ಮೆಟ್ರೋ ಸ್ಮಾರ್ಟ್‌ ಕಾರ್ಡ್‌ ಹಣ ದಿಢೀರ್‌ ಮಾಯ; ರಿಚಾರ್ಚ್ ಮಾಡಿದ 60 ದಿನಗಳಲ್ಲಿ ಕಾರ್ಡ್‌ ಬಳಸದೇ ಇದ್ದರೆ ಪೂರ್ಣ ಹಣ ಕಡಿತ!

ಬೆಂಗಳೂರು: ಸ್ಮಾಟ್‌ ಕಾರ್ಡ್‌ ರಿಚಾರ್ಜ್ ಮಾಡಿ 60 ದಿನಗಳೊಳಗೆ ಒಂದು ಬಾರಿಯೂ ಪ್ರಯಾಣ ಮಾಡಿದಿದ್ದರೆ ಅಥವಾ 7 ದಿನಗಳ ಒಳಗೆ ಕಾರ್ಡ್‌ ಪ್ರವೇಶ ದ್ವಾರದಲ್ಲಿ ಎಂಟ್ರಿ ಮಾಡಿಲ್ಲವಾದರೆ ರಿಚಾರ್ಜ್ ಮಾಡಿದ ಪೂರ್ಣಹಣ ಕಡಿತವಾಗುತ್ತದೆ. ಬಿಎಂಆರ್‌ಸಿಎಲ್‌ ರೂಪಿಸಿರುವ ಈ ಅವೈಜ್ಞಾನಿಕ ಕ್ರಮಕ್ಕೆ ಮೆಟ್ರೊ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಎಂಆರ್‌ಸಿಎಲ್‌ ನಿಯಮದ ಪ್ರಕಾರ, ಮೆಟ್ರೊ ಸ್ಮಾಟ್‌ ಕಾರ್ಡ್‌ ರಿಚಾರ್ಜ್ ಮಾಡಿ 60 ದಿನಗಳ ಒಳಗೆ ಒಂದು ಬಾರಿ ಕಡ್ಡಾಯವಾಗಿ ಪ್ರಯಾಣ ಮಾಡಲೇಬೇಕು. ಇಲ್ಲದಿದ್ದರೆ ನಿಮ್ಮ ಮೆಟ್ರೊ ಕಾರ್ಡ್‌ನಲ್ಲಿ ರಿಚಾರ್ಜ್ ಮಾಡಿದ ಹಣ ಕಡಿತವಾಗುತ್ತದೆ. ಹಣವಿದ್ದಾಗ ಕೆಲವರು 500 ರೂ., ಸಾವಿರ ರೂ. ಮೆಟ್ರೊ ಸ್ಮಾರ್ಟ್‌ ಕಾರ್ಡ್‌ ರಿಚಾರ್ಜ್ ಮಾಡುತ್ತಾರೆ. ಅನಿವಾರ್ಯ ಕಾರಣಗಳಿಂದ ಎರಡು ತಿಂಗಳು ಮೆಟ್ರೊದಲ್ಲಿ ಪ್ರಯಾಣ ಮಾಡಲಾಗದೇ ಇದ್ದರೆ ಆ ಹಣ ಪೂರ್ಣ ಮಾಯವಾಗುತ್ತದೆ. ಪ್ರಯಾಣ ಮಾಡದೇ ಹಣ ಕಡಿತವಾಗುವುದರ ವಿರುದ್ಧ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಹೇಳುವುದು ಹೀಗೆ. ”ರಿಚಾರ್ಜ್ ಮಾಡಿದ 7 ದಿನಗಳಲ್ಲಿ ಒಂದು ಬಾರಿ ಪ್ರಯಾಣ ಮಾಡಬೇಕು. ಪ್ರಯಾಣ ಮಾಡಲು ಸಾಧ್ಯವಿಲ್ಲವಾದರೆ 60 ದಿನಗಳ ಕಾಲಾವಕಾಶ ಇರುತ್ತದೆ. 60 ದಿನಗಳ ಒಳಗಾಗಿ ಕಸ್ಟಮರ್‌ ಕೇರ್‌ ಸೆಂಟರ್‌ನಲ್ಲಿ ಅಥವಾ ಟಾಪ್‌ ಅಪ್‌ ಟರ್ಮಿನಲ್‌ನಲ್ಲಿ ಕಾರ್ಡ್‌ ಅನ್ನು ಸಕ್ರಿಯಗೊಳಿಸಿಕೊಳ್ಳಬೇಕು. ಸರ್ವರ್‌ ಸಾಮರ್ಥ್ಯ 60 ದಿನಗಳಿಗೆ ಮಾತ್ರ ಸೀಮಿತವಾಗಿರುವುದರಿಂದ, ನಿಗದಿತ ದಿನಗಳ ನಂತರ ತನ್ನಷ್ಟಕ್ಕೆ ತಾನೇ ಹಣ ಕಡಿತವಾಗುತ್ತದೆ ಎನ್ನುತ್ತಾರೆ.
ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಮೆಟ್ರೊ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಆ ಸಂದರ್ಭದಲ್ಲಿ ಹೊಸದಾಗಿ ಸ್ಮಾರ್ಟ್‌ ಕಾರ್ಡ್‌ ರಿಚಾರ್ಜ್ ಮಾಡಿದ ಎಷ್ಟೋ ಪ್ರಯಾಣಿಕರಿಗೆ, ಪ್ರಯಾಣ ಮಾಡುವುದಕ್ಕೆ ಅವಕಾಶವೇ ಇಲ್ಲದಂತಾಯಿತು. ರಿಚಾರ್ಜ್ ಮಾಡಿದ ಹಣವನ್ನು ಹೀಗೆ ಏಕಾಏಕಿ ಕಡಿತ ಮಾಡಿದರೆ ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
”ರಿಚಾರ್ಜ್ ಮಾಡಿ 60 ದಿನಗಳ ಒಳಗೆ ಪ್ರಯಾಣ ಮಾಡಲೇಬೇಕು ಎನ್ನುವ ಬಿಎಂಆರ್‌ಸಿಎಲ್‌ ನಿಯಮ ತೀರಾ ಬಾಲಿಶವಾಗಿದೆ. ಎಲ್ಲಿಗಾದರೂ ತಕ್ಷಣಕ್ಕೆ ಹೊರಡಬೇಕೆಂದಿದ್ದರೆ ಕೂಡಲೇ ಸ್ಮಾರ್ಟ್‌ ಕಾರ್ಡ್‌ ರಿಚಾರ್ಜ್ ಮಾಡಲಾಗುವುದಿಲ್ಲ. ಈ ಉದ್ದೇಶದಿಂದ ಹಣ, ಸಮಯವಿದ್ದಾಗ ಕಾರ್ಡ್‌ ರಿಚಾರ್ಜ್ ಮಾಡಿಟ್ಟುಕೊಳ್ಳುತ್ತೇವೆ. ಅನಿವಾರ್ಯ ಕಾರಣಗಳಿಂದ ಕಾರ್ಡ್‌ ಬಳಸಿಲ್ಲವಾದರೆ ಪೂರ್ಣ ಹಣ ಕಡಿತಗೊಳಿಸುವುದು ನ್ಯಾಯಸಮ್ಮತವಲ್ಲ” ಎನ್ನುತ್ತಾರೆ ಮೆಟ್ರೊ ಪ್ರಯಾಣಿಕರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಬ್ಬಸಿಗೆ ಸೊಪ್ಪಿನ ರಸವನ್ನು ಸೇವಿಸಿದರೆ ಏನಾಗುತ್ತದೆ ಗೊತ್ತಾ?|Dill leaves|

