ಎಸ್​ಟಿ ಮೀಸಲು ಪ್ರಮಾಣ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಬದ್ಧ: ತಿಪ್ಪರಾಜು ಹವಾಲ್ದಾರ್!

ಬೆಂಗಳೂರು: ಪರಿಶಿಷ್ಟ ಪಂಗಡ (ಎಸ್​ಟಿ) ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲು ಪ್ರಮಾಣ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ. ನ್ಯಾಯಮೂರ್ತಿ ಸುಭಾಷ್ ಆಡಿ ನೇತೃತ್ವದ ಸಮಿತಿ ವರದಿ ಸಲ್ಲಿಸಿದ ನಂತರ ಅನುಷ್ಠಾನಕ್ಕೆ ತರಲಿದೆ ಎಂದು ರಾಜ್ಯ ಬಿಜೆಪಿ ಎಸ್​ಟಿ ಮೋರ್ಚಾ ಅಧ್ಯಕ್ಷರೂ ಆದ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಿಪ್ಪರಾಜು ಹವಾಲ್ದಾರ್, ಎಸ್​ಟಿ ಮೀಸಲು ಪ್ರಮಾಣ ಶೇ.7.5.ಕ್ಕೆ ಏರಿಸಲು ಒತ್ತಾಯಿಸಿ ಮಹರ್ಷಿ ವಾಲ್ಮೀಕಿ ಗುರುಪೀಠದ ಪೀಠಾಧಿಪತಿಗಳು ಹೂಡಿರುವ ಧರಣಿ 103ನೇ ದಿನಕ್ಕೆ ಕಾಲಿಟ್ಟಿದೆ. ಅವರ ಹೋರಾಟ ಸಂವಿಧಾನ ಬದ್ಧವಾಗಿದೆ. ಧರಣಿ ಆರಂಭಿಸಿದ ಮರು ದಿನವೇ ಎಸ್​ಟಿ ಮೋರ್ಚಾ ಪದಾಧಿಕಾರಿಗಳ ನಿಯೋಗ ಭೇಟಿ ಮಾಡಿ ಮನವೊಲಿಸಲು ಪ್ರಯತ್ನಿಸಿದೆ ಎಂದರು.

ಸುದೀರ್ಘ ಅವಧಿಗೆ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವು‌ ಎಸ್​ಟಿಗೆ ಹಲವು ಸಮುದಾಯಗಳನ್ನು ಸೇರಿಸಲು ಆಸಕ್ತಿ ವಹಿಸಿತು. ಆದರೆ ಮೀಸಲು ಪ್ರಮಾಣವನ್ನು ಶೇ.3ರಿಂದ ಜನಸಂಖ್ಯೆಗೆ ಹೆಚ್ಚಿಸದ ಕಾರಣ ಸಮುದಾಯಗಳು ಸಮಸ್ಯೆ ಅನುಭವಿಸುತ್ತಿವೆ. ನ್ಯಾ.ನಾಗಮೋಹನ್ ದಾಸ್ ವರದಿ ಸಲ್ಲಿಸಿದ್ದು, ಮೀಸಲು ಪ್ರಮಾಣ ಹೆಚ್ಚಳ ಕುರಿತಂತೆ ನ್ಯಾ.ಆಡಿ ಸಮಿತಿ ವರದಿ ಸಲ್ಲಿಸಿದ ಸರ್ಕಾರ ಮುಂದಿನ ಕ್ರಮವಹಿಸಲಿದೆ ಎಂದು ತಿಪ್ಪರಾಜು ಹವಾಲ್ದಾರ್ ಹೇಳಿದರು.

