ಸಬ್ಬಸಿಗೆ ಸೊಪ್ಪಿನ ರಸವನ್ನು ಸೇವಿಸಿದರೆ ಏನಾಗುತ್ತದೆ ಗೊತ್ತಾ?|Dill leaves|

 

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ತೂಕ ಹೆಚ್ಚಳ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ತೂಕವನ್ನು ಇಳಿಸಿಕೊಳ್ಳಲು ಕೆಲವರು ಹರಸಾಹಸ ಮಾಡುತ್ತಾರೆ. ವಿವಿಧ ರೀತಿಯ ವ್ಯಾಯಾಮಗಳನ್ನು, ವಿವಿಧ ರೀತಿಯ ಮನೆಮದ್ದುಗಳನ್ನು ಸೇವಿಸುತ್ತಾರೆ. ಆದರೆ ಯಾವುದರಲ್ಲಿಯೂ ನಿಮ್ಮ ತೂಕ ಇಳಿಕೆಯಾಗದಿದ್ದರೆ ಒಮ್ಮೆ ಸಬ್ಬಸಿಗೆ ಸೊಪ್ಪನ್ನು ಈ ರೀತಿ ಬಳಸಿ ನೋಡಿ.

ಆಯುರ್ವೇದದಲ್ಲಿ ಸಬ್ಬಸಿಗೆ ಸೊಪ್ಪನ್ನು ಗಿಡಮೂಲಿಕೆಯಾಗಿ ಪರಿಗಣಿಸಲಾಗುತ್ತದೆ. ಇದರ ಸೊಪ್ಪು ಮಾತ್ರವಲ್ಲ ಹೂಗಳು ಮತ್ತು ಬೀಜಗಳು ಕೂಡ ಆರೋಗ್ಯಕ್ಕೆ ಉತ್ತಮವಾಗಿದೆ.

ಇದರಲ್ಲಿ ಔಷಧೀಯ ಗುಣಗಳಿವೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಗಳು ಸಮೃದ್ಧವಾಗಿವೆ. ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಇದು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಹಾಗಾಗಿ ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸಲು ಸಬ್ಬಸಿಗೆ ಸೊಪ್ಪನ್ನು ಹಲವು ವಿಧಗಳಲ್ಲಿ ಬಳಸಬಹುದು. ನೀವು ಈ ಸೊಪ್ಪನ್ನು ಗ್ರೀನ್ ಟೀ ಯಲ್ಲಿ ಬೆರೆಸಿ ಸೇವಿಸಬಹುದು. ಇಲ್ಲವಾದರೆ ಇದನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಕಷಾಯ ತಯಾರಿಸಿ ಸೇವಿಸಬಹುದು. ಇದು ಕೊಬ್ಬನ್ನು ವೇಗವಾಗಿ ಕರಗಿಸುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ, ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜನವರಿ 23 ರಂದು ತಮಿಳುನಾಡಿನಲ್ಲಿ ಸಂಪೂರ್ಣ ಲಾಕ್‌ಡೌನ್

Sat Jan 22 , 2022
  ನವದೆಹಲಿ: ಕೋವಿಡ್ -19 ಉಲ್ಬಣವನ್ನು ಗಮನದಲ್ಲಿಟ್ಟುಕೊಂಡು ತಮಿಳುನಾಡು ಸರ್ಕಾರ ಜನವರಿ 23 ರಂದು ಸಂಪೂರ್ಣ ಲಾಕ್‌ಡೌನ್ ಘೋಷಿಸಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ಹಿನ್ನೆಲೆಯಲ್ಲಿ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಹೇಳಿದ್ದಾರೆ.ಭಾನುವಾರದ ಲಾಕ್ಡೌನ್ ಸಮಯದಲ್ಲಿ ಆಹಾರ ವಿತರಣೆ ಸೇರಿದಂತೆ ಅಗತ್ಯ ಸೇವೆಗಳನ್ನು ಮಾತ್ರ ಅನುಮತಿಸಲಾಗುತ್ತದೆ.ರೈಲು ನಿಲ್ದಾಣಗಳು ಮತ್ತು ಬಸ್ ನಿಲ್ದಾಣಗಳಿಗೆ ಆಗಮಿಸುವ ಜನರು ಆಟೋ-ರಿಕ್ಷಾಗಳು, ಕರೆ ಟ್ಯಾಕ್ಸಿಗಳು ಮತ್ತು ಇತರ ವಾಹನಗಳ ಸೌಲಭ್ಯ […]

Advertisement

Wordpress Social Share Plugin powered by Ultimatelysocial