ಸಿದ್ದಾಪುರ ಠಾಣಾ ವ್ಯಾಪ್ತಿಯಲ್ಲಿ ಮೂಕ ಜೀವಿ ನಾಯಿಯ ಮೇಲೆ ಕಾರು ಹತ್ತಿಸಿದ ಪ್ರಕರಣ ಕಣ್ಮುಂದೆ ಇರುವಾಗಲೇ, ಮತ್ತೊಮ್ಮೆ ಅಂತದ್ದೇ ಪ್ರಕರಣ ಸಿಲಿಕಾನ್ ಸಿಟಿಯಲ್ಲಿ ನಡೆದಿದ.ರಸ್ತೆ ಮೇಲಿದ್ದ ಬೀದಿ ನಾಯಿಯ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದ ಮನಕಲಕುವ ಘಟನೆಯೊಂದು ನಡೆದಿದೆ, ಫೆ.೨ರಂದು ಕಾಕ್ಸ್ ಟೌನ್ನ ಮೆಕ್ ಫೆರ್ಸನ್ ರಸ್ತೆಯಲ್ಲಿ ನಡೆದಿರುವ ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಘಟನೆ ನಂತರ ಕನಿಷ್ಠ ಪಕ್ಷ ಕಾರ ನಿಲ್ಲಿಸಿ ಪರಿಶೀಲಿಸದೇ ಚಾಲಕ ಹೋಗಿರುವುದಕ್ಕೆ ಹಾಗೂ ಆತನ ಅಮಾನವೀಯತೆ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ, ಗಾಯಗೊಂಡು ಒದ್ದಾಡುತ್ತಿದ್ದ ನಾಯಿಯನ್ನ ಸ್ಥಳಿಯರು ರಕ್ಷಿಸಿದ್ದಾರೆ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada