ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ‘ಕಲಾತಪಸ್ವಿ’ ರಾಜೇಶ್(84) ಇನ್ನು ನೆನಪು ಮಾತ್ರ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು (ಫೆ.19) ಕೊನೆಯುಸಿರೆಳೆದಿದ್ದಾರೆ.ವೀರ ಸಂಕಲ್ಪ’ ಸಿನಿಮಾ ಮೂಲಕ ಪಾದಾರ್ಪಣೆ ಮಾಡಿದ ರಾಜೇಶ್ ಅವರು ಸೊಸೆ ತಂದ ಸೌಭಾಗ್ಯ, ಬಿಡುಗಡೆ, ಕ್ರಾಂತಿವೀರ, ವಿಷಕನ್ಯೆ, ದೇವರ ದುಡ್ಡು, ಕಲಿಯುಗ, ವಸಂತ ನಿಲಯ, ದೇವರ ಮನೆ, ತವರು ಮನೆ, ಭಲೇ ಭಾಸ್ಕರ, ನಮ್ಮ ಬದುಕು, ದೇವರ ಮಕ್ಕಳು, ಕಾಣಿಕೆ, ಎರಡು ಮುಖ, ಕಪ್ಪು ಬಿಳುಪು, ಸುಖ ಸಂಸಾರ, ಪೂರ್ಣಿಮಾ, ಪಿತಾಮಹ, ಶ್ರೀರಾಮಾಂಜನೇಯ ಯುದ್ದ, ಪ್ರತಿಧ್ವನಿ.ಹೀಗೆ 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ರಾಜೇಶ್ ಅಭಿನಯಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಾಯಕ ಹಾಗೂ ಪೋಷಕ ಪಾತ್ರಗಳಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದ್ದ ಅವರ ಅಪರೂಪದ ಫೋಟೋಗಳು ಇಲ್ಲಿವೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada