2025ರಿಂದ ಟೈಪ್ ಸಿ ಪೋರ್ಟ್‌ ಕಡ್ಡಾಯ, ಎಲ್ಲಾ ಗ್ಯಾಡ್ಜೆಟ್ಸ್‌ಗೆ ಒಂದೇ ಚಾರ್ಜರ್‌.

ಹೊಸದಿಲ್ಲಿ: ನಿಮ್ಮ ಮೊಬೈಲ್‌ಗೊಂದು, ಟ್ಯಾಬ್‌ಗೊಂದು, ಲ್ಯಾಪ್‌ಟಾಪ್‌ಗೊಂದು – ಹೀಗೆ ನಾನಾ ರೀತಿಯ ಚಾರ್ಜರ್‌ಗಳನ್ನು ಬಳಸಿ ಬೇಸತ್ತಿರುವಿರಾ? 3-4 ಚಾರ್ಜರ್‌ಗಳನ್ನು ಬಳಸಲು ಕಷ್ಟವಾಗುತ್ತಿದೆಯೇ? ಇನ್ನೆರಡು ವರ್ಷಗಳಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಲಿದೆ.ಯುಎಸ್‌ಬಿ ಸಿ-ಟೈಪ್‌ ಚಾರ್ಜಿಂಗ್‌ ಪೋರ್ಟ್‌ ಬಳಕೆಯನ್ನು 2025ರ ಮಾರ್ಚ್‌ನಿಂದ ಕೇಂದ್ರ ಸರಕಾರವು ಕಡ್ಡಾಯ ಮಾಡಲಿದ್ದು, ಒಂದೇ ರೀತಿಯ ಚಾರ್ಜರ್‌ ಬಳಸಿ ಎಲ್ಲ ಸಾಧನಗಳನ್ನೂ ಚಾರ್ಜ್‌ ಮಾಡಲು ಸಾಧ್ಯವಾಗಲಿದೆ. ಭಾರತದಲ್ಲಿ ಯುಎಸ್‌ಬಿ ಟೈಪ್‌-ಸಿ ಪೋರ್ಟ್‌ ಹೊಂದಿರುವ ಎಲೆಕ್ಟ್ರಾನಿಕ್ಸ್‌ ಸಾಧನಗಳನ್ನೇ ಮಾರಾಟ ಮಾಡುವಂತೆ ಉತ್ಪಾದಕ ಕಂಪನಿಗಳಿಗೆ ಸೂಚಿಸಲಾಗಿದ್ದು, 2025ರ ಮಾರ್ಚ್ ಗಡುವನ್ನು ನೀಡಲಾಗಿದೆ.ಏಕರೂಪದ ಚಾರ್ಜರ್‌ ಬಳಕೆಗೆ ತಕ್ಕನಾಗಿ ಮೊಬೈಲ್‌, ಟ್ಯಾಬ್‌ ಸೇರಿದಂತೆ ಎಲೆಕ್ಟ್ರಾನಿಕ್ಸ್‌ ಸಾಧನಗಳನ್ನು ಅಭಿವೃದ್ಧಿ ಪಡಿಸಬೇಕು ಎನ್ನುವ ಬೇಡಿಕೆ ಬಹಳ ವರ್ಷಗಳಿಂದ ಇದೆ. ಈ ವಿಷಯದಲ್ಲಿ ಐರೋಪ್ಯ ಒಕ್ಕೂಟದ ಕಾಲಮಿತಿಗೆ ಅನುಗುಣವಾಗಿ ಯುಎಸ್‌ಬಿ ಟೈಪ್‌-ಸಿ ಪೋರ್ಟ್‌ಗಳನ್ನು ಕಡ್ಡಾಯಗೊಳಿಸಲು ಬ್ಯೂರೋ ಆಫ್‌ ಇಂಡಿಯನ್‌ ಸ್ಟ್ಯಾಂಡರ್ಡ್‌ (ಬಿಐಎಸ್‌) ಮುಂದಾಗಿದೆ. ಇದನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಸರಕಾರವು ಕಾರ್ಯ ಪ್ರವೃತ್ತವಾಗಿದೆ.2025ರ ಮಾರ್ಚ್ ಗಡುವಿನೊಳಗೆ ಎಲ್ಲ ಸ್ಮಾರ್ಟ್‌ಫೋನ್‌ಗಳಿಗೆ ಯುಎಸ್‌ಬಿ ಟೈಪ್‌-ಸಿ ಪೋರ್ಟ್‌ ಕಡ್ಡಾಯವಾಗಲಿದೆ. ಲ್ಯಾಪ್‌ಟಾಪ್‌ ಉತ್ಪಾದಕರಿಗೆ ಅಗತ್ಯ ಬದಲಾವಣೆಗೆ 2026ರ ತನಕ ಗಡುವು ನೀಡಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಆಯ್ಕೆದಾರರಿಂದ ಮತ್ತೊಮ್ಮೆ ಪೃಥ್ವಿ ಶಾ ಕಡೆಗಣನೆ, ಭಾವನಾತ್ಮಕ ವಿಡಿಯೋ ಹಂಚಿಕೊಂಡ ಕ್ರಿಕೆಟಿಗ

Wed Dec 28 , 2022
  ಪ್ರತಿ ಬಾರಿ ಯಾವುದಾದರೂ ದ್ವಿಪಕ್ಷೀಯ ಸರಣಿಗೆ ಅಥವಾ ಪ್ರಮುಖ ಟೂರ್ನಿಗಳಿಗೆ ಬಿಸಿಸಿಐ ತಂಡವನ್ನು ಪ್ರಕಟಿಸಿದಾಗ ಒಂದಿಲ್ಲೊಂದು ವಿವಾದ ಆಗುತ್ತಿದೆ. ಹಲವು ಪ್ರತಿಭಾವಂತ ಕ್ರಿಕೆಟಿಗರನ್ನು ಕಡೆಗಣಿಸಲಾಗಿದೆಯೆಂದೊ ಅಥವಾ ಫಾರ್ಮ್‌ನಲ್ಲಿ ಇಲ್ಲದ ಆಟಗಾರರಿಗೆ ಮಣೆ ಹಾಕಲಾಗಿದೆಯೆಂದು ಆಯ್ಕೆದಾರರನ್ನು ಟೀಕಿಸಲಾಗುತ್ತದೆ.ಶ್ರೀಲಂಕಾ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಟಿ20 ತಂಡಕ್ಕೆ ಹಿರಿಯರಿಗೆ ವಿಶ್ರಾಂತಿ ನೀಡಿ ಯುವ ಕ್ರಿಕೆಟಿಗರಿಗೆ ಅವಕಾಶ ನೀಡಲಾಗಿದೆ. ಏಕದಿನ ತಂಡದಲ್ಲಿ ಹೆಚ್ಚಿನ ಬದಲಾವಣೆ ಮಾಡಿಲ್ಲ. ಈ […]

Advertisement

Wordpress Social Share Plugin powered by Ultimatelysocial