ಮುಂಬೈ ತಲುಪಿದ ರಾಯಲ್ ಚಾಲೆಂಜರ್ಸ್ ,

ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್‌ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಮಾರ್ಚ್ 4ರಿಂದ ಅದ್ದೂರಿ ಲೀಗ್‌ಗೆ ಚಾಲನೆ ಸಿಗಲಿದೆ. ಮೊದಲ ಆವೃತ್ತಿಯಲ್ಲಿ ಎಲ್ಲಾ ಪಂದ್ಯಗಳು ಮುಂಬೈನಲ್ಲಿ ನಡೆಯಲಿದ್ದು, ಎಲ್ಲಾ ತಂಡಗಳು ಮುಂಬೈಗೆ ಆಗಮಿಸುತ್ತಿವೆ.ಮಹಿಳಾ ಪ್ರೀಮಿಯರ್ ಲೀಗ್‌ನ ಬಲಿಷ್ಠ ತಂಡ ಎಂದೇ ಹೇಳಲಾಗುತ್ತಿರುವ ರಾಯಲ್ ಚಾಲೆಜರ್ಸ್ ಬೆಂಗಳೂರು ತಂಡ ಕೂಡ ಮಂಗಳವಾರ ಮುಂಬೈಗೆ ತಲುಪಿದೆ.ಮುಂಬೈಗೆ ತೆರಳುವ ಮುನ್ನ ಆರ್‌ಸಿಬಿ ಆಟಗಾರರು ಬೆಂಗಳೂರಿನಲ್ಲಿ ಅಭ್ಯಾಸ ಮಾಡಿದ್ದರು.

ಮಾರ್ಚ್ 4ರಂದು ಪಂದ್ಯಾವಳಿ ಆರಂಭವಾಗಲಿದ್ದು, ಮಾರ್ಚ್ 5ರಂದು ಬ್ರಾಬೌರ್ನೆ ಅಂಗಳದಲ್ಲಿ ಭಾನುವಾರ 3.30ಕ್ಕೆ ಆರಂಭವಾಗುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ತನ್ನ ಮೊದಲ ಪಂದ್ಯಕ್ಕೆ ಮುನ್ನ ರಣತಂತ್ರ ರೂಪಿಸಲು ಮತ್ತು ಅಭ್ಯಾಸ ಮಾಡಲು ಮುಂಬೈಗೆ ತೆರಳಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಮುಂಬೈಗೆ ತಲುಪಿರುವ ಬಗ್ಗೆ ಮಾಹಿತಿ ನೀಡಿದೆ. ಫೋಟೊಗಳನ್ನು ಹಂಚಿಕೊಂಡಿರುವ ಅದು ಬಂದು ತಲುಪಿದ್ದೇಬೆ, ನಮಸ್ಕಾರ ಮುಂಬೈ, ಎಂದು ಶೀರ್ಷಿಕೆ ನೀಡಿದೆ.

ಚೊಚ್ಚಲ ಆವೃತ್ತಿಯಲ್ಲಿ 5 ತಂಡಗಳು ಭಾಗಿ

ಮಹಿಳಾ ಪ್ರೀಮಿಯರ್ ಲೀಗ್‌ನ ಮೊದಲ ಆವೃತ್ತಿಯಲ್ಲಿ ಒಟ್ಟು 5 ತಂಡಗಳು ಆಡಲಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಜೈಂಟ್ಸ್, ಯುಪಿ ವಾರಿಯರ್ಸ್ ತಂಡಗಳು ಮೊದಲ ಆವೃತ್ತಿಯಲ್ಲಿ ಪ್ರಶಸ್ತಿಗಾಗಿ ಸೆಣೆಸಲಿವೆ.

ಮೊದಲ ಆವೃತ್ತಿಯ ಎಲ್ಲಾ ಪಂದ್ಯಗಳು ಮುಂಬೈನ ಡಿವೈ ಪಾಟೀಲ್ ಮತ್ತು ಬ್ರಾಬೌರ್ನೆ ಸ್ಟೇಡಿಯಂನಲ್ಲಿ ನಡೆಯಲಿವೆ. ಆರ್ ಸಿಬಿ ತಂಡದ ಆಟಗಾರರು ಸದ್ಯ ಮುಂಬೈನಲ್ಲಿದ್ದು, ಮಂಗಳವಾರ ವಿಶ್ರಾಂತಿ ಪಡೆಯಲಿದ್ದಾರೆ. ಬುಧವಾರದಿಂದ ಮುಂಬೈನಲ್ಲಿ ಅಭ್ಯಾಸವನ್ನು ಆರಂಭಿಸಲಿದ್ದಾರೆ.

ಆರ್ ಸಿಬಿ ತಂಡಕ್ಕೆ ಭಾರತದ ಸ್ಟಾರ್ ಬ್ಯಾಟರ್ ಸ್ಮೃತಿ ಮಂದಾನ ನಾಯಕಿಯಾಗಿದ್ದಾರೆ. ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಂಡದ ಮೆಂಟರ್ ಆಗಿ ನೇಮಕಗೊಂಡಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ : ಸ್ಮೃತಿ ಮಂದಾನ (ನಾಯಕಿ), ದಿಶಾ ಕಸತ್, ರಿಚಾ ಘೋಷ್ (ವಿಕೆಟ್ ಕೀಪರ್‌), ಇಂದ್ರಾಣಿ ರಾಯ್, ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ಎರಿನ್ ಬರ್ನ್ಸ್, ಶ್ರೇಯಾಂಕ ಪಾಟೀಲ್, ಕನಿಕಾ ಅಹುಜಾ, ಆಶಾ ಶೋಬನಾ, ಹೀಥರ್ ನೈಟ್, ಡೇನ್ ವ್ಯಾನ್ ನೀಕರ್ಕ್, ಪೂನಂ ಖೇಮ್ನಾರ್, ರೇಣುಕಾ ಸಿಂಗ್, ಪ್ರೀತಿ ಬೋಸ್, ಕೋಮಲ್ ಜಂಜಾದ್.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಶ್ಮೀರದಲ್ಲಿ ಭಯೋತ್ಪಾದನೆ ನಾಶವಾಗಿದೆ ಎಂದು ಸರಕಾರ ಹೇಳುತ್ತಿದೆ!

Wed Mar 1 , 2023
ಕಾಶ್ಮೀರಿ ಹಿಂದುಗಳ ಹತ್ಯೆಯ ನಂತರ ಮೆಹಬೂಬ್ ಮುಫ್ತಿ ಇವರ ಮೊಸಳೆ ಕಣ್ಣೀರು ! ಶ್ರೀನಗರ (ಜಮ್ಮು ಕಾಶ್ಮೀರ) – ಪೀಪಲ್ಸ್ ಡೆಮೋಕ್ರೊಟಿಕ್ ಪಾರ್ಟಿಯ (ಪಿ.ಡಿ.ಪಿ.ಯ) ಅಧ್ಯಕ್ಷ ಮೆಹಬೂಬ ಮುಫ್ತಿ ಇವರು ಕಾಶ್ಮೀರದಲ್ಲಿ ಕಾಶ್ಮೀರಿ ಹಿಂದೂ ಸಂಜಯ ಶರ್ಮ ಇವರನ್ನು ಭಯೋತ್ಪಾದಕರು ಹತ್ಯೆ ಮಾಡಿದ ನಂತರ ದುಃಖ ವ್ಯಕ್ತಪಡಿಸುತ್ತಾ ‘ಶರ್ಮಾ ಇವರ ಹತ್ಯೆಯ ಬಗ್ಗೆ ಮುಸಲ್ಮಾನರಿಗೆ ನಾಚಿಕೆ ಆಗುತ್ತಿದೆ. ಕೇಂದ್ರ ಸರಕಾರ ಭಯೋತ್ಪಾದನೆ ನಾಶವಾಗಿದೆ ಎಂದು ದಾವೆ ಮಾಡುತ್ತದೆ. ಹಾಗಿದ್ದರೆ, ಶರ್ಮಾ ಇವರನ್ನು […]

Advertisement

Wordpress Social Share Plugin powered by Ultimatelysocial