ಕೆಎನ್ಎನ್ಡಿಜಿಟಲ್ಡೆಸ್ಕ್: ಚಳಿ ದಿನೇದಿನೆ ಜಾಸ್ತಿಯಾಗುತ್ತಿದೆ. ಬೆಚ್ಚಗಿನ ಊಟ, ಬೆಚ್ಚಗಿ ಹಾಸಿಗೆ, ಬೆಚ್ಚಗಿನ ಉಡುಪು, ಬೆಚ್ಚಗಿನ ಸ್ನಾನವನ್ನು ದೇಹ ಬಯಸುತ್ತದೆ. ಆದರೆ ತುಂಬಾ ಬಿಸಿ ನೀರಿನೊಂದಿಗೆ ಸ್ನಾನ ಮಾಡಿದರೆ ಚರ್ಮಕ್ಕೆ ತುಂಬಾ ಹಾನಿಯಾಗುತ್ತದೆ.ಈ ಕುರಿತಾಗಿ ನೀವು ಇನ್ನಾದರು ಎಚ್ಚೆತ್ತುಕೊಳ್ಳಿ.ತುಂಬಾ ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದರಿಂದ ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದಷ್ಟು ಹೆಚ್ಚು ಬಿಸಿ ನೀರನ್ನು ಬಳಸದೇ ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದು ಒಳ್ಳೆಯದು. ಇದರಿಂದ ಚರ್ಮಕ್ಕೆ ಯಾವುದೆ ತೊಂದರೆ ಇಲ್ಲ. ಚಳಿಗಾಲದಲ್ಲಿ ಬಿಸಿ ಬಿಸಿ ನೀರು ಸ್ನಾನ ಮಾಡಬೇಕೆನಿಸುತ್ತದೆ. ಹೀಗೆ ಮಾಡಿದರೆ ಚರ್ಮ ಒಣಗಿದಂತಾಗಿ, ಚರ್ಮದ ಬಣ್ಣ ಕೂಡ ಕಪ್ಪಾಗಲು ಶುರುವಾಗುತ್ತದೆ.ಚಳಿಗಾಲದಲ್ಲಿ ಒಣಗಾಳಿ ಹೆಚ್ಚಿರುತ್ತದೆ. ಈ ಒಣ ವಾತಾವರಣದಿಂದ ಚರ್ಮ ಒಡೆಯುತ್ತದೆ. ಒಣಗಿದ ಅಥವಾ ಒಡೆದ ಚರ್ಮವಿದ್ದರೆ ಕೆಲವರಿಗೆ ತುರಿಕೆ ಗಾಯಗಳಾಗುತ್ತವೆ. ಆದರೆ ಇದನ್ನು ಹಾಗೆ ಬಿಡಬೇಡಿ. ಕೈ ಕಾಲುಗಳಿಗೆ ತೆಂಗಿನ ಎಣ್ಣೆ ಅಥವಾ ಆಲಿವ್ ಆಯಿಲ್ ಹಚ್ಚಿಕೊಳ್ಳಿ. ಅಥವಾ ಬೆಚ್ಚಗಿನ ನೀರಿಗೆ ಒಂದು ಚಮಚ ಆಲಿವ್ ಆಯಿಲ್ ಬೆರಸಿ ಸ್ನಾನ ಮಾಡಿ. ಇದರಿಂದಾಗಿ ಚರ್ಮಕ್ಕೆ ಜಿಡ್ಡಿನಾಂಶ ಸಿಗುತ್ತದೆ.ಬಿಸಿ ಬಿಸಿ ನೀರು ಸ್ನಾನ ಮಾಡಿದರೆ ಮೈಮೇಲೆ ಕಲೆಗಳು ಉಂಟಾಗುವ ಸಾಧ್ಯತೆ ಕೂಡ ಹೆಚ್ಚಿರುತ್ತದೆ. ಹಾಗಾಗಿ ಬೆಚ್ಚಗಿನ ನೀರಿನಲ್ಲಿ ದಿನವೂ ಸ್ನಾನ ಮಾಡಿ ತುಂಬಾ ಬಿಸಿ ನೀರಿನಲ್ಲಿ ತಲೆ ಸ್ನಾನ ಮಾಡಿದರೆ ಕೂದಲು ತುಂಬಾ ಉದುರುತ್ತವೆ. ಕೂದಲು ತನ್ನ ಸತ್ವವನ್ನೂ ಸಹ ಕಳೆದುಕೊಳ್ಳುತ್ತದೆ. ಹಾಗಾಗಿ ತಲೆ ಸ್ನಾನ ಮಾಡುವಾಗ ತುಂಬಾ ಬಿಸಿ ನೀರು ಬಿಲ್ಕುಲ್ ಬೇಡ. ತಲೆ ಸ್ನಾನವಾದ ಮೇಲೆ ಬಿಸಿಲಿಗೆ ಮೈವೊಡ್ಡಿ. ಇದರಿಂದ ವಿಟಮಿನ್ ಡಿ ಸಿಗುತ್ತದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada