ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಆಸ್ಟ್ರೇಲಿಯಾದ `ಆರೋನ್ ಫಿಂಚ್’ ವಿದಾಯ ಘೋಷಣೆ.

ಆಸ್ಟ್ರೇಲಿಯಾ ಟಿ20 ತಂಡದ ನಾಯಕ ಆರೋನ್‌ ಫಿಂಚ್‌ ಅವರು ಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ್ದಾರೆ. ಈ ಮೂಲಕ 12 ವರ್ಷಗಳ ಕ್ರಿಕೆಟ್ ಬದುಕಿಗೆ ನಿವೃತ್ತಿ ಹೇಳಿದ್ದಾರೆ.2024 ರ ಮುಂದಿನ ಟಿ 20 ವಿಶ್ವಕಪ್ ವರೆಗೆ ನಾನು ಆಡುವುದಿಲ್ಲ ಎಂದು ಅರಿತುಕೊಂಡು, ಟಿ20 ನಾಯಕತ್ವದಿಂದ ಕೆಳಗಿಳಿದು ತಂಡಕ್ಕೆ ಸಮಯ ನೀಡಲು ಇದು ಸರಿಯಾದ ಸಮಯ, 12 ವರ್ಷಗಳ ಕಾಲ ಆಸ್ಟ್ರೇಲಿಯಾವನ್ನು ಪ್ರತಿನಿಧಿಸಲು ಮತ್ತು ಸಾರ್ವಕಾಲಿಕ ಶ್ರೇಷ್ಠ ಆಟಗಾರರೊಂದಿಗೆ ಮತ್ತು ವಿರುದ್ಧ ಆಡಲು ಸಾಧ್ಯವಾಗಿರುವುದು ನಂಬಲಾಗದ ಗೌರವವಾಗಿದೆ’ ಎಂದು ಆರೋನ್ ಫಿಂಚ್ ಹೇಳಿದ್ದಾರೆ.ಫಿಂಚ್ 2018 ರಲ್ಲಿ ಜಿಂಬಾಬ್ವೆ ವಿರುದ್ಧ 76 ಎಸೆತಗಳಲ್ಲಿ 172 ರನ್ ಗಳಿಸುವ ಮೂಲಕ ಟಿ 20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸ್ಕೋರ್ ಮಾಡಿದ ದಾಖಲೆಯನ್ನು ಹೊಂದಿದ್ದಾರೆ. 2013ರಲ್ಲಿ ಇಂಗ್ಲೆಂಡ್ ವಿರುದ್ಧ 156 ರನ್ ಗಳಿಸಿದ್ದ ಟಿ20 ಕ್ರಿಕೆಟ್ನಲ್ಲಿ 3ನೇ ಅತಿ ಹೆಚ್ಚು ಸ್ಕೋರ್ ಮಾಡಿದ ದಾಖಲೆ ಅವರ ಹೆಸರಿನಲ್ಲಿದೆ.ಆರೋನ್‌ ಫಿಂಚ್‌ ಇಂಗ್ಲೆಂಡ್‌ ವಿರುದ್ಧ 2011ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 254 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಆರೋನ್ ಫಿಂಚ್ 19 ಶತಕಗಳೊಂದಿಗೆ 8804 ರನ್‌ಗಳನ್ನು ಸಿಡಿಸಿದ್ದಾರೆ. ಇಲ್ಲಿಯವರೆಗೂ 103 ಟಿ20 ಪಂದ್ಯಗಳಾಡಿರುವ ಅವರು, 76 ಪಂದ್ಯಗಳನ್ನು ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

"ವೀಳ್ಯದೆಲೆ" ಕ್ಯಾನ್ಸರ್‌ನಿಂದ ಹಿಡಿದು ಹತ್ತು ಹಲವು ಕಾಯಿಲೆಗಳಿಗೆ ರಾಮಬಾಣ.

Tue Feb 7 , 2023
  ಹಿಂದೂ ಸಂಪ್ರದಾಯದಲ್ಲಿ ವೀಗೆ ಮಹತ್ವವಾದ ಸ್ಥಾನವಿದೆ. ದೇವರ ಪೂಜೆಯಿಂದ ಹಿಡಿದು ಎಲ್ಲಾ ಶುಭಕಾರ್ಯದಲ್ಲೂ ವೀಳ್ಯದೆಲೆ ಇರಲೇಬೇಕು. ಊಟ ಆದ ಮೇಲೆ ವೀಳ್ಯದೆಲೆ ಸೇವಿಸುವ ಖಷಿಯೇ ಬೇರೆ. ನಮ್ಮ ಹಿರಿಯರು ಹಿಂದಿನ ಕಾಲದಿಂದಾನೂ ಈ ಆಚರಣೆಯನ್ನ ರೂಢಿಸಿಕೊಂಡು ಬಂದಿದ್ದಾರೆ.ಆಯುರ್ವೇದದಲ್ಲಿ ವೀಳ್ಯದೆಲೆ ತನ್ನದೇ ಆದ ಸ್ಥಾನವಿದೆ. ತಾಂಬೂಲದ ಜೊತೆಯಲ್ಲಿ ವೀಳ್ಯದೆಲೆ ಇರಲೇಬೇಕು. ಇಂತಹ ಶುಭಕರ ವೀಳ್ಯದೆಲೆಯಲ್ಲಿ ವಿಟಮಿನ್ ಸಿ, ನಿಯಾಸನ್, ರೈಬೋಫ್ಲೇವಿನ್,ಕೆರಟೀನ್, ಮತ್ತು ಕ್ಯಾಲ್ಸಿಯಂನಂತಹ ಗುಣಗಳಿದ್ದು, ಆರೋಗ್ಯ ಉದ್ದೇಶದಿಂದ ತುಂಬಾನೇ ಒಳ್ಳೆಯದು.ಎಲೆ […]

Advertisement

Wordpress Social Share Plugin powered by Ultimatelysocial