ಭದ್ರಾವತಿಯ VISL ಕಾರ್ಖಾನೆ ಮುಚ್ಚುವ ಬಗ್ಗೆ ಕೇಂದ್ರ ಸರ್ಕಾರ ಹೇಳಿಕೆ ನೀಡಿದ ವಿಚಾರ.

ಭದ್ರಾವತಿಯ VISL ಕಾರ್ಖಾನೆ ಮುಚ್ಚುವ ಬಗ್ಗೆ ಕೇಂದ್ರ ಸರ್ಕಾರ ಹೇಳಿಕೆ ನೀಡಿದ ವಿಚಾರ
ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ…
VISL ನಮ್ಮ ರಾಜ್ಯದ ಪ್ರತಿಷ್ಠಿತ ಕಬ್ಬಿಣ ಕಾರ್ಖಾನೆ…
ಅದು ಮುಚ್ಚವ ಹಂತಕ್ಕೆ ಬಂದಿದೆ..
ಅದನ್ನ ಹಿಡುದು ನಿಲ್ಲಿಸಲು ಏನ್ ಏನ್ ಮಾಡಬೇಕು ಅದನ್ನ ನಾವು ಮಾಡುತ್ತಿದ್ದೇವೆ..
ಕೇಂದ್ರ ಸರ್ಕಾರದ ಜೊತೆ ವಿಶೇಷವಾಗಿ ಮಾತನಾಡುತ್ತಿದ್ದೇವೆ..
ನಿನ್ನ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಕಾರ್ಖಾನೆ ಮುಚ್ಚುವ ಪ್ರೋಸೆಸ್ ಸ್ಟಾರ್ಟ್ ಆಗಿದೆ ಅಂತ ಹೇಳಿದ್ದಾರೆ..
ಪ್ರೋಸೆಸ್ ಶುರುವಾಗಿದೆ ಅಂದ್ರೆ ಮುಚ್ಚೆ ಆಯ್ತು ಅಂತಲ್ಲ
ಕೆಲವು ಪ್ರೋಸೆಸ್ ಶುರುವಾಗಿದೆ ಅಷ್ಟೇ..
ಆದ್ರೆ ನಾವು ಪ್ರಧಾನಮಂತ್ರಿ ಕೇಂದ್ರ ಗೃಹ ಸಚಿವರು ಕೈಗಾರಿಕೆ ಸಚಿವರ ಜೊತೆ ನಾವು ಮಾತನಾಡಿದ್ದೇವೆ..
ನಮ್ಮ ಯಡಿಯೂರಪ್ಪನವರು ಹಾಗೂ ಎಂಪಿಯವರು ಸಹ ವಿಶೇಷವಾಗಿ ಆದ್ಯತೆ ಕೊಟ್ಟು ಮಾತನಾಡಿದ್ದಾರೆ..
ಕಳೆದ ವಾರ ಸಿಎಂ ಶಿವಮೊಗ್ಗದಲ್ಲೂ ಸಹ ಕಾರ್ಖಾನೆ ಮುಚ್ಚಲು ಬಿಡೋದಿಲ್ಲ ಇದನ್ನ ನಾವು ಉಳಿಸಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ..
ಕಾರ್ಖಾನೆಯನ್ನ ಖಾಸಗೀಕರಣ ಮಾಡಬೇಕೋ ಅಥಾವ ಸರ್ಕಾರ ನಡೆಸಬೇಕೋ ಚರ್ಚೆ ನಡೆಸುತ್ತಿದ್ದೇವೆ..
ಲೋಕಸಭೆಯಲ್ಲಿ ನಿನ್ನೆಯ ಸ್ಟೆಟಸ್ ಏನಿದೆಯೋ ಅದನ್ನ ಕೊಟ್ಟಿದ್ದಾರೆ.
ನನೆಗೂ ಇದ್ರ ಬಗ್ಗೆ ವಿಷಾದವಿದೆ..
ಈ ಕಾರ್ಖಾನೆ ಮುಚ್ಚಬಾರದು..ಯಾವುದಾದರೂ ರೀತಿಯಲ್ಲಿ ನಡೆಯಬೇಕು..
ನಮ್ಮ ರಾಜ್ಯದ ಹೆಮ್ಮೆಯ ಕಾರ್ಖಾನೆ ಇದು..
ವಿಶ್ವೇಶ್ವರಯ್ಯನವರು ಪ್ರಾರಂಭ ಮಾಡಿದ್ದು..
ನಮ್ಮ ಮೈಸೂರು ಮಹರಾಜರು ಮಾಡಿದ ಉದ್ಯಮ..
ಕಾರ್ಖಾನೆ ಮುಂದುವರೆಸಲು ಏನ್ ಮಾಡಬೇಕು ಅದನ್ನ ನಾವು ಮಾಡುತ್ತೇವೆ..
ಈ ಕಾರ್ಖಾನೆ ಪರವಾಗಿ ನಮ್ಮ ಸರ್ಕಾರವಿದೆ..*

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನ್ಯಾಯಾಲಯಗಳು ನಮ್ಮ ಅಧೀನದಲ್ಲಿ ಕಾರ್ಯನಿರ್ವಹಿಸುವುದಿಲ್ಲ! ಪ್ರತಿಪಕ್ಷಗಳ ಆರೋಪ ತಳ್ಳಿ ಹಾಕಿದ ಶಾ

Tue Feb 14 , 2023
ನವದೆಹಲಿ: ಪ್ರತಿಪಕ್ಷಗಳ ನಾಯಕರನ್ನು ಕೇಂದ್ರ ತನಿಖಾ ಸಂಸ್ಥೆಗಳ ಮೂಲಕ ಪೀಡಿಸಲಾಗುತ್ತಿದೆ ಎಂಬ ಆರೋಪ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಸಾಮಾನ್ಯವಾಗಿದೆ. ಸಿಬಿಐ, ಜಾರಿ ನಿರ್ದೇಶನಾಲಯಗಳನ್ನು ಬಳಸಿಕೊಂಡು ನಾಯಕರನ್ನು ಹಣಿಯಲಾಗುತ್ತದೆ. ಆದರೆ, ಈ ಆರೋಪವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ತಳ್ಳಿ ಹಾಕಿದ್ದಾರೆ. ಅಲ್ಲದೇ, “ಪ್ರತಿಪಕ್ಷಗಳಿಗೆ ಗದ್ದಲ ಮಾಡುವುದಷ್ಟೇ ಗೊತ್ತಿದೆ. ನ್ಯಾಯಾಲಯಗಳೇನೂ ನಮ್ಮ ಅಧೀನದಲ್ಲಂತೂ ಇಲ್ಲ” ಎಂದು ಹೇಳಿದ್ದಾರೆ. ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್‌ ವಿಧಾನಸಭೆ ಚುನಾವಣೆ […]

Advertisement

Wordpress Social Share Plugin powered by Ultimatelysocial