ಈಗಿನ ಕಾಲದಲ್ಲಿ ನಡೆಯುವುದೆ ಕಷ್ಟ ಅಂತಹದರಲ್ಲಿ ಆಟೋರೀಕ್ಷವನ್ನ ಕೇವಲ 48 ನಿಮಿಷದಲ್ಲಿ ತನ್ನ ತೋಳ ಬಲದಲ್ಲಿ ಎಳೆದು ಸ್ನೇಹಿತರ ಸವಾಲುನ್ನು ಮೆಟ್ಟಿ ನಿಂತಿದ್ದಾರೆ ಈ ಧೀರ ಅಮೋಘ ಸಿದ್ಧ. ಹೌದು ಇವರ ಹೆಸರಿ ಅಮೋಘಸಿದ್ಧ ವಿಜಯಪುರ ಜಿ. ಸಿಂದಗಿ ತಾ. ಹಂದಿಗನೂರು ಗ್ರಾಮದವರು. ಕೆಎಸ್ ಆರ್ ಟಿಸಿ ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.ನಾಗರ ಪಂಚಮಿ ಹಿನ್ನೆಲೆ ಗೆಳೆಯರು ಮನರಂಜನಾ ಕ್ರಿಡೆ ಸವಲು ಹಾಕಿದ್ದರು. 1 ಗಂಟೆಯಲ್ಲಿ ಟಂಟಂ ಎಳೆಯಲು ಸವಾಲು ಹಾಕಿದ್ದರು.ಸವಾಲನ್ನು ಸ್ವೀಕರಿಸಿದ ಅಮೋಘ ಸಿದ್ಧ 48 ನಿಮಿಷದಲ್ಲ 5 ಕಿ.ಮೀ ಎಳೆದು ಸಾಧನೆ ಮಾಡಿದ್ದಾರೆ.ಅಮೋಘಸಿದ್ಧ ಆಟೋ ಎಳೆಯುವಾಗ ಅವರ ಸ್ನೇಹಿತರು ಉರಿದುಂಬಿಸಿದ್ದು,ವಿಶೇಷವಾಗಿತ್ತು.
48 ನಿಮಿಷಗಳಲ್ಲಿ 5 ಕಿ.ಮೀ ಆಟೋ ಎಳೆದ ಭೂಪ
Please follow and like us: