ಶೊಯೇಬ್‌ ಅಖ್ತರ್‌ ವಿಶ್ವ ದಾಖಲೆ ಅಳಿಸಿಹಾಕುವ ವಿಶ್ವಾಸ ಹೊರಹಾಕಿದ ಉಮ್ರಾನ್‌ ಮಲಿಕ್!

 

ತಮ್ಮಲ್ಲಿನ ಮಿಂಚಿನ ವೇಗದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಯುವ ವೇಗದ ಬೌಲರ್ ಉಮ್ರಾನ್‌ ಮಲಿಕ್‌ ಭಾರಿ ಸದ್ದು ಮಾಡಿದ್ದಾರೆ. ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಪರ ನೆಟ್‌ ಬೌಲರ್‌ ಆಗಿ ಮೊದಲು ಕಾಣಿಸಿಕೊಂಡ ಜಮ್ಮು-ಕಾಶ್ಮೀರದ ಯುವ ವೇಗದ ಬೌಲರ್‌ ಇದೀಗ ಭಾರತ ತಂಡದ ಭವಿಷ್ಯದ ತಾರೆಯಾಗಿದ್ದಾರೆ. ಗಂಟೆಗೆ 150 ಕಿ.ಮೀ ವೇಗದಲ್ಲಿ ಬೌಲಿಂಗ್‌ ಮಾಡುವ ಸಾಮರ್ಥ್ಯ ಹೊಂದಿರುವ ಉಮ್ರಾನ್‌, ಐಪಿಎಲ್‌ 2022 ಟೂರ್ನಿಯಲ್ಲಿ 157 ಕಿ.ಮೀ ವೇಗದಲ್ಲಿ ಬೌಲಿಂಗ್‌ ಮಾಡಿ ದಾಖಲೆ ಕೂಡ ಬರೆದಿದ್ದರು.ಐಪಿಎಲ್‌ ಇತಿಹಾಸದಲ್ಲಿ ಅತಿ ವೇಗವಾಗಿ ಬೌಲಿಂಗ್‌ ಮಾಡಿದ ಭಾರತೀಯ ವೇಗಿ ಎನಿಸಿಕೊಂಡಿರುವ ಉಮ್ರಾನ್‌ ಮಲಿಕ್‌ ಅವರನ್ನು ಸನ್‌ರೈಸರ್ಸ್‌ ಹೈದರಾಬಾದ್‌ ತಂಡ 4 ಕೋಟಿ ರೂ.ಗಳ ಭಾರಿ ಮೊತ್ತ ನೀಡಿ ಉಳಿಸಿಕೊಂಡಿತ್ತು. ಐಪಿಎಲ್‌ 2022 ಟೂರ್ನಿಯಲ್ಲಿ ಆಡಿದ 14 ಪಂದ್ಯಗಳಲ್ಲಿ ಉಮ್ರಾನ್ 22 ವಿಕೆಟ್‌ಳನ್ನು ಪಡೆದು ಮಿಂಚಿದ್ದರು. ಪರಿಣಾಮ ಜೂನ್‌ನಲ್ಲಿ ನಡೆದ ಐರ್ಲೆಂಡ್‌ ವಿರುದ್ಧದ ಸರಣಿಗೆ ಆಯ್ಕೆಯಾಗಿ ಭಾರತ ತಂಡದಲ್ಲಿ ಆಡುವಮೂಲಕಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು.ಅಂದಹಾಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ವೇಗದಲ್ಲಿ ಬೌಲಿಂಗ್‌ ಮಾಡಿದ ದಾಖಲೆ ಪಾಕಿಸ್ತಾನ ತಂಡದ ವೇಗಿ ಶೊಯೇಬ್‌ ಅಖ್ತರ್‌ ಅವರ ಹೆಸರಲ್ಲಿದೆ. 2003ರ ಒಡಿಐ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ಎದುರು ಅಖ್ತರ್‌ ಗಂಟೆಗೆ 161.3 ಕಿ.ಮೀ ವೇಗದಲ್ಲಿ ಬೌಲಿಂಗ್‌ ಮಾಡಿದ್ದರು. ಈ ದಾಖಲೆಯನ್ನು ಉಮ್ರಾನ್‌ ಮಲಿಕ್‌ ಮುರಿಯಲಿದ್ದಾರೆ ಎಂದೇ ಕ್ರಿಕೆಟ್‌ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ. ಈ ಬಗ್ಗೆ ಮಾತನಾಡಿರುವ ಉಮ್ರಾನ್‌ ಮಲಿಕ್‌ ಮುಂದೊಂದು ದಿನ ಅಖ್ತರ್‌ ದಾಖಲೆ ಮುರಿಯುವ ವಿಶ್ವಾಸ ಹೊರಹಾಕಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೋಡಕಾ ಗೊಡಾವಣಗೆ ಆಕಸ್ಮಿಕ ಬೆಂಕಿ ಅಪಾರ ಪ್ರಮಾಣದ ಮೋಡಕಾ ಸಾಮಾನುಗಳು ನಾಶ.

Thu Jan 5 , 2023
ಮೋಡಕಾ ಗೊಡಾವಣಗೆ ಆಕಸ್ಮಿಕ ಬೆಂಕಿ ಹತ್ತಿ ಅಪಾರ ಪ್ರಮಾಣದ ಪ್ಲಾಸ್ಟಿಕ್ ಹಾಗೂ ತಗಡಿನ ಮೊಡ್ಕಾ ಸಾಮಾನುಗಳು ಸುಟ್ಟು ಕರಕಲಾಗಿವೆ ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಹೊರವಲಯದಲ್ಲಿರುವ ಬಾದಾಮಿ ಮುಖ್ಯ ರಸ್ತೆಯಲ್ಲಿ ದುರ್ಗಾ ಬಾರ&ರೆಸ್ಟೋರೆಂಟ ಎದುರಿಗಿನ ಮೋಡಕಾ ಗೊಡಾವಣದಲ್ಲಿ ನಡೆದ ಘಟನೆ. ನರಸಪ್ಪ ಕಿಲಬನೂರ ಎಂಬುವವರ ಗೊಡಾವಣ ಇದಾಗಿದೆ. ಕೆಲಸಗಾರರು ಭಾರಿ ಗಾತ್ರದ ಕೆಬ್ಬಣವನ್ನು ಗ್ಯಾಸ ವೆಲ್ಡಿಂಗನಿಂದ ಕಟಿಂಗ ಮಾಡುವ ವೇಳೆಯಲ್ಲಿ ಈ ಅವಘಡ ಸಂಭವಿಸಿದೆ ಎಂದು ಮಾಲಕರ ಸಂಸಯವಾಗಿದೆ. ಸ್ಥಳಕ್ಕೆ […]

Advertisement

Wordpress Social Share Plugin powered by Ultimatelysocial