ನೊಂದ ಮನಸ್ಸುಗಳಿಗೆ ಹತ್ತಿರವಾದ ಕಿರಣ್ ರಾಜ್ .

 

ನಟನ ಸತ್ಕಾರ್ಯಕ್ಕೆ ಮನತುಂಬಿ ಹಾರೈಸಿದ ಮಂಗಳಮುಖಿಯರು .

ನಾವು‌ ದುಡಿದಿದ್ದನ್ನು‌ ನಮ್ಮ ನಿತ್ಯ‌ಜೀವನಕ್ಕೆ ಎಷ್ಟು ಬೇಕೋ ಅಷ್ಟು ಇಟ್ಟುಕೊಂಡು, ಮಿಕ್ಕ ಹಣದಿಂದ ನೊಂದ ಮನಸ್ಸುಗಳಿಗೆ ಸಹಾಯ ಮಾಡಬೇಕೆಂಬ ಗುಣವಿರಬೇಕು ಎನ್ನುತ್ತಾರೆ ನಟ ಕಿರಣ್ ರಾಜ್.

ಕಳದೆರಡು ವರ್ಷಗಳಿಂದ ಕೊರೋನ ಕೊಟ್ಟ ಕಾಟ ಅಷ್ಟಿಷ್ಟಲ್ಲ.
ಎರಡುವರ್ಷಗಳಿಂದ ಎಷ್ಟೋ ‌ಜನರ ಜೀವನ‌ ಏರುಪೇರಾಗಿದೆ.
ಬಹುತೇಕ ಜನರು ದಿನನಿತ್ಯದ ಜೀವನ ನಡೆಸುವುದು ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಕಷ್ಟದಲ್ಲಿರುವ ಜನರಿಗೆ ಕೈಲಾದಷ್ಟು ಸಹಾಯ ಮಾಡುವುದು ನನ್ನ ಉದ್ದೇಶ ಎನ್ನುತ್ತಾರೆ ಕಿರಣ್ ರಾಜ್.

ತಮ್ಮದೇ ಆದ ಕಿರಣ್ ರಾಜ್ ಫೌಂಡೇಶನ್ ಮೂಲಕ ಕೊರೋನ ಸಂಕಷ್ಟ ಸಮಯದಲ್ಲಿ ಸಾಕಷ್ಟು ಜನರಿಗೆ ಆಹಾರದ ಕಿಟ್‌ಗಳನ್ನು ವಿತರಿಸಿದ್ದಾರೆ.

ಹೊರ ರಾಜ್ಯ ಹಾಗೂ ಊರುಗಳಿಂದ ಬಂದು ವಸತಿಯಿಲ್ಲದೆ ಫುಟ್ ಪಾತ್ ಆಶ್ರಯ ಪಡೆದಿರುವ ಹಲವಾರು ಮಂದಿಗೆ ಬೆಡ್ ಶೀಟ್‌ ಮುಂತಾದವುಗಳನ್ನು ಹಂಚಿದ್ದಾರೆ.

ಎಲ್ಲದಕ್ಕಿಂತ ಹೆಚ್ಚಾಗಿ ಮಂಗಳಮುಖಿಯರು ಈ ಸಂದರ್ಭದಲ್ಲಿ ಹೆಚ್ಚು ತೊಂದರೆ ಅನುಭವಿಸಿದ್ದರು.‌ ಅಂತಹ ಮಂಗಳಮುಖಿಯರಿಗೆ ಕೊರೋನ ಸಮಯದಲ್ಲಿ ಆಹಾರದ ಕಿಟ್ ನೀಡಿದ್ದಾರೆ. ಈಗ ಚಳಿಗಾಲವಾಗಿರುವುದರಿಂದ ಅವರಿಗೆಲ್ಲಾ ಬೆಚ್ಚಗಿನ ಹೊದಿಕೆಗಳನ್ನು ಕೊಡಲಾಗಿದೆ ಹಾಗೂ ಮುಖ್ಯವಾದ ಹಬ್ಬಗಳಲ್ಲಿ ಅವರಿಗೆ ಮದುವೆಮನೆಯ ಅಡುಗೆಯಂತೆ ಬಾಳೆಎಲೆ ಊಟ ಹಾಕಿಸಿ, ತಾವು ಅವರೊಂದಿಗೆ ಊಟ ಮಾಡಿದ್ದೀನಿ.‌
ಮಂಗಳಮುಖಿಯರು ಈಗ ಯಾವುದರಲ್ಲೂ ಕಡಿಮೆ ಇಲ್ಲ.
ನಮ್ಮ ಸಮಾಜ ಅವರನ್ನು ನೋಡುವ ರೀತಿಯೆ ಬದಲಾಗಬೇಕು. ಅವರು ನಮ್ಮ ಹಾಗೆ ಎಂದು ನೋಡಬೇಕು ಎನ್ನುತ್ತಾರೆ ‌ಕಿರಣ್ ರಾಜ್.

ದೇವರು ಎಲ್ಲಾ ಕಡೆ ಇರಲಾಗುವುದಿಲ್ಲ ಎಂದು ಕಿರಣ್ ರಾಜ್ ತರಹ ಒಳ್ಳೆಯ ‌ಗುಣ ಇರುವವರನ್ನು ಈ ಭೂಮಿಗೆ ಕಳುಹಿಸಿರುತ್ತಾನೆ. ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದು ಮಂಗಳಮುಖಿಯರು ಮನಸ್ಸಾರೆ‌ ಹಾರೈಸಿದ್ದಾರೆ.

ಕಿರಣ್ ರಾಜ್ ಅವರ ಸಹಾಯ ಕರ್ನಾಟಕಕಷ್ಟೇ ಮೀಸಲಾಗಿಲ್ಲ. ದೂರದ ಮುಂಬೈನಲ್ಲೂ‌ ಇವರ‌ ಸತ್ಕಾರ್ಯಗಳು ನಡೆದಿದೆ.‌ ಎಲ್ಲರ ಹಾರೈಕೆಯಿಂದ ನಮ್ಮ ಸೇವೆ ಹೀಗೆ ನಿರಂತರವಾಗಿ ಸಾಗಲಿ ಎಂಬುದೆ ನನ್ನ‌ ಕೋರಿಕೆ ಎನ್ನುತ್ತಾರೆ ಕಿರಣ್ ರಾಜ್.

ಕಿರುತೆರೆಯಷ್ಟೇ ಹಿರಿತೆರೆಯಲ್ಲೂ ಕಿರಣ್ ರಾಜ್ ಬ್ಯುಸಿಯಾಗಿದ್ದಾರೆ. ಬಹು ನಿರೀಕ್ಷಿತ “ಭರ್ಜರಿ ಗಂಡು” ಚಿತ್ರದ ಚಿತ್ರೀಕರಣ ಮುಕ್ತಾಯ ಹಂತದಲ್ಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತೀಯ ರೈಲ್ವೇಯು ಮುಂಬೈ ಮತ್ತು ನಾಗ್ಪುರ ನಡುವೆ ಬುಲೆಟ್ ರೈಲು ಸೇವೆಯನ್ನು ಪ್ರಸ್ತಾಪಿಸಿದೆ,

Mon Feb 14 , 2022
ಪ್ರಸ್ತುತ ನಾಗ್ಪುರದಿಂದ ಮುಂಬೈಗೆ ರೈಲಿನಲ್ಲಿ ಪ್ರಯಾಣಿಸಬೇಕಾದರೆ, 12 ಗಂಟೆ ಸಮಯ ಹಿಡಿಯುತ್ತದೆ. ಆದರೆ ಶೀಘ್ರದಲ್ಲೇ ಈ ಸಮಯ ಕೇವಲ ಮೂರುವರೆ ಗಂಟೆ ಹಿಡಿಯಲಿದೆ. ಹೇಗೆ ಅಂತಾ ಕೇಳಿದ್ರೆ ಅದಕ್ಕೆ ಉತ್ತರ ಬುಲೆಟ್ ಟ್ರೈನ್.ಭಾರತೀಯ ರೈಲ್ವೇಯು ಮುಂಬೈ ಮತ್ತು ನಾಗ್ಪುರ ನಡುವೆ ಬುಲೆಟ್ ರೈಲು ಸೇವೆಯನ್ನು ಪ್ರಸ್ತಾಪಿಸಿದೆ, ಅದು ಗಂಟೆಗೆ 350 ಕಿಲೋಮೀಟರ್ ವೇಗದಲ್ಲಿ ಚಲಿಸುವ ನಿರೀಕ್ಷೆಯಿದೆ.ಮುಂಬೈ-ನಾಗ್ಪುರ ಹೈಸ್ಪೀಡ್ ರೈಲು ಕಾರಿಡಾರ್‌ಗೆ ವಿವರವಾದ ಯೋಜನಾ ವರದಿ (ಡಿಪಿಆರ್) ಈ ತಿಂಗಳ ಅಂತ್ಯ […]

Advertisement

Wordpress Social Share Plugin powered by Ultimatelysocial