ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ 11 ಗಂಟೆಗೆ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಲಯಾಳಂ ದಿನಪತ್ರಿಕೆಯ ಮಾತೃಭೂಮಿಯ ಶತಮಾನೋತ್ಸವ ವರ್ಷದ ಸಂಭ್ರಮಾಚರಣೆಯನ್ನು ಉದ್ಘಾಟಿಸಲಿದ್ದಾರೆ.
ಮಾತೃಭೂಮಿಯು 1923ರ ಮಾರ್ಚ್ 18ರಂದು ಕಾರ್ಯಾರಂಭ ಮಾಡಿತು. ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳನ್ನು ನಿರಂತರವಾಗಿ ಹೈಲೈಟ್ ಮಾಡುತ್ತಲೇ ಸಾಮಾಜಿಕ ಸುಧಾರಣೆಗಳು ಮತ್ತು ಅಭಿವೃದ್ಧಿ ಕಾರ್ಯಸೂಚಿಗಳನ್ನು ಮುಂದಿಟ್ಟುಕೊಂಡು ಮುಂಚೂಣಿಯಲ್ಲಿದೆ.
ಮಾತೃಭೂಮಿ 15 ಆವೃತ್ತಿಗಳು ಮತ್ತು 11 ನಿಯತಕಾಲಿಕಗಳನ್ನು ಹೊಂದಿದೆ. ಅಲ್ಲದೆ, ಮಾತೃಭೂಮಿ ಪುಸ್ತಕಗಳ ವಿಭಾಗವು ಸಮಕಾಲೀನ ಆಸಕ್ತಿಯ ವಿಷಯಗಳ ವ್ಯಾಪಕ ಶ್ರೇಣಿಯ ಶೀರ್ಷಿಕೆಗಳನ್ನು ಪ್ರಕಟಿಸುತ್ತದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada