ಮುಂಬೈ: ಹೃತಿಕ್ ರೋಷನ್ ಅವರ ಮಾಜಿ ಪತ್ನಿ ಮತ್ತು ಇಂಟೀರಿಯರ್ ಡಿಸೈನರ್ ಸುಸೇನ್ ಖಾನ್ ಅವರು ಕೋವಿಡ್ -19 ಸೋಂಕಿಗೆ ಒಳಗಾಗಿದ್ದಾರೆ. ಮಂಗಳವಾರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಷಯವನ್ನು ಅವರು ತಿಳಿಸಿದ್ದಾರೆ.
ಎರಡು ವರ್ಷ ಕೋವಿಡ್ ನಿಂದ ತಪ್ಪಿಸಿಕೊಂಡ ನಂತರ ಇದೀಗ ಮೂರನೇ ವರ್ಷ 2022ರಲ್ಲಿ ಒಮಿಕ್ರಾನ್ ನನ್ನ ಇಮ್ಯೂನಿ ವ್ಯವಸ್ಥೆಯಲ್ಲಿ ನುಸುಳಿದೆ.
ಕಳೆದ ರಾತ್ರಿ ಪಾಸಿಟಿವ್ ದೃಢಪಟ್ಟಿದೆ. ದಯವಿಟ್ಟು ಎಲ್ಲರೂ ಸುರಕ್ಷಿತರಾಗಿರಿ ಮತ್ತು ಕಾಳಜಿ ವಹಿಸಿ ಎಂದು ಅವರು ಬರೆದುಕೊಂಡಿದ್ದಾರೆ.
ಈ ಸುದ್ದಿ ತಿಳಿಯುತ್ತಿದ್ದಂತೆ ಸುಸೇನ್ ಖಾನ್ ಬೇಗ ಗುಣಮುಖರಾಗುವಂತೆ ಬಾಲಿವುಡ್ ಚಿತ್ರ ನಟ, ನಟಿಯರು ಆರೈಕೆಯ ಮಾತುಗಳನ್ನಾಡಿದ್ದಾರೆ. ಶೀಘ್ರ ಗುಣಮುಖರಾಗಿ ಎಂದು ನಟಿ ಬಿಪಾಶ ಬಸು ಟ್ವೀಟ್ ಮಾಡಿದ್ದಾರೆ. ಆರ್ಸ್ಲಾನ್ ಗೋನಿ ಜೊತೆಗಿನ ಸಂಬಂಧದಿಂದಾಗಿ ಇತ್ತೀಚಿಗೆ ಸುಸೇನ್ ಖಾನ್ ಸುದ್ದಿಯಾಗಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada