ಅಪಹೃತ ಸಿಬ್ಬಂದಿsಗೆ ಹಿಂಸೆ

ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ದೂತಾವಾಸದ ಇಬ್ಬರು ಭದ್ರತಾ ಸಿಬಂದಿಯನ್ನು ಅಪಹರಿಸಿದ್ದ ಪಾಕ್ ಗುಪ್ತಚರ ಏಜೆನ್ಸಿ ಐಎಸ್‌ಐಯ ದುರುಳರು ಅವರಿಗೆ ಚಿತ್ರಹಿಂಸೆ ನೀಡಿರುವುದು ಈಗ ಬಹಿರಂಗವಾಗಿದೆ. ಈ ಬಗ್ಗೆ ಆಕ್ರೋಶಗೊಂಡಿರುವ ಭಾರತವು ಈ ಘಟನೆ ಯಿಂದ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದೆ. ಪಾಕ್ ಜತೆಗಿನ ರಾಜತಾಂತ್ರಿಕ ಸಂಬAಧ ಕಡಿದುಕೊಳ್ಳುವ ಗಂಭೀರ ಎಚ್ಚರಿಕೆ ರವಾನಿಸಿದೆ. ಭಾರತೀಯ ದೂತಾವಾಸದ ಇಬ್ಬರು ಭದ್ರತಾ ಸಿಬಂದಿಯಯನ್ನು ಹಿಂಬಾಲಿಸಿ ಅಪಹರಿಸಿದ್ದ ಐಎಸ್‌ಐಯ ಅಧಿಕಾರಿಗಳು ಇಡೀ ದಿನ ಅವರಿಗೆ ಚಿತ್ರಹಿಂಸೆ ನೀಡಿದ್ದಾರೆ. ಭಾರತೀಯ ದೂತಾವಾಸದ ಅಧಿಕಾರಿಗಳ ಕೆಲಸದ ವಿವರ ಕಲೆ ಹಾಕಲು ಪ್ರಯತ್ನಿಸಿ ರಾಡ್‌ನಿಂದ ಥಳಿಸಿದ್ದಾರೆ. ಕುಡಿಯಲು ಕೊಳಚೆ ನೀರನ್ನು ನೀಡಿದ್ದಾರೆ. ಸಿಬಂದಿಯ ದೇಹದಲ್ಲಿ ಗಾಯಗಳುಂಟಾದ ಬಳಿಕ ಮುಖ ಮರೆಸಿಕೊಳ್ಳಲು ಅಪಘಾತದ ಕಥೆ ಕಟ್ಟಿದ್ದಾರೆ ಎಂದು ಕೆಲವು ಪಾಕ್ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.ಭಾರತ ಈ ಮಾಹಿತಿ ಬಹಿರಂಗಗೊಳ್ಳುತ್ತಲೇ ಕ್ರುದ್ಧವಾಗಿರುವ ಭಾರತವು, ಈ ಘಟನೆ ಯಿಂದ ಒಪ್ಪಂದದ ಸ್ಪಷ್ಟ ಉಲ್ಲಂಘನೆ ಎಂದಿದೆ. ಭಾರತೀಯ ರಾಜತಾಂತ್ರಿಕ ಅಧಿಕಾರಿಗಳ ರಕ್ಷಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದರೆ ಪಾಕ್ ಜತೆಗಿನ ರಾಜತಾಂತ್ರಿಕ ಸಂಬAಧವನ್ನೇ ಕಡಿದುಕೊಳ್ಳಬೇಕಾದೀತು ಎಂದು ಎಚ್ಚರಿಸಿದೆ.

Please follow and like us:

Leave a Reply

Your email address will not be published. Required fields are marked *

Next Post

ಬಿಡಿಎ ಕಾರ್ನರ್ ಸೈಟ್ ಗಳ ಇ-ಹರಾಜು

Thu Jun 18 , 2020
ಕೋವಿಡ್‌-19 ಹಿನ್ನೆಲೆಯಲ್ಲಿ ನಾನಾ ಉದ್ಯಮಗಳು ಸೊರಗಿವೆ, ಆದರೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೂ ಜೂನ್ 20 ರಿಂದ ಜುಲೈ 7ರವರೆಗೆ 205 ಕಾರ್ನರ್ ಸೈಟ್ ಗಳ ಇ-ಹರಾಜು ನಡೆಯಲಿದೆ ಎಂದು ಬಿಡಿಎ ಆಯುಕ್ತ ಎಚ್ ಆರ್ ಮಹಾದೇವ್ ಹೇಳಿದ್ದಾರೆ, ಈ ಸಂಬಂಧ ಕುರಿತು ಇಂದು ಅಧಿಸೂಚನೆ ಹೊರಡಿಸಲಾಗುತ್ತದೆ. ಪ್ರಾಧಿಕಾರ ನಿರ್ಮಿಸಿರುವ ಬನಶಂಕರಿ ಲೇಔಟ್‌, ಸರ್‌ ಎಂ. ವಿಶ್ವೇಶ್ವರಯ್ಯ ಲೇಔಟ್‌, ಎಚ್‌ಎಸ್‌ಆರ್‌ ಲೇಔಟ್‌ ಸೇರಿದಂತೆ ನಾನಾ ಬಡಾವಣೆಗಳಲ್ಲಿರುವ ಒಟ್ಟು 205 ಮೂಲೆ ನಿವೇಶನಗಳನ್ನು […]

Advertisement

Wordpress Social Share Plugin powered by Ultimatelysocial