ಊಟವಾದ್ಮೇಲೆ ಸೋಂಪು ತಿನ್ನುವುದ್ಯಾಕೆ ಗೊತ್ತಾ..?

 

ಊಟ ಆದ್ಮೇಲೆ ನಾವು ಬಾಯಿಗೆ ಎಸೆದುಕೊಳ್ಳೋ ಸೋಂಪು ಎಷ್ಟೆಲ್ಲಾ ಔಷಧೀಯ ಗುಣಗಳನ್ನು ಹೊಂದಿದೆ ಗೊತ್ತಾ? ಇದೊಂದು ನೈಸರ್ಗಿಕ ಮೌತ್‌ ಫ್ರೆಶ್ನರ್.‌ ಭಾರತೀಯ ಮೇಲೋಗರಗಳ ಸುವಾಸನೆ ಹೆಚ್ಚಿಸುವ ಐದು ಪ್ರಮುಖ ಮಸಾಲೆಗಳಲ್ಲಿ ಒಂದು.

ಸೋಂಪು ಜೀರ್ಣಕ್ರಿಯೆಗೆ ಸಹಕರಿಸುತ್ತದೆ.

ಇದರಲ್ಲಿರೋ ಸಿಹಿ ಮತ್ತು ಶಕ್ತಿಯುತ ಸುವಾಸನೆಯು ಆಧುನಿಕ ಫ್ರೆಂಚ್ ಮತ್ತು ಇಟಾಲಿಯನ್ ಅಡುಗೆಗಳಲ್ಲಿ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿದೆ. ಸೋಂಪಿನಲ್ಲಿರುವ ಔಷಧೀಯ ಪ್ರಯೋಜನಗಳಿಂದಾಗಿ ಪ್ರಾಚೀನ ಕಾಲದಿಂದಲೂ ವಿವಿಧ ದೇಶಗಳಲ್ಲಿ ಇದನ್ನು ಬಳಸಲಾಗುತ್ತದೆ.

ಸ್ಥೂಲಕಾಯ ಹೊಂದಿರೋ ರೋಮನ್ನರು ಇದನ್ನು ಬಳಸುತ್ತಾರಂತೆ. ಭಾರತದಲ್ಲಿ ಊಟದ ನಂತರ ಸಕ್ಕರೆ ಲೇಪಿತ ಸೋಂಪನ್ನು ಜಗಿಯುವ ಅಭ್ಯಾಸವಿದೆ. ಪ್ರಪಂಚದ ಅನೇಕ ಭಾಗಗಳಲ್ಲಿ ಜನರು ಉಪ್ಪು ಅಥವಾ ಸಕ್ಕರೆಯೊಂದಿಗೆ ಹುರಿದು ಇದನ್ನು ಉಪಯೋಗಿಸುತ್ತಾರೆ. ಸೋಂಪಿನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಸಿ, ಕಬ್ಬಿಣದ ಅಂಶ, ಮ್ಯಾಗ್ನಿಶಿಯಂ ಮತ್ತು ಪೊಟ್ಯಾಶಿಯಂ ಇರುವುದರಿಂದ ತೂಕ ಇಳಿಸಲು ಸಹಕಾರಿಯಾಗಿವೆ.

ಅಷ್ಟೇ ಅಲ್ಲ ಸೋಂಪು ಸೇವನೆಯಿಂದ ಕ್ಯಾನ್ಸರ್‌ ಕೂಡ ತಡೆಗಟ್ಟಬಹುದಂತೆ. ಸೋಂಪಿನಲ್ಲಿರುವ ಅನೆಥೋಲ್ ಎಂಬ ಸಂಯುಕ್ತ, ಸ್ತನ ಕ್ಯಾನ್ಸರ್ ಕೋಶಗಳನ್ನು ನಾಶ ಮಾಡಲು ಮತ್ತು ಹರಡುವುದನ್ನು ನಿಲ್ಲಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ಹಾಲುಣಿಸುವ ತಾಯಂದಿರಲ್ಲಿ ಹಾಲಿನ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಎಂದು ಹೇಳಲಾಗುತ್ತದೆ. ಕ್ಷಯರೋಗಕ್ಕೆ ಕಾರಣವಾಗುವ ದೀರ್ಘಕಾಲದ ಉಸಿರಾಟದ ಪರಿಸ್ಥಿತಿಯನ್ನು ತಡೆಯಲು ನೆರವಾಗುತ್ತದೆ.

ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸಬಲ್ಲದು. ರಕ್ತಸ್ರಾವಕ್ಕೆ ಸಂಬಂಧಪಟ್ಟ ಅಸ್ವಸ್ಥತೆಯನ್ನು ನಿವಾರಿಸುತ್ತದೆ. ಅಜೀರ್ಣ ಸಮಸ್ಯೆ ಇರುವವರು ಸೋಂಪು ಸೇವಿಸುವುದು ಉತ್ತಮ. ಹೃದಯಕ್ಕೆ ಸಹ ಒಳ್ಳೆಯದು. ಇದು ಕಾಮೋತ್ತೇಜಕವಲ್ಲ. ಮುಟ್ಟಿನ ಸಮಯದಲ್ಲಿ ನೋವನ್ನು ನಿವಾರಿಸಲು ಉಪಯುಕ್ತವಾಗಿದೆ. ಹೊಟ್ಟೆಯಲ್ಲಿ ಹುಳಗಳ ಬಾಧೆ, ಮಲಬದ್ಧತೆ, ವಾತಕ್ಕೆ ಸಂಬಂಧಿಸಿದ ಸಮಸ್ಯೆ, ವಾಂತಿ, ಕೆಮ್ಮು ಮತ್ತು ಶೀತ ನಿವಾರಿಸಲು ಸೋಂಪು ಸಹಾಯ ಮಾಡುತ್ತದೆ. ಸೋಂಪಿನ ಕಾಳುಗಳಲ್ಲಿರುವ ಸಾತ್ವಿಕ ಗುಣಗಳು ಮನಸ್ಸನ್ನು ಕೂಡ ಉಲ್ಲಾಸಗೊಳಿಸುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಿಜೋರಾಂನ ಕ್ರಮಬದ್ಧ ಸಂಚಾರವು ಸಾಮಾಜಿಕ ಮಾಧ್ಯಮದಲ್ಲಿ ಚಪ್ಪಾಳೆಗಳನ್ನು ಪಡೆಯುತ್ತದೆ

Wed Mar 2 , 2022
  ತಮ್ಮ ಟ್ವಿಟರ್‌ನಲ್ಲಿ ಆಸಕ್ತಿದಾಯಕ ಚಿತ್ರಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡುತ್ತಲೇ ಇರುವ ಉದ್ಯಮಿ ಆನಂದ್ ಮಹೀಂದ್ರ ಅವರು ಮಿಜೋರಾಂನ ಚಿತ್ರವನ್ನು ಮರುಟ್ವೀಟ್ ಮಾಡಿದಾಗ ಅನೇಕರ ಗಮನ ಸೆಳೆದರು, ಇದು ಸಂಚಾರ ಅಡಚಣೆಗಳನ್ನು ಎದುರಿಸುವಾಗ ರಸ್ತೆ ಪ್ರಜ್ಞೆ ಮತ್ತು ಶಿಸ್ತಿನ ಅತ್ಯುತ್ತಮ ಉದಾಹರಣೆಯಾಗಿದೆ. ಮೂಲ ಚಿತ್ರದೊಂದಿಗೆ ವಿವರಣೆಯು ದೃಶ್ಯವು ಮಿಜೋರಾಂನಿಂದ ಬಂದಿದೆ ಮತ್ತು ಕ್ರಮಬದ್ಧವಾದ ದಟ್ಟಣೆಯನ್ನು ತೋರಿಸುತ್ತದೆ, ಆ ಕಡೆಯಿಂದ ಯಾವುದೇ ವಾಹನಗಳು ಬರದಿದ್ದರೂ ರಸ್ತೆಯ ಒಳಬರುವ ಬದಿಗೆ ಒಂದು […]

Advertisement

Wordpress Social Share Plugin powered by Ultimatelysocial