ಮೋದಿ ಅನನ್ಯ ಕೊಡುಗೆ:ಎಸ್​ಸಿ, ಎಸ್​ಟಿ ಸಮುದಾಯಗಳ ಸಮಗ್ರ ಏಳಿಗೆ, ಜೀವನಮಟ್ಟ ಸುಧಾರಣೆಗೆ ಪ್ರಧಾನಿ ನರೇಂದ್ರ ಮೋದಿಯವರು ಅನನ್ಯ ಕೊಡುಗೆ ನೀಡಿದ್ದಾರೆ. ಅಲ್ಲದೆ, ಜಾರ್ಖಂಡ್​ನ ಭಗವಾನ್ ಬಿರ್ಸಾ ಮುಂಡಾ ಜಯಂತಿಯನ್ನು ಬುಡಕಟ್ಟು ಗೌರವ ದಿನವನ್ನಾಗಿ ಘೋಷಿಸಿರುವುದು ಸಮುದಾಯಗಳಿಗೆ ಹೆಮ್ಮೆಯ ಸಂಗತಿಯಾಗಿದೆ.
ಮೋದಿಯವರು ಪ್ರಧಾನಿಯಾಗಿ ಮೇ 30ಕ್ಕೆ ಎಂಟು ವರ್ಷಗಳನ್ನು ಪೂರೈಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಜಾರ್ಖಂಡ್​​ನ ರಾಂಚಿಯಲ್ಲಿ ಜೂ.3ಕ್ಕೆ ಬೃಹತ್ ಬುಡಕಟ್ಟು ಮೇಳ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಪೂರಕ, ಪಕ್ಷದ ಸಂಘಟನೆ ಬಲವರ್ಧನೆ ಭಾಗವಾಗಿ ರಾಜ್ಯದಲ್ಲೂ ರ್ಯಾಲಿ, ಮೇಳ ಆಯೋಜಿಸಲು ತೀರ್ಮಾನಿಸಲಾಗಿದೆ.
ಜೂ.3ರಂದು ಚಿತ್ರದುರ್ಗದ ಕಲ್ಲಿನ ಕೋಟೆಯಿಂದ ರಾಜಾ ಮದಕರಿನಾಯಕ ರ್ಯಾಲಿ ಶುರುವಾಗಲಿದ್ದು, 14 ಎಸ್​ಟಿ ವಿಧಾನಸಭೆ ಕ್ಷೇತ್ರಗಳನ್ನು ಹಾಯ್ದು ಯಾದಗಿರಿ ಜಿಲ್ಲೆಯ ಸುರಪುರಕ್ಕೆ ತಲುಪಲಿದ್ದು, ಬುಡಕಟ್ಟು ಮೇಳ ನಡೆಯಲಿದೆ. ಮತ್ತೊಂದು ಎಸ್​ಟಿ ಮೀಸಲು ಕ್ಷೇತ್ರವಾದ ಎಚ್.ಡಿ.ಕೋಟೆಯಲ್ಲಿ ಪ್ರತ್ಯೇಕ ಕಾರ್ಯಕ್ರಮ ಏರ್ಪಡಿಸುವ ಉದ್ದೇಶವಿದೆ ಎಂದು ತಿಪ್ಪರಾಜು ಹವಾಲ್ದಾರ್ ತಿಳಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತ ಸೇರಿ 16 ರಾಷ್ಟ್ರಗಳಿಗೆ ಸೌದಿ ನಿರ್ಬಂಧ:

Mon May 23 , 2022
ಜೆದ್ದಾ: ಎರಡು ವರ್ಷಗಳ ಬಳಿಕ ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ ಎನ್ನುವಾಗಲೇ ಮತ್ತೊಮ್ಮೆ ವೈರಸ್​ ಭೀತಿ ಎದುರಾಗಿದೆ. ಆದರೆ ಈ ಬಾರಿ ಎಚ್ಚೆತ್ತುಕೊಂಡಿರುವ ಕೆಲ ರಾಷ್ಟ್ರಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಸೌದಿ ಅರೇಬಿಯಾ ಕೂಡ ನಿರ್ಧಾರ ಕೈಗೊಂಡಿದ್ದು, ಕರೊನಾ 4ನೇ ಅಲೆಯನ್ನು ತಡೆಗಟ್ಟುವ ಉದ್ದೇಶದಿಂದ ಸೋಂಕು ಕಂಡುಬರುತ್ತಿರುವ ರಾಷ್ಟ್ರಗಳ ಪ್ರವೇಶಕ್ಕೆ ನಿರ್ಬಂಧ ಹೇರಲು ಮುಂದಾಗಿದೆ. ಈ ನಿಟ್ಟಿನಲ್ಲಿ ಭಾರತ ಸೇರಿದಂತೆ 16 ರಾಷ್ಟ್ರಗಳಿಗೆ ನಿರ್ಬಂಧ ಹೇರಿದೆ. ಇಲ್ಲಿನ ಜನರು […]

Advertisement

Wordpress Social Share Plugin powered by Ultimatelysocial