ಜಮ್ಮು-ಕಾಶ್ಮೀರ: ಕೋವಿಡ್ ಎಫೆಕ್ಟ್- ಸುದೀರ್ಘ 2 ವರ್ಷದ ಬಳಿಕ ಶಾಲಾ, ಕಾಲೇಜು ಪುನರಾರಂಭ

 

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಬರೋಬ್ಬರಿ ಎರಡು ವರ್ಷಗಳ ಬಳಿಕ ಶಾಲಾ, ಕಾಲೇಜುಗಳು ಬುಧವಾರ(ಮಾರ್ಚ್ 02)ದಿಂದ ಪುನರಾರಂಭಗೊಂಡಿದ್ದು, ಇದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.ಶಿಕ್ಷಣ ತಜ್ಞರ ಅಭಿಪ್ರಾಯದ ಪ್ರಕಾರ, ದೀರ್ಘಕಾಲದ ನಂತರ ಶಾಲೆಗಳು ಪುನರಾರಂಭಗೊಂಡಿದ್ದರಿಂದ ವಿದ್ಯಾರ್ಥಿಗಳು ದೈನಂದಿನ ಚಟುವಟಿಕೆಗಳಿಗೆ ಹೊಂದಿಕೊಳ್ಳಲು ಕನಿಷ್ಠ ಆರು ತಿಂಗಳ ಕಾಲ ಬೇಕಾಗಬಹುದು ಎಂದು ತಿಳಿಸಿದ್ದಾರೆ.ಸುಮಾರು ಎರಡು ವರ್ಷಗಳ ಕಾಲ ತರಗತಿಯಿಂದ ದೂರವಿದ್ದು ಆನ್ ಲೈನ್ ಕಲಿಕೆಯಲ್ಲಿ ತೊಡಗಿದ್ದರಿಂದ ಇದೀಗ ಭೌತಿಕ ತರಗತಿಗಳು ಆರಂಭಗೊಂಡಿದೆ. ಇದರಿಂದಾಗಿ ಮಕ್ಕಳುಶಾಲಾ ಸಮಯಕ್ಕೆ ಸರಿಯಾಗಿ ಏಳುವುದು, ಸ್ಕೂಲ್ ತಲುಪುವ ಸಮಯ ಮತ್ತೆ ರೂಢಿಸಿಕೊಳ್ಳಬೇಕಾಗಿದೆ.ಮುಖ್ಯವಾಗಿ ಪ್ರಾಥಮಿಕ ಶಾಲಾ ಮಕ್ಕಳು ಈಗ ಹೊರ ಹೋಗಲು ಹೆದರುತ್ತಿದ್ದಾರೆ. ಕೋವಿಡ್ ಸೋಂಕಿನ ಭೀತಿಯಿಂದ ಶಾಲಾ, ಕಾಲೇಜು ಬಂದ್ ಆಗಿದ್ದವು. ಎರಡು ವರ್ಷದ ಬಳಿಕ ಶಾಲಾ, ಕಾಲೇಜು ಆರಂಭವಾಗಿದ್ದರಿಂದ ಮಕ್ಕಳಲ್ಲಿ ಸಂವಹನ ಕೊರತೆ ಕಾಣಿಸಲಿದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.ಕೋವಿಡ್ ಸೋಂಕಿನ ಭೀತಿಯಿಂದ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಆನ್ ಲೈನ್ ಶಿಕ್ಷಣದಿಂದ ವಿದ್ಯಾರ್ಥಿಗಳ ಸಾಮಾಜಿಕ ಕೌಶಲ್ಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ಇದರಿಂದಾಗಿ ವಿದ್ಯಾರ್ಥಿಗಳು ಭೌತಿಕ ತರಗತಿಯಲ್ಲಿ ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಎಂಆರ್ ಜಿ ಶಾಲೆಯ ಅಕಾಡೆಮಿಕ್ ಕೋ ಆರ್ಡಿನೇಟರ್ ಪಲ್ಲವಿ ಜೈನ್ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಊಟವಾದ್ಮೇಲೆ ಸೋಂಪು ತಿನ್ನುವುದ್ಯಾಕೆ ಗೊತ್ತಾ..?

Wed Mar 2 , 2022
  ಊಟ ಆದ್ಮೇಲೆ ನಾವು ಬಾಯಿಗೆ ಎಸೆದುಕೊಳ್ಳೋ ಸೋಂಪು ಎಷ್ಟೆಲ್ಲಾ ಔಷಧೀಯ ಗುಣಗಳನ್ನು ಹೊಂದಿದೆ ಗೊತ್ತಾ? ಇದೊಂದು ನೈಸರ್ಗಿಕ ಮೌತ್‌ ಫ್ರೆಶ್ನರ್.‌ ಭಾರತೀಯ ಮೇಲೋಗರಗಳ ಸುವಾಸನೆ ಹೆಚ್ಚಿಸುವ ಐದು ಪ್ರಮುಖ ಮಸಾಲೆಗಳಲ್ಲಿ ಒಂದು. ಸೋಂಪು ಜೀರ್ಣಕ್ರಿಯೆಗೆ ಸಹಕರಿಸುತ್ತದೆ. ಇದರಲ್ಲಿರೋ ಸಿಹಿ ಮತ್ತು ಶಕ್ತಿಯುತ ಸುವಾಸನೆಯು ಆಧುನಿಕ ಫ್ರೆಂಚ್ ಮತ್ತು ಇಟಾಲಿಯನ್ ಅಡುಗೆಗಳಲ್ಲಿ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿದೆ. ಸೋಂಪಿನಲ್ಲಿರುವ ಔಷಧೀಯ ಪ್ರಯೋಜನಗಳಿಂದಾಗಿ ಪ್ರಾಚೀನ ಕಾಲದಿಂದಲೂ ವಿವಿಧ ದೇಶಗಳಲ್ಲಿ ಇದನ್ನು ಬಳಸಲಾಗುತ್ತದೆ. ಸ್ಥೂಲಕಾಯ […]

Advertisement

Wordpress Social Share Plugin powered by Ultimatelysocial