಮಾಹಿತಿಯನ್ನು ಈಗ ಕೇಂದ್ರ ಸರ್ಕಾರ ಅಧಿಕೃತವಾಗಿ ನೀಡಿದೆ.
ನಮ್ಮ ಭಾರತದಲ್ಲಿ ಮುಂದಿನ ವರ್ಷವೇ 5G ನೆಟ್ವರ್ಕ್ ಸಂಪರ್ಕ ಸೇವೆ ಆರಂಭವಾಗುತ್ತದೆ. ಆದರೆ, ದೇಶದ ಎಲ್ಲ ಭಾಗದಲ್ಲೂ ಏಕಕಾಲಕ್ಕೆ 5ಜಿ ನೆಟ್ವರ್ಕ್ ಸಂಪರ್ಕ ಸೇವೆ ಸಿಗಲ್ಲ. ಆಯ್ದ ಮಹಾನಗರಗಳಲ್ಲಿ ಪ್ರಾರಂಭದಲ್ಲಿ 5ಜಿ ನೆಟ್ವರ್ಕ್ ಸೇವೆ ನೀಡಲಾಗುತ್ತದೆ. ಗುರುಗ್ರಾಂ, ಬೆಂಗಳೂರು, ಕೊಲ್ಕತ್ತಾ, ಮುಂಬೈ, ದೆಹಲಿ, ಅಹಮದಾಬಾದ್, ಹೈದರಾಬಾದ್ ಮತ್ತು ಪುಣೆ ಸೇರಿದಂತೆ ಮಹಾನಗರಗಳು ಮತ್ತು ದೊಡ್ಡ ನಗರಗಳು ಮುಂದಿನ ವರ್ಷ 5G ಸೇವೆಗಳನ್ನು ಪಡೆಯುವ ಮೊದಲ ಸ್ಥಳಗಳಾಗಿವೆ ಎಂದು ದೂರಸಂಪರ್ಕ ಇಲಾಖೆ (DoT) ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: