31ರಂದು ಕರ್ನಾಟಕ ಬಂದ್​​ಗೆ ಕರೆ: ಮತ್ತೆ ದೊಡ್ಡತನ ಮೆರೆದ ಪುನೀತ್ ಪತ್ನಿ ಅಶ್ವಿನಿ

Evening Digest: ಡಿ.31ರಂದು ಕರ್ನಾಟಕ ಬಂದ್​​ಗೆ ಕರೆ: ಮತ್ತೆ ದೊಡ್ಡತನ ಮೆರೆದ ಪುನೀತ್ ಪತ್ನಿ ಅಶ್ವಿನಿ: ಇಂದಿನ ಪ್ರಮುಖ ಸುದ್ದಿಗಳು
ಡಿ.31ರಂದು ಕರ್ನಾಟಕ ಬಂದ್​ಗೆ ಕರೆ: ಕಳೆದ ಕೆಲವು ದಿನಗಳಿಂದ ಮರಾಠಿ (Marathi) ಮತ್ತು ಕನ್ನಡಿಗರ (Kannada) ನಡುವಿನ ನಾನಾ ವಿವಾದಗಳು ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಅದರಲ್ಲೂ ಎಂಇಎಸ್ (MES) ಹೆಸರಿನಲ್ಲಿ ನಡೆಯುತ್ತಿರುವ ನಾನಾ ಘಟನೆಗಳ ವಿರುದ್ಧ ಕನ್ನಡಪರ ಸಂಘಟನೆಗಳು ದೊಡ್ಡ ಮಟ್ಟಿಗೆ ದನಿಯೆತ್ತಿವೆ.
ವಾಟಾಳ್ ನಾಗರಾಜ್ (Vatal Nagaraj) ನೇತೃತ್ವದಲ್ಲಿ ಇಂದು ಸಭೆ ಸೇರಿರುವ ಕನ್ನಡಪರ ಸಂಘಟನೆಗಳು ಡಿಸೆಂಬರ್ 31ನೇ ತಾರೀಖು ಕರ್ನಾಟಕ ಬಂದ್ ಗೆ (Karnataka Bandh) ಕರೆ ಕೊಟ್ಟಿವೆ. ಒಂದು ವೇಳೆ ಡಿಸೆಂಬರ್ 31ರ ಒಳಗೆ ಎಂಇಎಸ್​ನ್ನು ನಿಷೇಧಿಸಿದರೆ ಬಂದ್ ನಡೆಸುವುದಿಲ್ಲ, ಇಲ್ಲದಿದ್ದರೆ ಖಂಡಿತವಾಗಿಯೂ ಉಗ್ರ ಹೋರಾಟ ಮಾಡುವುದಾಗಿ ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ಮತ್ತೆ ದೊಡ್ಡತನ ಮೆರೆದ ಪುನೀತ್​ ಪತ್ನಿ ಅಶ್ವಿನಿ

ಪುನೀತ್​ ರಾಜ್​ಕುಮಾರ್​ ದೈಹಿಕವಾಗಿ ಇಂದು ನಮ್ಮ ಜೊತೆ ಇಲ್ಲ. ಅವರು ನಮ್ಮನ್ನು ಅಗಲಿ ಒಂದೂವರೆ ತಿಂಗಳು ಕಳೆದಿದೆ. ಆದರೆ ಇಡೀ ಕರ್ನಾಟಕಕ್ಕೆ ಆವರಿಸಿರುವ ಸೂತಕ ಮಾತ್ರ ಹಾಗಯೇ ಇದೆ. ಪವರ್​ ಸ್ಟಾರ್ ಪುನೀತ್​​ ರಾಜಕುಮಾರ್​ ಒಂದು ಸಿನಿಮಾಗೆ ಡೇಟ್ಸ್​ ನೀಡಿದ್ದರು. ಜೊತೆಗೆ ಆ ನಿರ್ಮಾಪಕರು 2 ಕೋಟಿ ಅಡ್ವಾನ್ಸ್​ ಕೊಟ್ಟಿದ್ದರಂತೆ. ಪುನೀತ್ ನಿಧನದ ನಂತರ ಆ ನಿರ್ಮಾಪಕರು ಕೂಡ ಅಪ್ಪು ಇಲ್ಲ ಎಂಬುದನ್ನು ನೆನೆದು ಕಣ್ಣೀರಿಟ್ಟಿದ್ದರು. ಹಣದ ಬಗ್ಗೆ ಆ ನಿರ್ಮಾಕರು ಯಾರ ಬಳಿಯೂ ಏನೂ ಕೇಳಿಲ್ಲ. ಆದರೂ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರು ಆ ನಿರ್ಮಾಪಕರಿಗೆ ತಾವು ಕೊಟ್ಟಿರುವ 2 ಕೋಟಿ ಹಣವನ್ನು ವಾಪಸ್​ ಪಡೆಯುವಂತೆ ಕರೆ ಮಾಡಿ ಹೇಳಿದ್ದಾರೆ. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮಹಿಳೆಗೆ ಖಾಸಗಿ ಅಂಗ ತೋರಿಸಿದ ಪೇದೆ!

ಪುಂಡ ಪೋಕರಿಗಳ ಎಡೆಮುರಿ ಕಟ್ಟಬೇಕಾದ ಪೊಲೀಸ್​ ಪೇದೆಯೇ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿರುವ ಘಟನೆ ಯಲಹಂಕ ನ್ಯೂಟೌನ್​ ನ ಹೌಸಿಂಗ್​ ಬೋರ್ಡ್​​ ಬಳಿ ನಡೆದಿದೆ. ಆರೋಪಿ ಪೇದೆ ಕೃತ್ಯ ವಿಡಿಯೋದಲ್ಲಿ ಸೆರೆಯಾಗಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ. ಡಿ.20 ಸೋಮವಾರ ರಾತ್ರಿ ಮಹಿಳೆಯೊಬ್ಬರು ಮನೆಯ ಬಳಿ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದರು. ಈ ವೇಳೆ ಮಹಿಳೆಯ ಬಳಿ ಬಂದ ಪಾನಮತ್ತ ಪೇದೆ ಖಾಸಗಿ ಅಂಗವನ್ನು ತೋರಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಆರೋಪಿ ಪೇದೆಯನ್ನು ಅಮೃತಹಳ್ಳಿ ಠಾಣೆಯ ಪೇದೆ ಚಂದ್ರಶೇಖರ್​ ಎಂದು ಗುರುತಿಸಲಾಗಿದೆ. ಪಾರ್ಟಿಯೊಂದರಿಂದ ಬರುತ್ತಿದ್ದ ಪೇದೆ ಶೌಚಕ್ಕಾಗಿ ಬೈಕ್​ ನಿಲ್ಲಿಸಿದ್ದಾನೆ. ಈ ವೇಳೆ ರಸ್ತೆ ಬದಿ ಇದ್ದ ಮಹಿಳೆ ಬಳಿ ಬಂದು ಅಸಭ್ಯವಾಗಿ ವರ್ತಿಸಿದ್ದಾನೆ. ಕೂಡಲೇ ಸ್ಥಳೀಯರು ಬಂದು ಪೇದೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳೀಯರು ಪೇದೆಯ ವಿಡಿಯೋ ಮಾಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಈಶಾನ್ಯ ವಿಭಾದ ಡಿಸಿಪಿ ಭಾವಾ ಅವರು ಆರೋಪಿತ ಪೇದೆ ಚಂದ್ರಶೇಖರ್​ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಹೊಸ ವರ್ಷ ಆಚರಣೆಗೆ ಬ್ರೇಕ್​

ದೇಶದಲ್ಲಿ ಓಮೈಕ್ರಾನ್ (Omicron) ಪ್ರಕರಣ ದಿನೇ ದಿನೇ ಏರಿಕೆ ಕಾಣುತ್ತಿದೆ. ಅದರಲ್ಲೂ ರಾಷ್ಟ್ರ ರಾಜಧಾನಿಯಲ್ಲಿ (Delhi) ಅಧಿಕ ಸಂಖ್ಯೆಯ ಓಮೈಕ್ರಾನ್ ಪ್ರಕರಣ ದಾಖಲಾಗುತ್ತಿರುವ ಹಿನ್ನಲೆ ಹೊಸ ವರ್ಷ ಆಚರಣೆಗೆ (New year Celebration) ಸಾಮೂಹಿಕ ಆಚರಣೆಗೆ ನಿರ್ಬಂಧ ವಿಧಿಸಲಾಗಿದೆ. ಈ ಸಂಬಂಧ ಆದೇಶ ಹೊರಡಿಸಿರುವ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಕ್ರಿಸ್ಮಸ್​ ಮತ್ತು ಹೊಸ ವರ್ಷ ಆಚರಣೆ ಕೂಟ, ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ಜನರು ಗುಂಪುಗೂಡಿ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಇನ್ನಿತರೆ ಆಚರಣೆ ನಡೆಸುವುದನ್ನು ನಿರ್ಬಂಧಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

ದೇಶದಲ್ಲಿ ನಿಮಿಷಕ್ಕೆ 115 ಚಿಕನ್​​ ಬಿರಿಯಾನಿ ಆರ್ಡರ್

ಹೊಸ ವರ್ಷ ಆಗಮನಕ್ಕೂ ಮುನ್ನ ಹಳೆ ವರ್ಷದ ಮೆಲುಕು ಹಾಕುವುದು ಸಂಪ್ರದಾಯ. ಅದೇ ರೀತಿ 2021ರಲ್ಲಿ ತಮ್ಮಲ್ಲಿ ಹೆಚ್ಚು ಆರ್ಡರ್ ಮಾಡಿದ ಆಹಾರ ಯಾವುದು ಎಂಬ ವರದಿಯನ್ನು ಸ್ವಿಗ್ಗಿ (Swiggy 2021 Report) ಬಿಡುಗಡೆ ಮಾಡಿದೆ. ಚಿಕನ್ ಬಿರಿಯಾನಿ ಪ್ರಿಯರ ಸಂಖ್ಯೆ ಹೆಚ್ಚಿದೆ ಎಂದರೆ ತಪ್ಪಾಗಲಾರದು ಕಾರಣ, 2020ರಲ್ಲಿ ನಿಮಿಷಕ್ಕೆ 90 ಚಿಕನ್​ ಬಿರಿಯಾನಿ ಆರ್ಡರ್​ ಮಾಡಿದ ದಾಖಲೆ ಹೊಂದಿತ್ತು. ಇನ್ನು ಇದರಲ್ಲಿ ವೆಜ್​ ಬಿರಿಯಾನಿ ಆರ್ಡರ್​​ ಮಾಡುವ ಸಂಖ್ಯೆ 4.3 ಕಡಿಮೆ ಆಗಿದೆ. ಚೆನ್ನೈ, ಹೈದ್ರಾಬಾದ್, ಕೊಲ್ಕತ್ತಾ ಮತ್ತು ಲಕ್ನೋ ಚಿಕನ್​ ಬಿರಿಯಾನಿ ಆರ್ಡರ್​ ಮಾಡಿದ ಟಾಪ್ ಸ್ಥಾನ ಪಡೆದಿದೆ. ಇನ್ನು ಹಳೆ ಗ್ರಾಹಕರ ಹೊರತಾಗಿ ಹೊಸ ಗ್ರಾಹಕರು ಚಿಕನ ಬಿರಿಯಾನಿಯನ್ನು ಹೆಚ್ಚು ಆರ್ಡರ ಮಾಡಿರುವುದಾಗಿ ಸ್ವಿಗ್ಗಿ ತಿಳಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾತ್ರಿ ವೇಳೆ ಹೀಗಾದರೆ ಅದು ರೂಪಾಂತರಿ ವೈರಸ್​ ಒಮಿಕ್ರಾನ್​ನ ರೋಗಲಕ್ಷಣ!

Wed Dec 22 , 2021
ನವದೆಹಲಿ: ಜಗತ್ತಿನಾದ್ಯಂತ ಆತಂಕ ಸೃಷ್ಟಿಸಿರುವ ಜತೆಗೆ ದಿನೇದಿನೆ ಮತ್ತಷ್ಟು ದೇಶಗಳಿಗೆ ಪ್ರವೇಶಿಸುತ್ತ ತನ್ನ ಕಬಂಧ ಬಾಹುಗಳನ್ನು ಆವರಿಸಿಕೊಳ್ಳುತ್ತಿರುವ ರೂಪಾಂತರಿ ವೈರಸ್ ಒಮಿಕ್ರಾನ್ ದಿನದಿಂದ ದಿನಕ್ಕೂ ಮತ್ತಷ್ಟು ಭೀತಿಯನ್ನು ಹುಟ್ಟಿಸುತ್ತಲೇ ಇದೆ. ಹೊಸ ರೂಪಾಂತರಿ ವೈರಸ್ ಒಮಿಕ್ರಾನ್​ ಸೌಮ್ಯವಾದ ರೋಗಲಕ್ಷಣಗಳನ್ನು ಹೊಂದಿದ್ದರೂ ಅದು ತೀವ್ರವಾಗಿ ಹರಡಬಲ್ಲುದಾದ್ದರಿಂದ ವೇಗವಾಗಿ ವ್ಯಾಪಿಸುತ್ತಿದೆ. ಎಷ್ಟರಮಟ್ಟಿಗೆ ಎಂದರೆ ಈ ಹಿಂದೆ ಕಾಣಿಸಿಕೊಂಡಿರುವ ಡೆಲ್ಟಾ ವೇರಿಯಂಟ್​ಗಿಂತಲೂ ಒಮಿಕ್ರಾನ್​ ಹರಡುವಿಕೆ ಮೂರು ಪಟ್ಟು ಅಧಿಕ. ಈ ಮಧ್ಯೆ ಒಮಿಕ್ರಾನ್​ನ ಪ್ರಮುಖ […]

Advertisement

Wordpress Social Share Plugin powered by Ultimatelysocial