ಸಾರಿಗೆ ನೌಕರರ ಮರು ನೇಮಕಕ್ಕೆ ಶ್ರೀರಾಮುಲು ಚಾಲನೆ ನೀಡಿದ್ದಾರೆ.

ಬೆಂಗಳೂರು : ಸರ್ಕಾರದ ವಿರುದ್ಧ ಮುಷ್ಕರ ನಡೆಸಿ ವಜಾ ಆಗಿದ್ದ ಸಾರಿಗೆ ನೌಕರರಿಗೆ ಸಾರಿಗೆ ಸಚಿವ ಶ್ರೀರಾಮುಲು ಸಿಹಿಸುದ್ದಿ ನೀಡಿದ್ದು, ಸಾರಿಗೆ ನೌಕರರ ಮರು ನೇಮಕಕ್ಕೆ ಶ್ರೀರಾಮುಲು ಚಾಲನೆ ನೀಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಮುಷ್ಕರ ನಡೆಸಿ ಒಟ್ಟು 1,610 ಸಿಬ್ಬಂದಿ ಮುಷ್ಕರದಿಂದ ಕೆಲಸ ಕಳೆದುಕೊಂಡಿದ್ದರು.ಇದೀಗ ಮುಖ್ಯಮಂತ್ರಿ ಸೂಚನೆ ಮೇರೆಗೆ ಮರು ನೇಮಕಾತಿ ಆಗುತ್ತಿದೆ ಎಂದು ತಿಳಿಸಿದರು.ಕಾನೂನಲ್ಲಿ ಅವಕಾಶ ಇಲ್ಲದಿದ್ದರೂ ಮರುನೇಮಕ ಮಾಡಿಕೊಳ್ಳಲಾಗುತ್ತಿದೆ. ಇನ್ನುಳಿದ 1520 ಸಿಬ್ಬಂದಿ ಮರುನೇಮಕ ಹಂತ ಹಂತವಾಗಿ ಆಗಲಿದೆ. ಕೊರೋನಾ, ತೈಲದರಗಳ ಬೆಲೆ ಏರಿಕೆಯಿಂದಾಗಿ ಸಾರಿಗೆ ನಿಗಮಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾವೆ. ನೌಕರರಿಗೆ ಸಂಬಳ ಕೂಡ ನೀಡಲಾಗದಷ್ಟು ಸಮಸ್ಯೆ ಎದುರಿಸುವಂತೆ ಆಗಿದೆ. ಇದರ ನಡುವೆಯೂ ವೋಲ್ವೋ ಪ್ರಯಾಣದರ ಇಳಿಕೆ ಮಾಡಲಾಗಿದೆ. ಕೆ ಎಸ್ ಆರ್ ಟಿ ಸಿ ಪ್ರಯಾಣದರ ಏರಿಕೆ ಮಾಡೋದಿಲ್ಲ ಅಂತ ತಿಳಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗ್ರೇಟ್ ಖಲಿ ಬಿಜೆಪಿಗೆ ಸೇರ್ಪಡೆಗೊಂಡರು: 7'1'' ಮಾಜಿ WWE ಕುಸ್ತಿಪಟು ಬಗ್ಗೆ ಎಲ್ಲವನ್ನೂ ತಿಳಿಯಿರಿ;

Fri Feb 11 , 2022
ಮಾಜಿ WWE ಕುಸ್ತಿಪಟು ದಲೀಪ್ ಸಿಂಗ್ ರಾಣಾ ಅಕಾ ದಿ ಗ್ರೇಟ್ ಖಲಿ ಗುರುವಾರ ಜಿತೇಂದರ್ ಸಿಂಗ್ ಅವರ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಿದರು. ಗ್ರೇಟ್ ಖಲಿ ವೃತ್ತಿಪರ ಕುಸ್ತಿಪಟು, ಕುಸ್ತಿ ಪ್ರಚಾರಕ ಮತ್ತು ಹಲವಾರು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಖಲಿ ಪಂಜಾಬಿ ಹಿಂದೂ ರಜಪೂತ ಮತ್ತು ಹಿಮಾಚಲ ಪ್ರದೇಶದ ಸಿರ್ಮೌರ್‌ನ ಧಿರೈನಾದಲ್ಲಿ ಜನಿಸಿದರು. ಅವರು ಅಕ್ರೋಮೆಗಾಲಿಯಿಂದ ಬಳಲುತ್ತಿದ್ದಾರೆ, ಇದು ಅವರ ದೈತ್ಯಾಕಾರದ ಮತ್ತು ಗಲ್ಲದ ಮುಂಚಾಚಿರುವಿಕೆಗೆ ಕಾರಣವಾಗಿದೆ. […]

Advertisement

Wordpress Social Share Plugin powered by Ultimatelysocial