ತುಣುಕು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

 

 

 

ಮುಂಬೈ: ಮದುವೆ ಆಗಲು ಯಾರು ಹೆಣ್ಣು ಕೊಡುತ್ತಿಲ್ಲ ಅಂತಾ ಯುವಕನೊಬ್ಬ ಶಾಸಕರಿಗೆ ಕರೆ ಮಾಡಿ ಅವಲತ್ತುಕೊಂಡಿರುವ ಘಟನೆ ಮಹಾರಾಷ್ಟ್ರದ ಔರಂಗಬಾದ್​ನಲ್ಲಿ ನಡೆದಿದೆ. ಹೆಣ್ಣು ಹುಡುಕಿಕೊಡಿ ಎಂಬ ಯುವಕನ ಮನವಿಗೆ ಶಾಸಕರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಔರಂಗಬಾದ್​ನ ರತನ್​ಪುರ್​ ಮೂಲದ ಯುವಕ ತಮ್ಮ ಕ್ಷೇತ್ರದ ಶಾಸಕರಿಗೆ ಕರೆ ಮಾಡಿ, ಹೇಗಾದರೂ ಸರಿಯೇ ನನಗೊಂದು ಮದುವೆ ಮಾಡಿಸಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾನೆ. ಶಾಸಕ ಮತ್ತು ಯುವಕ ಮಾತನಾಡಿರುವ ಆಡಿಯೋ ತುಣುಕು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ನನ್ನ ಮನೆ ಸುಸ್ಥಿತಿಯಲ್ಲಿದೆ. ನಾನು 8 ರಿಂದ 9 ಎಕರೆ ಜಮೀನು ಹೊಂದಿದ್ದೇನೆ. ಆದರೆ, ಈವರೆಗೂ ನನಗೆ ಯಾರೂ ಕೂಡ ಹೆಣ್ಣು ಕೊಡುತ್ತಿಲ್ಲ. ನಾನು ಮದುವೆ ಆಗಲೇಬೇಕಿದೆ. ನಿಮ್ಮ ಜಿಲ್ಲೆಯಲ್ಲಿ ಯಾರಾದರೂ ಒಳ್ಳೆಯ ಹುಡುಗಿ ಇದ್ದರೆ ನೋಡಿ ಸರ್​ ಎಂದು ಶಿವಸೇನಾ ಶಾಸಕ ಉದಯ್​ ಸಿಂಗ್​ ರಜಪೂತ್​ ಅವರಿಗೆ ಮನವಿ ಮಾಡಿದ್ದಾನೆ. ಇದಕ್ಕೆ ಉತ್ತಮ ರೀತಿಯಲ್ಲಿ ಸ್ಪಂದಿಸಿರುವ ಶಾಸಕರು, ರೆಸ್ಯೂಮ್​ ಕಳುಹಿಸಿಕೊಡುವಂತೆ ಯುವಕನ ಬಳಿ ಕೇಳಿದ್ದಾರೆ. ಸದ್ಯ ಆಡಿಯೋ ಕ್ಲಿಪ್ ವೈರಲ್ ಆಗುತ್ತಿದೆ. ಹುಡುಗನಿಗೆ ಜಮೀನು ಇದ್ದರೂ ಹುಡುಗಿ ಸಿಗದೇ ಇರುವ ವಿಚಾರ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪತ್ನಿಯನ್ನು ನೋಡಿಕೊಳ್ಳಲು ಸಮರ್ಥವಾಗಿದ್ದರೂ ಹುಡುಗಿಯನ್ನು ನೀಡಲು ಜನರು ಏಕೆ ಸಿದ್ಧವಾಗಿಲ್ಲ? ಎಂಬ ಪ್ರಶ್ನೆ ಉದ್ಧವವಾಗಿದ್ದು, ಈ ಬಗ್ಗೆ ಜನರು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಇಂದಿಗೂ ಒಬ್ಬ ರೈತ ತನ್ನ ಮಗಳನ್ನು ರೈತನ ಮಗನಿಗೆ ಮದುವೆ ಮಾಡಲು ಬಯಸುವುದಿಲ್ಲ. ಬದಲಾಗಿ ರೈತನಿಗೂ ತನ್ನ ಮಗಳಿಗೆ ನಗರದಲ್ಲಿ ಕೆಲಸ ಮಾಡುವ ಯುವಕನ ಜೊತೆ ಮದುವೆ ಮಾಡಿಸುವ ಆಸೆ ಇದೆ ಎಂದು ನೆಟ್ಟಿಗರು ಕಾಮೆಂಟ್​ ಮೂಲಕ ತಿಳಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವೃಶ್ಚಿಕ ರಾಶಿ ಭವಿಷ್ಯ (Wednesday, January 11, 2023)

Wed Jan 11 , 2023
ನಿಮ್ಮ ನೀಡುವ ವರ್ತನೆ ಪರೋಕ್ಷವಾಗಿ ನಿಮಗೆ ಆಶೀರ್ವಾದವೇ ಆಗುತ್ತದೆ, ಏಕೆಂದರೆ ನೀವು ಅನುಮಾನ, ನಿರಾಸೆ, ವಿಶ್ವಾಸರಾಹಿತ್ಯ ಅಹಂಭಾವ ಮತ್ತು ಅಸೂಯೆಯಂಥ ಅನೇಕ ದುರ್ಗುಣಗಳಿಂದ ಮುಕ್ತಿ ಹೊಂದುವ ಸಾಧ್ಯತೆಗಳಿವೆ. ನಿಮ್ಮ ಹಳೆಯ ಯಾವುದೇ ರೋಗ ಇಂದು ನಿಮ್ಮನ್ನು ಕಾಡಬಹುದು. ಇದರ ಕಾರಣದಿಂದ ನೀವು ಆಸ್ಪತ್ರೆಗೂ ಹೋಗಬೇಕಾಗಬಹುದು ಮತ್ತು ನಿಮ್ಮ ಸಾಕಷ್ಟು ಹಣವು ಸಹ ಖರ್ಚು ಆಗಬಹುದು. ಕುಟುಂಬದ ಸದಸ್ಯರು ನಿಮ್ಮ ಜೀವನದಲ್ಲಿ ಒಂದು ವಿಶೇಷ ಸ್ಥಾನವನ್ನು ಹೊಂದಿರುತ್ತಾರೆ. ಇಂದು ನೀವು ಒಂದು […]

Advertisement

Wordpress Social Share Plugin powered by Ultimatelysocial