ನೀಲೋಗಲ್: ಹಾಡುಹಗಲೆ ಸೈನಿಕನ ತಾಯಿಯ ಕೊಲೆ,ಶವವಿಟ್ಟು ಪ್ರತಿಭಟನೆ

 

 

ರಾಯಚೂರು ಜಿಲ್ಲೆಯ ಲಿಂಗಸಗೂರು ಗಟಾರದ ನೀರು ಬಿಡುವ ವಿಷಯಕ್ಕೆ ಪ್ರಾರಂಭವಾದ ಜಗಳದಲ್ಲಿ ಹಾಡುಹಗಲೆ ಬಿಜೆಪಿಯ ಮುಖಂಡ ಹಾಗೂ ಅವರ ಗುಂಪಿನಿಂದ ಸೈನಿಕನ ತಾಯಿಯ ಕೊಲೆಯಾಗಿದ್ದು ಶವವನ್ನು ಮುಖಂಡನ ಮನೆಯ ಮುಂದೆ ಇಟ್ಟು ನ್ಯಾಯ ದೊರೆಯಬೇಕೆಂದು ಒತ್ತಾಯಿಸಿ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ

ತಾಲೂಕಿನ ನಿಲೋಗಲ್ ಗ್ರಾಮದಲ್ಲಿ ಶರಣಪ್ಪಗೌಡ ಎನ್ನುವ ಬಿಜೆಪಿ ಮುಖಂಡನು ತನ್ನ ಮನೆಯಮುಂದಿನ ಗಟಾರದ ನೀರಿನ ವಿಷಯಕ್ಕೆ ಜಗಳ ಪ್ರಾರಂಭವಾಗಿ ಜಗಳದಲ್ಲಿ ಸೈನಿಕ ಅಮರೇಶ ತಂದೆ ನಿಂಗಪ್ಪನಿಗೆ ಮತ್ತು ಆತನ ಕುಟುಂಬಸ್ಥರಿಗೂ ಬಿಜೆಪಿ ಮುಖಂಡ ಹಾಗೂ ಆತನ ಅಕ್ರಮ ಗುಂಪು ಸೇರಿಕೊಂಡು ಹೊಡೆದಿದ್ದು ಜಗಳದಲ್ಲಿ ಅಡ್ಡಬಂದ ಸೈನಿಕನ ತಾಯಿ ಈರಮ್ಮ ಗಂ ನಿಂಗಪ್ಪ ೮೦ ವರ್ಷ ಎನ್ನುವಾಕೆಗೆ ಬಡಿದು ನೂಕಾಟ ತಳ್ಳಾಟ ತುಳಿಯುವುದು ಮಾಡಿದಾಗ ಮುದುಕಿಯ ಕೊಲೆಯಾಗಿದೆ ಎಂದು ಮುದುಕಿಯ ಮೊಮ್ಮಗ ಅಮರೇಶ ಹೇಳುತ್ತಿದ್ದಾನೆ
ಅಲ್ಲದೆ ಹೊಡೆಯುವುದು ಬಡಿಯುವುದು ಮಾಡಿದಾಗ ಸೈನಿಕನ ಕುಟುಂಬವು ಕೈ ಮುಗಿದರು ಗೌಡನ ಅಕ್ರಮ ಗುಂಪು ಮನೆಗೆ ನುಗ್ಗಿ ಸೈನಿಕನ ತಾಯಿಯನ್ನು ಕೊಲೆಮಾಡಲಾಗಿದೆ ಎನ್ನಲಾಗುತ್ತಿದ್ದು ಕೂಡಲೇ ಕುಟುಂಬಸ್ಥರು ಕೊಲೆಯಾದ ಮುದುಕಿಯ ಶವವನ್ನು ಶರಣಪ್ಪಗೌಡನ ಮನೆಯ ಮುಂದೆ ಇಟ್ಟು ಪ್ರತಿಭಟನೆ ನಡೆಸಿ ನಮಗೆ ನ್ಯಾಯದೊರಕಿಸಿಕೊಡಬೇಕೆಂದು ಒತ್ತಾಯಿಸುತ್ತಿದ್ದಾರೆ

ವಿಷಯ ತಿಳಿದ ತಕ್ಷಣ ಹಟ್ಟಿ‌ ಪೋಲಿಸರು ಸ್ಥಳಕ್ಕೆ ಆಗಮಿಸಿದ್ದಾರೆ,

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

NZ-SA ಟೆಸ್ಟ್ ಸರಣಿಗೆ ಸೀಮಿತ ವೀಕ್ಷಕರನ್ನು ಅನುಮತಿಸಲಾಗಿದೆ

Mon Feb 14 , 2022
      ಕ್ರೈಸ್ಟ್‌ಚರ್ಚ್ [ನ್ಯೂಜಿಲೆಂಡ್], ಫೆಬ್ರವರಿ 14 (ANI): ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್‌ನಲ್ಲಿ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮುಂಬರುವ ಎರಡು ಟೆಸ್ಟ್‌ಗಳಿಗೆ ಸೀಮಿತ ಸಂಖ್ಯೆಯ ಟಿಕೆಟ್‌ಗಳನ್ನು ಸೋಮವಾರ ಸಾರ್ವಜನಿಕರಿಗೆ ಕಟ್ಟುನಿಟ್ಟಾದ COVID-19 ನಿಯಮಗಳೊಂದಿಗೆ ಲಭ್ಯಗೊಳಿಸಲಾಗಿದೆ. ಸರ್ಕಾರದ ಕೋವಿಡ್-19 ಪ್ರೊಟೆಕ್ಷನ್ ಫ್ರೇಮ್‌ವರ್ಕ್ ಸಿಸ್ಟಮ್‌ನ ಕೆಂಪು ಸೆಟ್ಟಿಂಗ್‌ಗಳ ಅಡಿಯಲ್ಲಿ, ವೀಕ್ಷಕರು 100 ಕ್ಕಿಂತ ಹೆಚ್ಚು ವ್ಯಕ್ತಿಗಳನ್ನು ಹೊಂದಿರುವ ಸಣ್ಣ, ಪ್ರತ್ಯೇಕವಾದ “ಪಾಡ್‌ಗಳಿಗೆ” ಸೀಮಿತವಾಗಿದ್ದರೆ ಪರೀಕ್ಷೆಗಳಿಗೆ ಹಾಜರಾಗಲು ಸಾಧ್ಯವಾಗುತ್ತದೆ, ಪ್ರತಿಯೊಬ್ಬರೂ […]

Advertisement

Wordpress Social Share Plugin powered by Ultimatelysocial