ಪಾಟ್ನಾ: ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಸೇರ್ಪಡೆಗೊಳಿಸಲು ಶಿಕ್ಷಕರಿಗೆ ಸೂಚನೆ ನೀಡುವುದು ಸಾಮಾನ್ಯ. ಏಕೆಂದರೆ, ಸ್ಥಳೀಯವಾಗಿ ಶಿಕ್ಷಕರು ಪರಿಚಯಸ್ಥರೇ ಆಗಿರುವುದರಿಂದ ಅವರಿಗೆ ಅದು ಸುಲಭವೂ ಆಗಿರುತ್ತದೆ. ಆದರೆ, ಬಿಹಾರದಲ್ಲಿ ಮದ್ಯ ಸೇವನೆ ಮತ್ತು ಮದ್ಯ ಪೂರೈಕೆಯನ್ನು ಯಾರು ಮಾಡುತ್ತಾರೆ ಎಂಬುದನ್ನು ಪತ್ತೆ ಹಚ್ಚುವ “ಹೊಸ ಕೆಲಸ’ ಶಿಕ್ಷಕರ ಪಾಲಿಗೆ ಸಿಕ್ಕಿದೆ.ಈ ಬಗ್ಗೆ ರಾಜ್ಯ ಶಿಕ್ಷಣ ಇಲಾಖೆ ಆದೇಶವನ್ನೂ ಹೊರಡಿಸಿದೆ.ಆದೇಶದ ಪ್ರಕಾರ ಬಿಹಾರ ಸರ್ಕಾರದ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂಜಯ ಕುಮಾರ್ ಹೊರಡಿಸಿದ ಆದೇಶದ ಪ್ರಕಾರ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಮದ್ಯ ಸೇವನೆ ಮಾಡುವವರು ಮತ್ತು ಮದ್ಯ ಪೂರೈಕೆ ಮಾಡುವವರ ವಿವರ ಸಂಗ್ರಹಿಸಿ, ಅಬಕಾರಿ ಇಲಾಖೆಗೆ ಸಲ್ಲಿಸಬೇಕಾಗುತ್ತದೆ. ಅದಕ್ಕಾಗಿ ಎರಡು ವಿಶೇಷ ಮೊಬೈಲ್ ಸಂಖ್ಯೆ ಮತ್ತು ಟೋಲ್ ಫ್ರೀ ನಂಬರ್ಗಳನ್ನು ಸಿದ್ಧಪಡಿಸಲಾಗಿದೆ.ಶಿಕ್ಷಕರಲ್ಲದೆ, ಶಾಲೆಯ ಇತರ ಸಿಬ್ಬಂದಿ ಮತ್ತು ಅದರ ಮೇಲುಸ್ತುವಾರಿ ಸಮಿತಿ ಸದಸ್ಯರಿಗೂ ಇಂಥವರನ್ನು ಕಡ್ಡಾಯವಾಗಿ ಪತ್ತೆ ಹಚ್ಚಿ ಮಾಹಿತಿ ನೀಡುವ ಹೊಣೆಗಾರಿಕೆ ವಹಿಸಲಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada