ಮಹೇಶ್ ಯೋಗಿ ಭಾರತೀಯ ಯೋಗಪದ್ಧತಿಯ ಮೂಲಕ ಧ್ಯಾನ ಕಲಿಸಿದವರಲ್ಲಿ ಪ್ರಮುಖರು.

ಮಹೇಶ್ ಯೋಗಿ ಪಾಶ್ಚಿಮಾತ್ಯರಿಗೆ ಭಾರತೀಯ ಯೋಗಪದ್ಧತಿಯ ಮೂಲಕ ಧ್ಯಾನ ಕಲಿಸಿದವರಲ್ಲಿ ಪ್ರಮುಖರು. ಮಹರ್ಷಿ ಮಹೇಶ್ ಯೋಗಿ ಅವರ ಯೋಗ ಪದ್ಧತಿ ಜಗತ್ತಿನಾದ್ಯಂತ ಹೆಸರುವಾಸಿಯಾಗಿದೆ.
ಮಹರ್ಷಿ ಮಹೇಶ್ ಯೋಗಿ ಅವರು ಹುಟ್ಟಿದ್ದು ಮಧ್ಯಪ್ರದೇಶದ ಜಬಲ್‌ಪುರನಲ್ಲಿ. ಇವರ ಜನ್ಮದಿನಾಂಕದ ಬಗ್ಗೆ ನಿಖರವಾದ ದಾಖಲೆಗಳಿಲ್ಲ. ಕೆಲವೊಂದು ಮೂಲಗಳ ಪ್ರಕಾರ 1911ರಿಂದ 1918ರ ಕಾಲಾವಧಿಯಲ್ಲಿ ಮಹರ್ಷಿಯವರು ಜನಿಸಿರಬಹುದೆಂದು ಊಹಿಸಲಾಗಿದೆ. ಕೆಲವು ಮೂಲಗಳ ಪ್ರಕಾರ ಅವರು 1918ರ ಜನವರಿ 12ರಂದು ಜನಿಸಿದರು.
ಮನಸ್ಸಿನ ನಿಯಂತ್ರಣ, ಏಕಾಗ್ರತೆ ಸಾಧಿಸುವ ಯೋಗ ಪದ್ಧತಿಯನ್ನು ಕಲಿಸಿ ಅದಕ್ಕೆ ವೈದ್ಯಕೀಯ ಸ್ಥಾನಮಾನ ತಂದುಕೊಟ್ಟ ಘನತೆ ಮಹೇಶ್ ಯೋಗಿ ಅವರಿಗೆ ಸಲ್ಲುತ್ತದೆ. 1939ರಲ್ಲಿ ಆದಿ ಶಂಕರಾಚಾರ್ಯ ತತ್ವಾನುಯಾಯಿಗಳಾದ ಸ್ವಾಮಿ ಬ್ರಹ್ಮಾನಂದ ಸರಸ್ವತಿ ಅವರ ಶಿಷ್ಯರಾಗಿದ್ದ ಮಹರ್ಷಿಯವರು ಕೆಲಕಾಲ ಹಿಮಾಲಯದಲ್ಲಿ ವಾಸವಾಗಿದ್ದರು. ಇವರ ಯೋಗ ಪದ್ಧತಿ Transcendental Meditation ಎಂದು ಸುಪ್ರಸಿದ್ಧ. ಮಹರ್ಷಿ ಯೋಗಿಯವರು 1955ರಿಂದ ಬೋಧಿಸುತ್ತಿದ್ದ ಈ ತರ್ಕಾತೀತ ಯೋಗರಹಸ್ಯವನ್ನು 1959ರಲ್ಲಿ ಅಮೆರಿಕದಲ್ಲೂ ಪರಿಚಯಿಸಿದರು. 1968ರಲ್ಲಿ ಭಾರತದ ಇವರ ಆಶ್ರಮಕ್ಕೆ ರಾಕ್ ಮತ್ತು ಪಾಪ್ ಗಾಯಕರು ಭೇಟಿ ಕೊಟ್ಟು ಇವರ ಶಿಷ್ಯರಾದ ಮೇಲೆ ಮಹೇಶ್ ಯೋಗಿ ಅವರಿಗೆ ಬೀಟಲ್ಸ್ ಗುರು ಎಂಬ ಪ್ರಖ್ಯಾತಿ ಬಂತು. ಮಾದಕ ವ್ಯಸನಗಳಿಗೆ ಬಲಿಯಾದ ರಾಕ್ ಗಾಯಕರಿಗೆ ಇವರ ಯೋಗ ಪದ್ಧತಿಯ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತು. ಹೀಗೆ ಮುಂದುವರಿದ ಅವರ ಯೋಗ ಚಳುವಳಿ ಜಗತ್ತಿನಾದ್ಯಂತ ಪ್ರಸಿದ್ಧವಾಯಿತು.
ವಿಶ್ವಾದ್ಯಂತ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿರುವ ಮಹರ್ಷಿಯವರು ಕಮಲದ ಭಂಗಿಯಲ್ಲಿ ಕುಳಿತು ಗಾಳಿಯಲ್ಲಿ ತೇಲುವ ಪ್ರಕ್ರಿಯೆ ಕುರಿತಂತೆ ಹಲವಾರು ದೇಶಗಳಲ್ಲಿ ಪ್ರಸಿದ್ಧಿಯಿದೆ. ಪುರಾತನವಾದ ಯೋಗ ಪದ್ಧತಿಗೆ ಜಾಗತಿಕ ಮನ್ನಣೆ ದೊರಕಿಸಿಕೊಟ್ಟ ಘನತೆ ಮಹರ್ಷಿ ಅವರಿಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಮರೀಶ್ ಪುರಿ ಚಿತ್ರರಂಗದ ಮಹಾನ್ ಪೋಷಕ ಕಲಾವಿದ

Fri Jan 13 , 2023
ಚಿತ್ರರಂಗದ ಮಹಾನ್ ಪೋಷಕ ಕಲಾವಿದ ಅಮರೀಶ್ ಪುರಿ ಈ ಲೋಕವನ್ನಗಲಿದ್ದು 2005ರ ಜನವರಿ 12ರಂದು. ಅಮರೀಶ್ ಪುರಿ ಅವರ ಅಜಾನುಬಾಹು ಬಾಹ್ಯರೂಪ, ವಿಶಿಷ್ಟ ಧ್ವನಿ, ಗಾಂಭೀರ್ಯದ ಆಳದಲ್ಲಿ ಅರಳುತ್ತಿದ್ದ ಯಾವುದೇ ಖಳ ಇಲ್ಲವೇ ಪೋಷಕತ್ವದ ಅಭಿನಯ ಇವೆಲ್ಲವೂ ಮರೆಯಲಾರದಂತಹವು. ಅವರ ರಂಗಭೂಮಿಯ ನಿಷ್ಠಾವಂತ ಕಾಯಕ ಅವರ ಚಿತ್ರರಂಗದ ಅಭಿನಯಕ್ಕೊಂದು ತೇಜಸ್ಸು ತಂದಿತ್ತು. ಸತ್ಯದೇವ್ ದುಬೈ ಮತ್ತು ಗಿರೀಶ್ ಕಾರ್ನಾಡರಂತಹ ರಂಗತಜ್ಞರೊಂದಿಗೆ ಅವರಿಗೆ ನಿರಂತರ ಸಂಪರ್ಕವಿತ್ತು. ಗಿರೀಶ್‌ ಕಾರ್ನಾಡರ ಯಯಾತಿ ಹಾಗೂ […]

Advertisement

Wordpress Social Share Plugin powered by Ultimatelysocial