ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿ, ಪುಟ್ಟಣ್ಣನವರು ನಿರ್ಮಿಸಿರುವ ಅಮೃತಮತಿ ಚಿತ್ರವು ಇತ್ತಿಚೆಗಷ್ಟೇ ಆಸ್ಟ್ರೀಯಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದ್ದು ಗೊತ್ತೇ ಇದೆ. ಇದೀಗ ಇನ್ನೊಂದು ಸಂತೋಷದ ಸುದ್ದಿಯೊಂದಿಗೆ ಚಿತ್ರತಂಡ ಮುಂದೆಬಂದಿದೆ.ಅಮೃತಮತಿ ಚಿತ್ರವೂ ಅಮೆರಿಕದ ಅಟ್ಲಾಂಟದಲ್ಲಿ ನಡೆಯುವ ಸ್ಪರ್ಧಾತ್ಮಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಅಧಿಕೃತ ಆಯ್ಕೆಯಾಗಿದ್ದು, ಪ್ರದರ್ಶನಗೊಳ್ಳಲಿದೆ. ಕರೊನಾ ಕಾರಣದಿಂದ ಈ ಚಿತ್ರೋತ್ಸವ ಕೂಡ ಆನ್ಲೈನ್ ಮೂಲಕ ಜು. 29ರಿಂದ ಆಗಸ್ಟ್ 12ರ ವರೆಗೆ ನಡೆಯಲಿದೆ. ಈ ಸಿನಿಮಾ ಎಲ್ಲ ವಿಭಾಗಗಳಲ್ಲಿ ಪ್ರಶಸ್ತಿ ಸ್ಪರ್ಧೆಗೆ ಆಯ್ಕೆಯಾಗಿದೆ.ಹದಿಮೂರನೇ ಶತಮಾನದಲ್ಲಿ ಜನ್ನಕವಿ ರಚಿತ ಯಶೋಧರ ಚರಿತೆಯನ್ನು ಆಧರಿಸಿ ಅಮೃತಮತಿ ಸಿನಿಮಾ ಸಿದ್ಧವಾಗಿದೆ. ಈ ಚಿತ್ರದಲ್ಲಿ ಅಮೃತಮತಿಯಾಗಿ ಹರಿಪ್ರಿಯಾ ನಟಿಸಿದ್ದು, ಯಶೋಧರ ಪಾತ್ರದಲ್ಲಿ ಕಿಶೋರ್ ಅಭಿನಯಿಸಿದ್ದಾರೆ. ಇತರೆ ತಾರಾಗಣದಲ್ಲಿ ಸುಂದರ್ರಾಜ್, ಪ್ರಮೀಳಾ ಜೋಷಾಯ್, ತಿಲಕ್, ಸುಪ್ರಿಯಾ ರಾವ್, ಅಂಬರೀಷ್ ಸಾರಂಗಿ, ವತ್ಸಲಾ ಮೋಹನ್ ನಟಿಸಿದ್ದಾರೆ.