ಕೊಡಗಿನ ಕೊಡವತಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ “ರಂಗಪ್ರವೇಶ” ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪಾದಾರ್ಪಣೆ.

ವಿಭಿನ್ನ ಕಥಾಹಂದರದ ಈ ಚಿತ್ರದ ಪ್ರಮುಖಪಾತ್ರದಲ್ಲಿ ಸುಮನ್ ನಗರಕರ್ ನಟನೆ.

ಕನ್ನಡ ಚಿತ್ರರಂಗದಲ್ಲಿ ಮೊದಲಿನಿಂದಲೂ ನಿರ್ದೇಶಕಿಯರ ಸಂಖ್ಯೆ ವಿರಳ. ಇತ್ತೀಚೆಗೆ ಕೆಲವು ಮಹಿಳೆಯರು ನಿರ್ದೇಶನದತ್ತ ಒಲವು ತೋರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ.

ಕೊಡಗಿನ‌ ಕೊಡವತಿ
ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಈಗ “ಬೆಳದಿಂಗಳ ಬಾಲೆ” ಖ್ಯಾತಿಯ ಸುಮನ್ ನಗರಕರ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ “ರಂಗಪ್ರವೇಶ” ಚಿತ್ರ ನಿರ್ದೇಶಿಸುವ ಮೂಲಕ ನಿರ್ದೇಶಕಿಯಾಗಿ ಚಿತ್ರರಂಗ ಪ್ರವೇಶಿಸಿದ್ದಾರೆ.‌ ಅದರಲ್ಲೂ ಕೊಡಗಿನ ಕೊಡವತಿ ಪ್ರಥಮ ನಿರ್ದೇಶಕಿ ಎಂಬ ಕೀರ್ತಿ ಯಶೋಧ ಪ್ರಕಾಶ್ ಅವರಿಗೆ ಸಲ್ಲುತ್ತದೆ.

ಕೊಟ್ಟುಕತ್ತೀರ ಯಶೋಧಾ ಪ್ರಕಾಶ್ ಸೃಜನಶೀಲರು ಹಾಗೂ ಸದಭಿರುಚಿರುಚಿಯುಳ್ಳ ಸಿನಿಮಾ ಪ್ರೇಮಿ.. ಈವರೆಗೆ ಕೊಡವ ಹಾಗೂ ಕನ್ನಡ ಭಾಷೆಯಲ್ಲಿ ನಾಲ್ಕಾರು ಸಾಮಾಜಿಕ ಕಳಕಳಿಯುಳ್ಳ, ಉತ್ತಮ ಸಂದೇಶಗಳಿರುವ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ..ಈಗ ತಮ್ಮೆಲ್ಲ ಅನುಭವವನ್ನ ಧಾರೆಯೆರೆಯಲು ಸಜ್ಜಾಗಿದ್ದು ಪ್ರಥಮ ಬಾರಿಗೆ “ರಂಗಪ್ರವೇಶ” ಹೆಸರಿನ ಕನ್ನಡ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಈ ಚಿತ್ರದ ಮುಹೂರ್ತ ಸಮಾರಂಭ ನೆರವೇರಿತು.

ಕನ್ನಡದ “ಪೃಥೆ” ಪ್ರಕಟಿತ ಕೃತಿ ಆಧಾರಿತ ಚಿತ್ರ “ರಂಗಪ್ರವೇಶ”. ಜವಾಬ್ದಾರಿಯಿಂದ ಸಂಸಾರ ನಿಭಾಯಿಸುತ್ತಾ ಮಗಳ ಭರತನಾಟ್ಯ ಕಲೆಗೆ ಪ್ರೋತ್ಸಾಹಿಸುವ ಮತ್ತು ಆ ಮೂಲಕ ಮಗಳ ಉಜ್ವಲವಾದ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಶ್ರಮಿಸುವ ಒಬ್ಬ ತಾಯಿ ಹಾಗೂ ಮಗಳ ಬಾಂಧವ್ಯ ಕಟ್ಟಿಕೊಡುವ ಸ್ತ್ರೀ ಸಂವೇದನೆಯುಳ್ಳ ಕಥಾ ಹಂದರವೇ “ರಂಗಪ್ರವೇಶ”.

ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಸುಮಾರು ಹದಿನೈದು ದಿನಗಳ ಕಾಲ ಚಿತ್ರೀಕರಿಸುವ ಉದ್ಧೇಶವನ್ನು ಚಿತ್ರತಂಡ ಹೊಂದಿದ್ದು, ಶೀಘ್ರದಲ್ಲೇ ಚಿತ್ರವನ್ನು ತೆರೆಗೆ ತರಲು ಎಲ್ಲ ರೀತಿಯಲ್ಲೂ ಸಜ್ಜಾಗಿದ್ದಾರೆ.

ಚಿತ್ರದ ತಾರಾಗಣದಲ್ಲಿ ‘ಬೆಳದಿಂಗಳ ಬಾಲೆ’ ಖ್ಯಾತಿಯ ಸುಮನ್ ನಗರಕರ್ ಅವರ ಜೊತೆಗೆ ಎಂ ಡಿ ಕೌಶಿಕ್, ಪುಷ್ಪಸ್ವಾಮಿ, ಕು.ರೇಣುಕಾ, ವಿದುಷಿ ರೋಹಿಣಿ ಅನಂತ್, ಬಸವರಾಜ್ ಎಸ್ ಮೈಸೂರು, ಕುಮಾರ್ ಎಸ್ ಮುಂತಾದವರಿದ್ದಾರೆ.
ವಿಶೇಷ ಪಾತ್ರದಲ್ಲಿ ಮಾಜಿ ಐಎಎಸ್ ಅಧಿಕಾರಿ ಡಾ|| ಸಿ. ಸೋಮಶೇಖರ್ ಮತ್ತು ಇನ್ನೂ ಅನೇಕರು ಪಾತ್ರಗಳಿಗೆ ಜೀವ ತುಂಬಲಿದ್ದಾರೆ..

ತಾಂತ್ರಿಕ ವರ್ಗದಲ್ಲಿ 38 ಚಿತ್ರಗಳಿಗೂ ಹೆಚ್ಚು ಛಾಯಾಗ್ರಾಹಕರಾಗಿ, ರಾಜತಂತ್ರ ಚಿತ್ರದ ನಿರ್ದೇಶಕರಾಗಿ ಅನುಭವವಿರುವ ಪಿವಿಆರ್ ಸ್ವಾಮಿಯವರ ಛಾಯಾಗ್ರಹಣ ಮತ್ತು ತಾಂತ್ರಿಕ ಸಲಹೆ ಚಿತ್ರಕ್ಕಿದೆ.. ಪದ್ಮಶ್ರೀ ಪುರಸ್ಕೃತ ಸಾಹಿತಿ ಡಾ.ದೊಡ್ಡರಂಗೇಗೌಡರು ಹಾಗೂ ಡಾ|| ಸಮತಾ ಬಿ ದೇಶಮಾನೆ ಅವರ ಗೀತ ರಚನೆ, ಇಂದು ವಿಶ್ವನಾಥ್ ಅವರ ಸಂಗೀತ, ಸ.ಹರೀಶ್ ಅವರ ಕಥೆ-ಸಂಭಾಷಣೆ, ನಾಗೇಶ್ ಎನ್, ಸಂಕಲನ ಚಿತ್ರಕ್ಕಿದೆ..

ಚಿತ್ರವನ್ನು ಎಮರಾಲ್ಡ್ ಬ್ಯಾನರ್ ಅಡಿಯಲ್ಲಿ ಶ್ರೀ ಎಂ ಡಿ ಕೌಶಿಕ್ ಅವರು ನಿರ್ಮಾಣ ಮಾಡುತ್ತಿದ್ದಾರೆ..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

NZ v IND: ಭಾರತದ ಗೆಲುವಿನಲ್ಲಿ ಸ್ಮೃತಿ, ಹರ್ಮನ್ಪ್ರೀತ್, ಮಿಥಾಲಿ ಅರ್ಧಶತಕ ಗಳಿಸಿದರು!

Thu Feb 24 , 2022
ಗುರುವಾರ ಇಲ್ಲಿ ನಡೆದ ಐದನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ, ಹರ್ಮನ್‌ಪ್ರೀತ್ ಕೌರ್ ಮತ್ತು ನಾಯಕಿ ಮಿಥಾಲಿ ರಾಜ್ ಅವರ ಅರ್ಧಶತಕಗಳ ಹೋರಾಟದ ನೆರವಿನಿಂದ ಭಾರತ ಮಹಿಳಾ ತಂಡವು ನ್ಯೂಜಿಲೆಂಡ್ ವಿರುದ್ಧ ಆರು ವಿಕೆಟ್‌ಗಳಿಂದ ಜಯಗಳಿಸಿತು. ಐದು ಪಂದ್ಯಗಳ ಸರಣಿಯಲ್ಲಿ ಅವರ ಮೊದಲ ಗೆಲುವು ಮುಂದಿನ ವಾರ ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್‌ಗೆ ಮುಂಚಿತವಾಗಿ ಭಾರತ ಮಹಿಳೆಯರಿಗೆ ದೊಡ್ಡ ಉತ್ತೇಜನವನ್ನು ನೀಡುತ್ತದೆ. […]

Advertisement

Wordpress Social Share Plugin powered by Ultimatelysocial