Sat Jan 22 , 2022
  ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ತೂಕ ಹೆಚ್ಚಳ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ತೂಕವನ್ನು ಇಳಿಸಿಕೊಳ್ಳಲು ಕೆಲವರು ಹರಸಾಹಸ ಮಾಡುತ್ತಾರೆ. ವಿವಿಧ ರೀತಿಯ ವ್ಯಾಯಾಮಗಳನ್ನು, ವಿವಿಧ ರೀತಿಯ ಮನೆಮದ್ದುಗಳನ್ನು ಸೇವಿಸುತ್ತಾರೆ. ಆದರೆ ಯಾವುದರಲ್ಲಿಯೂ ನಿಮ್ಮ ತೂಕ ಇಳಿಕೆಯಾಗದಿದ್ದರೆ ಒಮ್ಮೆ ಸಬ್ಬಸಿಗೆ ಸೊಪ್ಪನ್ನು ಈ ರೀತಿ ಬಳಸಿ ನೋಡಿ. ಆಯುರ್ವೇದದಲ್ಲಿ ಸಬ್ಬಸಿಗೆ ಸೊಪ್ಪನ್ನು ಗಿಡಮೂಲಿಕೆಯಾಗಿ ಪರಿಗಣಿಸಲಾಗುತ್ತದೆ. ಇದರ ಸೊಪ್ಪು ಮಾತ್ರವಲ್ಲ ಹೂಗಳು ಮತ್ತು ಬೀಜಗಳು ಕೂಡ ಆರೋಗ್ಯಕ್ಕೆ ಉತ್ತಮವಾಗಿದೆ. ಇದರಲ್ಲಿ ಔಷಧೀಯ ಗುಣಗಳಿವೆ. […]

Advertisement

Wordpress Social Share Plugin powered by Ultimatelysocial