BOLLYWOOD:ಹೃತಿಕ್ ರೋಷನ್ ಮಾಜಿ ಪತ್ನಿ ಸುಸೇನ್ ಖಾನ್‌ಗೆ ಕೋವಿಡ್-19 ಪಾಸಿಟಿವ್;

ಮುಂಬೈ: ಹೃತಿಕ್ ರೋಷನ್ ಅವರ ಮಾಜಿ ಪತ್ನಿ ಮತ್ತು ಇಂಟೀರಿಯರ್ ಡಿಸೈನರ್ ಸುಸೇನ್ ಖಾನ್ ಅವರು ಕೋವಿಡ್ -19 ಸೋಂಕಿಗೆ ಒಳಗಾಗಿದ್ದಾರೆ. ಮಂಗಳವಾರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಷಯವನ್ನು ಅವರು ತಿಳಿಸಿದ್ದಾರೆ.

ಎರಡು ವರ್ಷ ಕೋವಿಡ್ ನಿಂದ ತಪ್ಪಿಸಿಕೊಂಡ ನಂತರ ಇದೀಗ ಮೂರನೇ ವರ್ಷ 2022ರಲ್ಲಿ ಒಮಿಕ್ರಾನ್ ನನ್ನ ಇಮ್ಯೂನಿ ವ್ಯವಸ್ಥೆಯಲ್ಲಿ ನುಸುಳಿದೆ.

ಕಳೆದ ರಾತ್ರಿ ಪಾಸಿಟಿವ್ ದೃಢಪಟ್ಟಿದೆ. ದಯವಿಟ್ಟು ಎಲ್ಲರೂ ಸುರಕ್ಷಿತರಾಗಿರಿ ಮತ್ತು ಕಾಳಜಿ ವಹಿಸಿ ಎಂದು ಅವರು ಬರೆದುಕೊಂಡಿದ್ದಾರೆ.

ಈ ಸುದ್ದಿ ತಿಳಿಯುತ್ತಿದ್ದಂತೆ ಸುಸೇನ್ ಖಾನ್ ಬೇಗ ಗುಣಮುಖರಾಗುವಂತೆ ಬಾಲಿವುಡ್ ಚಿತ್ರ ನಟ, ನಟಿಯರು ಆರೈಕೆಯ ಮಾತುಗಳನ್ನಾಡಿದ್ದಾರೆ. ಶೀಘ್ರ ಗುಣಮುಖರಾಗಿ ಎಂದು ನಟಿ ಬಿಪಾಶ ಬಸು ಟ್ವೀಟ್ ಮಾಡಿದ್ದಾರೆ. ಆರ್ಸ್ಲಾನ್ ಗೋನಿ ಜೊತೆಗಿನ ಸಂಬಂಧದಿಂದಾಗಿ ಇತ್ತೀಚಿಗೆ ಸುಸೇನ್ ಖಾನ್ ಸುದ್ದಿಯಾಗಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

SANDALWOOD:ಡಿ ಬಾಸ್ ಅಮ್ಮ ಮೀನಾ ದರ್ಶನ್‌ರನ್ನು ಅಪ್ಪು ಎಂದು ಕರೆಯುವುದೇಕೆ?

Tue Jan 11 , 2022
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಇಬ್ಬರೂ ಬಾಲ್ಯದಿಂದಲೂ ಸ್ನೇಹಿತರು. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಅಭಿಮಾನ, ಪ್ರೀತಿ. ಅದಕ್ಕೆ ಅಪ್ಪು ಅಗಲಿದ ಸುದ್ದಿ ತಿಳಿದ ಕೂಡಲೇ ದರ್ಶನ್ ಕ್ರಾಂತಿ ಚಿತ್ರದ ಚಿತ್ರೀಕರಣ ತಕ್ಷಣ ನಿಲ್ಲಿಸಿ, ಆಸ್ಪತ್ರೆಗೆ ತೆರೆಳಿದ್ದರು. ಹೆಚ್ಚು ಕಡಿಮೆ ಒಂದು ತಿಂಗಳ ಕಾಲ ಚಿತ್ರೀಕರಣಕ್ಕೆ ಬ್ರೇಕ್ ಹಾಕಿದ್ದರು. ಆ ಮಟ್ಟಿಗೆ ಇಬ್ಬರಲ್ಲೂ ಸ್ನೇಹ ಪ್ರೀತಿ ಇತ್ತು. ಪುನೀತ್ ರಾಜ್‌ಕುಮಾರ್ ಅವರನ್ನುಪ್ರೀತಿಯಿಂದ ಅಪ್ಪು ಅಂತ ಕರೆಯುತ್ತಾರೆ ಎನ್ನುವುದು […]

Advertisement

Wordpress Social Share Plugin powered by Ultimatelysocial