155 ಕಿ.ಮೀ ವೇಗದಲ್ಲಿ ಬೌಲ್‌ ಮಾಡಿ ಬುಮ್ರಾ ದಾಖಲೆ ಮುರಿದ ಉಮ್ರಾನ್‌ ಮಲಿಕ್‌

 

ಮಂಗಳವಾರ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲನೇ ಟಿ20 ಪಂದ್ಯದಲ್ಲಿ ಭಾರತ ತಂಡ ಎರಡು ರನ್‌ ರೋಚಕ ಗೆಲುವು ಸಾಧಿಸಿತು. ಆ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು. ಈ ಪಂದ್ಯದಲ್ಲಿ ದೀಪಕ್‌ ಹೂಡ, ಶಿವಂ ಮಾವಿ, ಉಮ್ರಾನ್‌ ಮಲಿಕ್‌ ಹಾಗೂ ಅಕ್ಷರ್‌ ಪಟೇಲ್ ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಗಮನ ಸೆಳೆದರು.ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲಿಯೇ ಶಿವಂ ಮಾವಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದರು. ಬೌಲ್‌ ಮಾಡಿದ 4 ಓವರ್‌ಗಳಿಗೆ ಕೇವಲ 22 ರನ್‌ ನೀಡಿ ಪ್ರಮುಖ 4 ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ಎಲ್ಲರ ಗಮನ ಸೆಳೆದರು. ಇವರಿಗೆ ಮತ್ತೊಂದು ತುದಿಯಲ್ಲಿ ಉಮ್ರಾನ್‌ ಮಲಿಕ್‌ ಅತ್ಯುತ್ತವಾಗಿ ಸಾಥ್‌ ನೀಡಿದರು.ತಮ್ಮ ವೇಗದ ಬೌಲಿಂಗ್‌ ಮೂಲಕ ಉಮ್ರಾನ್‌ ಮಲಿಕ್‌ ಎಲ್ಲರ ಗಮನ ಸೆಳೆದಿದ್ದರು. ಅದರಲ್ಲೂ ಅವರು ಶ್ರೀಲಂಕಾ ತಂಡದ ನಾಯಕ ದಸೂನ್ ಶಾನಕ ಅವರನ್ನು ನಿರ್ಣಾಯಕ ಸಮಯದಲ್ಲಿ 155 ಕಿ.ಮೀ ವೇಗದಲ್ಲಿ ಬೌಲ್‌ ಮಾಡಿ ಔಟ್‌ ಮಾಡಿದರು. 27 ಎಸೆತಗಳಲ್ಲಿ 45 ರನ್‌ ಗಳಿಸ ಆಡುತ್ತಿದ್ದ ದಸೂನ್‌ ಶಾನಕ ಶ್ರೀಲಂಕಾ ತಂಡವನ್ನು ಗೆಲುವಿನ ದಡ ಸೇರಿಸುವ ಪ್ರಯತ್ನದಲ್ಲಿದ್ದರು. ಆದರೆ, ಇದಕ್ಕೆ ಉಮ್ರಾನ್‌ ಮಲಿಕ್‌ ಅವಕಾಶ ಮಾಡಿಕೊಡಲಿಲ್ಲ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶೊಯೇಬ್‌ ಅಖ್ತರ್‌ ವಿಶ್ವ ದಾಖಲೆ ಅಳಿಸಿಹಾಕುವ ವಿಶ್ವಾಸ ಹೊರಹಾಕಿದ ಉಮ್ರಾನ್‌ ಮಲಿಕ್!

Wed Jan 4 , 2023
  ತಮ್ಮಲ್ಲಿನ ಮಿಂಚಿನ ವೇಗದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಯುವ ವೇಗದ ಬೌಲರ್ ಉಮ್ರಾನ್‌ ಮಲಿಕ್‌ ಭಾರಿ ಸದ್ದು ಮಾಡಿದ್ದಾರೆ. ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಪರ ನೆಟ್‌ ಬೌಲರ್‌ ಆಗಿ ಮೊದಲು ಕಾಣಿಸಿಕೊಂಡ ಜಮ್ಮು-ಕಾಶ್ಮೀರದ ಯುವ ವೇಗದ ಬೌಲರ್‌ ಇದೀಗ ಭಾರತ ತಂಡದ ಭವಿಷ್ಯದ ತಾರೆಯಾಗಿದ್ದಾರೆ. ಗಂಟೆಗೆ 150 ಕಿ.ಮೀ ವೇಗದಲ್ಲಿ ಬೌಲಿಂಗ್‌ ಮಾಡುವ ಸಾಮರ್ಥ್ಯ ಹೊಂದಿರುವ ಉಮ್ರಾನ್‌, ಐಪಿಎಲ್‌ 2022 […]

Advertisement

Wordpress Social Share Plugin powered by Ultimatelysocial