‘ನಾಯಿ ನಾರಾಯಣ ಅಂತಾರೆ ,ಅದು ಕಷ್ಟ-ಸುಖಕ್ಕೆ ಬೇಕು’!

ಬೆಂಗಳೂರು : ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ಮೋದಿ ಮುಂದೆ ನಾಯಿಯಂತೆ ಇರ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.ಈ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ‘ನಾಯಿ ನಾರಾಯಣ ಅಂತಾರೆ , ಅದು ಪ್ರಿಯವಾದ ಪ್ರಾಣಿ’ ಸಿದ್ದರಾಮಯ್ಯ ಏನು ಹೇಳಿದ್ದಾರೋ ಗೊತ್ತಿಲ್ಲ ಎಂದರು.ನಾಯಿ ಬಗ್ಗೆ ನನಗೆ ಗೌರವ ಇದೆ, ನಮ್ಮ ಮನೆಯಲ್ಲೂ ಕೂಡ ನಾಯಿ ಇದೆ. ನಮ್ಮ ರಕ್ಷಣೆಗೆ ನಾಯಿ ಬೇಕು. ಕಷ್ಟಕ್ಕೆ ಸುಖಕ್ಕೆ ನಾಯಿ ಬೇಕು ಎಂದು ಉತ್ತರಿಸಿದ್ದಾರೆ.ದೇಶ ಒಗ್ಗೂಡಿಸಲು ರಾಹುಲ್ ಗಾಂಧಿ ಪಾದಾರ್ಪಣೆ ಮಾಡ್ತಾ ಇದ್ದಾರೆ. ಈ ದೇಶ ನಳಿನ್ ಕುಮಾರ್ ಕಟೀಲ್ ಹೇಳಿಕೆಯನ್ನ ಖಂಡಿಸುತ್ತೆ. ನಾನು ಒಬ್ಬ ಪಕ್ಷದ ಅಧ್ಯಕ್ಷನಾಗಿ ಕಟೀಲ್ ಹೇಳಿಕೆಯನ್ನು ಖಂಡಿಸುತ್ತೇನೆ ಎಂದರು.ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ಮೋದಿ ಮುಂದೆ ನಾಯಿಯಂತೆ ಇರ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿಗೆ ಧೈರ್ಯವಿದ್ರೆ ಅಭಿವೃದ್ಧಿ ಬಗ್ಗೆ ಚರ್ಚೆಗೆ ಬರಲಿ, ಕಾಂಗ್ರೆಸ್ ಧಮ್ ಬಗ್ಗೆ ಪ್ರಶ್ನೆ ಮಾಡುವ ಸಿಎಂ ಬೊಮ್ಮಾಯಿ,ಮೋದಿ ಮುಂದೆ ನಾಯಿಯಂತೆ ಇರ್ತಾರೆ. ಬೊಮ್ಮಾಯಿಗೆ ಧಮ್, ತಾಕತ್ ಇದ್ರೆ ಕೇಂದ್ರದಿಂದ ಅನುದಾನ ತನ್ನಿ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಫೆಬ್ರವರಿ 17ರಂದು ಬಜೆಟ್‌ ಮಂಡನೆ ಸಾಧ್ಯತೆ

Wed Jan 4 , 2023
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಫೆಬ್ರವರಿ 17ರಂದು ತಮ್ಮ ಸರ್ಕಾರದ ಕೊನೆಯ ಬಜೆಟ್ ಮಂಡಿಸಲು ನಿರ್ಧರಿಸಿದ್ದು, ಜನಪ್ರಿಯ ಯೋಜನೆಗಳ ಘೋಷಣೆ ಸಾಧ್ಯತೆ ಇದೆ.ಈ ತಿಂಗಳ 2ನೇ ವಾರದ ನಂತರ ಇಲಾಖಾವಾರು ಸಚಿವರು ಮತ್ತು ಅಧಿಕಾರಿಗಳ ಪ್ರಗತಿ ಪರಿಶೀಲನೆ ಆರಂಭವಾಗಲಿದೆ.ಜ.1ರಂದು ಹೊಸ ವರ್ಷದ ಶುಭಾಷಯ ಕೋರಲು ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ್ದ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಮತ್ತಿತರರಿಗೆ ಬಜೆಟ್ ಮಂಡನೆಯ […]

Advertisement

Wordpress Social Share Plugin powered by Ultimatelysocial