ಚಿಕ್ಕೋಡಿ: ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕೊರೊನಾ ವಕ್ಕರಿಸಿದ್ದು ಶಾಲೆಯನ್ನು ಮೂರು ದಿನ ಸಿಲ್ ಡೌನ್ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದ ಬಿ. ಬಿ. ಇಮ್ಮಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕರೋನಾ ಸ್ಪೋಟಗೊಂಡಿದ್ದು. 30 ವಿದ್ಯಾರ್ಥಿಗಳು 3 ಜನ ಶಿಕ್ಷಕರು ಹಾಗೂ ಒಬ್ಬರು ಅಡುಗೆ ಸಿಬ್ಬಂದಿಗೆ ಕರೋನಾ ಪಾಸಿಟಿವ್ ಆಗಿದೆ. ಶಾಲೆಯಲ್ಲಿ 351 ವಿದ್ಯಾರ್ಥಿಗಳು ಓದುತ್ತಿದ್ದು. ಅದರಲ್ಲಿ 65 ವಿದ್ಯಾರ್ಥಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ 34 ಪಾಸಿಟಿವ್ ರಿಪೋರ್ಟ್ ಬಂದಿದೆ. ಅನಂತಪುರ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳ ತಂಡ ಹಾಗೂ ಬಳ್ಳಿಗೇರಿ ಗ್ರಾಮ ಪಂಚಾಯಿತಿ PDO ಅವರು ಶಾಲೆಗೆ ಭೇಟಿ ನೀಡಿದ್ದು ಶಾಲೆಯನ್ನು 3 ದಿನ ಸೀಲ್ ಡೌನ್ ಮಾಡಲಾಗಿದ್ದು. ಸ್ಯಾನಿಟೈಸರ್ ಮಾಡಲು ಸೂಚಿಸಲಾಗಿದೆ.ಗಡಿ ಭಾಗದ ಜತ್ತ ತಾಲೂಕಿನ ಗ್ರಾಮಗಳಿಗೆ ಹೊಂದಿಕೊಂಡಿರುವ ಗ್ರಾಮ ಇದಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada