ವಿಜಯಪುರ-ಬಾಗಲಕೋಟೆ ಹಾಲು ಒಕ್ಕೂಟದಿಂದ 39 ಹುದ್ದೆಗಳಿಗೆ ಆಹ್ವಾನ: ಲಕ್ಷ ರೂ.ವರೆಗೆ ಸಂಬಳ

ವಿಜಯಪುರ-ಬಾಗಲಕೋಟೆ ಹಾಲು ಒಕ್ಕೂಟದಿಂದ 39 ಹುದ್ದೆಗಳಿಗೆ ಆಹ್ವಾನ: ಲಕ್ಷ ರೂ.ವರೆಗೆ ಸಂಬಳ

ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದ ವಿವಿಧ ವೃಂದಗಳಲ್ಲಿ ಖಾಲಿ ಇರುವ ಹಲವು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ.

ಒಟ್ಟು ಹುದ್ದೆಗಳು: 39

ಅರ್ಹ ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ನೇರ ನೇಮಕಾತಿ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು. ಎಲ್ಲ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ1, 2ಎ, 2ಬಿ, 3ಎ, 3ಬಿ, ಇತರೆ, ಮಹಿಳಾ, ಮಾಜಿ ಸೈನಿಕ, ಗ್ರಾಮೀಣ, ಕನ್ನಡ ಮಾಧ್ಯಮ, ಅಂಗವಿಕಲ ಹಾಗೂ ಯೋಜನಾ ನಿರಾಶ್ರಿತರು ಎಂದು ಮೀಸಲಾತಿ ನಿಗದಿಪಡಿಸಲಾಗಿದೆ. ಮಹಿಳೆ, ಗ್ರಾಮೀಣ, ಕ.ಮಾ, ಯೋಜನಾ ನಿರಾಶ್ರಿತ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಮೀಸಲಿರುವ ಸ್ಥಾನಗಳಿಗೆ ಅರ್ಹ ಅಭ್ಯರ್ಥಿಗಳು ದೊರಕದೇ ಇದ್ದಲ್ಲಿ, ಆಯಾ ವರ್ಗದ ಇತರ ಅಭ್ಯರ್ಥಿಗಳನ್ನು ನೇಮಕ ಮಾಡಲಾಗುವುದು.

ಹುದ್ದೆ*ಸಂಖ್ಯೆ*ವೇತನ (ರೂ.ಗಳಲ್ಲಿ)

* ಸಹಾಯಕ ವ್ಯವಸ್ಥಾಪಕರು (ಎಎಚ್ ಆಂಡ್ ಎಐ)- 3

* ಸಹಾಯಕ ವ್ಯವಸ್ಥಾಪಕರು (ಎಫ್ ಆಂಡ್ ಎಫ್)- 2

* ಸಿಸ್ಟಮ್ ಅಧಿಕಾರಿ – 2

* ತಾಂತ್ರಿಕ ಅಧಿಕಾರಿ (ಡಿಡಿ-1, ಅಭಿಯಂತರ-1) – 2

* ಮಾರುಕಟ್ಟೆ ಅಧೀಕ್ಷಕ – 1

* ವಿಸ್ತರಣಾಧಿಕಾರಿ ದರ್ಜೆ3 – 8

* ಮಾರುಕಟ್ಟೆ ಸಹಾಯಕ ದರ್ಜೆ2 – 2

* ಕೆಮಿಸ್ಟ್ ದರ್ಜೆ2 – 2

* ಆಡಳಿತ ಸಹಾಯಕ ದರ್ಜೆ2 – 1

* ಲೆಕ್ಕ ಸಹಾಯಕರು ದರ್ಜೆ2 – 4

* ಕಿರಿಯ ಸಿಸ್ಟಂ ಆಪರೇಟರ್ – 2

* ಕಿರಿಯ ತಾಂತ್ರಿಕ (ಬಾಯ್ಲರ್ ಅಟೆಂಡೆಂಟ್-2, ಎಲೆಕ್ಟ್ರಿಷಿಯನ್-3, ರೆಫ್ರಿಜರೇಷನ್-1, ಫಿಟ್ಟರ್-1) – 7

* ಹಾಲು ರವಾನೆಗಾರರು – 4

ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ, ಐಟಿಐ ಪ್ರಮಾಣಪತ್ರ, ಯಾವುದೇ ಪದವಿ, ಬಿಎಸ್ಸಿ, ಬಿಇ, ಬಿ.ಕಾಂ, ಬಿಬಿಎ, ಬಿಬಿಎಂ, ಬಿವಿಎಸ್ಸಿ/ಬಿವಿಎಸ್ಸಿ ಜತೆ ಕಂಪ್ಯೂಟರ್ ಜ್ಞಾನ ಅವಶ್ಯ. ಕೆಲ ಹುದ್ದೆಗಳಿಗೆ ವೃತ್ತಿ ಅನುಭವ ಕೇಳಲಾಗಿದೆ.

ವೇತನ: ಕಿರಿಯ ತಾಂತ್ರಿಕ ಅಧಿಕಾರಿಗೆ ಮಾಸಿಕ 21,400-42,000 ರೂ., ದರ್ಜೆ 2ರ ಹುದ್ದೆಗೆ ಮಾಸಿಕ 27,650-52,650 ರೂ., ದರ್ಜೆ 3ರ ಹುದ್ದೆಗೆ 33,450-62,600 ರೂ., ತಾಂತ್ರಿಕ ಅಧಿಕಾರಿಗೆ 43,100-83,900 ರೂ., ಅಧೀಕ್ಷಕರಿಗೆ 40,900-78,200ರೂ., ವ್ಯವಸ್ಥಾಪಕರಿಗೆ 52,650-97,100 ರೂ. ವೇತನ ಇದೆ.

ವಯೋಮಿತಿ: ಕನಿಷ್ಠ 18 ವರ್ಷ, ಸಾಮಾನ್ಯವರ್ಗಕ್ಕೆ ಗರಿಷ್ಠ 35, ಪ್ರವರ್ಗ 2ಎ, 2ಬಿ, 3ಎ, 3ಬಿಗೆ 38, ಎಸ್ಸಿ, ಎಸ್ಟಿ, ಪ್ರವರ್ಗ 1ಕ್ಕೆ 40ವರ್ಷ. ಒಳಸೇವಾ ಅಭ್ಯರ್ಥಿ, ಮಾಜಿ ಸೈನಿಕ, ಎನ್​ಸಿಸಿ ಇನ್​ಸ್ಟ್ರಕ್ಟರ್, ವಿಧವೆ, ಅಂಗವಿಕಲರಿಗೆ ಹೆಚ್ಚುವರಿ ವಯೋಸಡಿಲಿಕೆ ಇದೆ.

ಆಯ್ಕೆ ವಿಧಾನ: ಆಯ್ದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಗೆ ಆಹ್ವಾನಿಸಲಾಗುವುದು. ಪರೀಕ್ಷೆಯ ಪ್ರವೇಶ ಪತ್ರ, ದಿನಾಂಕ ಹಾಗೂ ಪರೀಕ್ಷೆಯ ಕಾಲಾವಧಿ, ಸ್ಥಳ ಮುಂತಾದ ಮಾಹಿತಿಗಳನ್ನು ಅರ್ಹ ಅಭ್ಯರ್ಥಿಗಳಿಗೆ ಅಂಚೆ ಮೂಲಕ ಹಾಗೂ ಒಕ್ಕೂಟದ ವೆಬ್​ಸೈಟ್​ನಲ್ಲಿ ತಿಳಿಸಲಾಗುವುದು. ಲಿಖಿತ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು 1:5ರ ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುವುದು.

ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಪ್ರವರ್ಗ 1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 500 ರೂ., ಇತರ ಅಭ್ಯರ್ಥಿಗಳಿಗೆ 1,000 ರೂ. ಶುಲ್ಕ ನಿಗದಿಯಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

31ರಂದು ಕರ್ನಾಟಕ ಬಂದ್​​ಗೆ ಕರೆ: ಮತ್ತೆ ದೊಡ್ಡತನ ಮೆರೆದ ಪುನೀತ್ ಪತ್ನಿ ಅಶ್ವಿನಿ

Wed Dec 22 , 2021
ಡಿ.31ರಂದು ಕರ್ನಾಟಕ ಬಂದ್​ಗೆ ಕರೆ: ಕಳೆದ ಕೆಲವು ದಿನಗಳಿಂದ ಮರಾಠಿ (Marathi) ಮತ್ತು ಕನ್ನಡಿಗರ (Kannada) ನಡುವಿನ ನಾನಾ ವಿವಾದಗಳು ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಅದರಲ್ಲೂ ಎಂಇಎಸ್ (MES) ಹೆಸರಿನಲ್ಲಿ ನಡೆಯುತ್ತಿರುವ ನಾನಾ ಘಟನೆಗಳ ವಿರುದ್ಧ ಕನ್ನಡಪರ ಸಂಘಟನೆಗಳು ದೊಡ್ಡ ಮಟ್ಟಿಗೆ ದನಿಯೆತ್ತಿವೆ. ವಾಟಾಳ್ ನಾಗರಾಜ್ (Vatal Nagaraj) ನೇತೃತ್ವದಲ್ಲಿ ಇಂದು ಸಭೆ ಸೇರಿರುವ ಕನ್ನಡಪರ ಸಂಘಟನೆಗಳು ಡಿಸೆಂಬರ್ 31ನೇ ತಾರೀಖು ಕರ್ನಾಟಕ ಬಂದ್ ಗೆ (Karnataka Bandh) ಕರೆ ಕೊಟ್ಟಿವೆ. […]

Advertisement

Wordpress Social Share Plugin powered by Ultimatelysocial