ಶಾಲಿನಿ ಹೆಗಲ ಮೇಲೆ ಗಿಣಿ ಬಂದು ಕೂತಿದೆ,

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗೋ ಸುವರ್ಣ ಸೂಪರ್ ಸ್ಟಾರ್ ರಿಯಾಲಿಟಿ ಶೋ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

ಮನೆಯಲ್ಲಿರೋ ಮಹಿಳೆಯರಿಗೆ ಸಮಯ ಕಳೆಯಲು ಇದು ಒಳ್ಳೆ ಮನರಂಜನಾ ಕಾರ್ಯಕ್ರಮವಾಗಿದೆ.ಸುವರ್ಣ ಸೂಪರ್ ಸ್ಟಾರ್ ರಿಯಾಲಿಟಿ ಶೋ ಜನಪ್ರಿಯವಾಗಲು ಶಾಲಿನಿ ಅವರು ಕೂಡ ಕಾರಣ ಎಂದೇ ಹೇಳಬಹುದು. ಇವರು ಹಾಕುವ ಬ್ಲೌಸ್ ಡಿಸೈನ್ ಎಲ್ಲರನ್ನೂ ಸೆಳೆಯುತ್ತದೆ.ಈ ಬಾರಿ ಶಾಲಿನಿ ಅವರು ಗಿಣಿ ಇರುವ ಬ್ಲೌಸ್ ತೊಟ್ಟು ಎಲ್ಲರ ಗಮನ ಸೆಳೆದಿದ್ದಾರೆ. ಇದನ್ನು ರಂಗಸ್ತ್ರೀ ಎಂಬ ಬ್ಲೌಸ್ ಡಿಸೈನರ್ ಮಾಡಿದ್ದು.

ಕೈನಿಂದು ಈ ಡಿಸೈನ್ ಮಾಡಲಾಗಿದೆ.ಈ ಶೋನಲ್ಲಿ ಒಂದಷ್ಟು ಗೇಮ್, ಮತ್ತಷ್ಟೋ ತಮಾಷೆ ಇರುತ್ತೆ. ಸ್ಪರ್ಧಿಗಳಿಗೂ ಸಖತ್ ಟಾಸ್ಕ್ ನೀಡಿ ಸ್ಪರ್ಧಿಗಳನ್ನು ಪ್ರೋತ್ಸಾಹಿಸೋ ಕೆಲಸ ಮಾಡ್ತಾರೆ ನಿರೂಪಕಿ ಶಾಲಿನಿ.ಶಾಲಿನ ಅವರ ಬ್ಲೌಸ್ ಗಳನ್ನು ಮೋನಿಶ್ ಎನ್ನುವವರು ಡಿಸೈನ್ ಮಾಡುತ್ತಾರೆ. ವಿಭಿನ್ನ ವಿಭಿನ್ನ ಡಿಸೈನ್ ಮಾಡುತ್ತಾರೆ. ಇದುವರೆಗೂ ನವಿಲು, ಬಾಳೆಹಣ್ಣು, ಬಾಳೆ ಎಲೆ, ದೇವಿ ಡಿಸೈನ್ ಮಾಡಿದ್ದಾರೆ.

ಮೋನಿಶ್ ಅವರು ಹಲವು ಡಿಸೈನ್ ಗಳನ್ನು ಮಾಡಿ ಶಾಲಿನಿ ಅವರಿಗೆ ಡಿಪರೆಂಟ್ ಲುಕ್ ನೀಡಿದ್ದಾರೆ. ಇವನ್ನು ನೋಡಿ ಹಲವು ಮಹಿಳೆಯರು ಮೆಚ್ಚಿದ್ದಾರೆ.ಶಾಲಿನಿ ಅವರು ವಿಭಿನ್ನ ಬ್ಲೌಸ್ ಗಳನ್ನು ಹಾಕಿಕೊಂಡಾಗ ರೀಲ್ಸ್ ಮಾಡ್ತಾರೆ. ಮೋನಿಶ್ ಮತ್ತು ಅವರ ಹುಡುಗರ ಜೊತೆ ಕಾಮಿಡಿಯಾಗಿ ರೀಲ್ಸ್ ಮಾಡ್ತಾರೆ.ಕಳೆದ ಬಾರಿ ನವಿಲು ಆಕಾರದ ಬ್ಲೌಸ್ ತೊಟ್ಟಿದ್ದರು. ಅದಕ್ಕೆ ತಕ್ಕಂತೆ ಕಿವಿಯೋಲೆ ಸಹ ಇತ್ತು. ಅದು ಕೂಡ ಜನರಿಗೆ ತುಂಬಾ ಇಷ್ಟ ಆಗಿತ್ತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಕಿರಿಕಿರಿ ಮಾಡುವ 'ಗೊರಕೆ'ಗೆ ಈಗ ಹೇಳಿ ಬೈ ಬೈ.!

Wed Mar 1 , 2023
ಸಂಶೋಧನೆಯೊಂದರ ಪ್ರಕಾರ ಪುರುಷರೇ ಹೆಚ್ಚು ಗೊರಕೆ ಹೊಡೆಯುತ್ತಾರಂತೆ. ದಣಿದು ಬಂದು ಗೊರಕೆ ಹೊಡೆಯುತ್ತಿದ್ದಾರೆ ಎಂದು ನೀವದನ್ನು ನಿರ್ಲಕ್ಷಿಸದಿರಿ. ಇದನ್ನು ನಿಲ್ಲಿಸುವ ಕ್ರಮಗಳ ಬಗ್ಗೆಯೂ ಅಲೋಚಿಸಿ. ಸಂಶೋಧನೆಯೊಂದರ ಪ್ರಕಾರ ಕಾಲಿನಡಿ ದ್ರವಾಂಶ ಶೇಖರಣೆ ಆಗುವುದೇ ಗೊರಕೆಗೆ ಕಾರಣವಂತೆ. ದಿನವಿಡೀ ಕುಳಿತು ಕೆಲಸ ಮಾಡುವುದರಿಂದ ಇದು ಶೇಖರಣೆಗೊಂಡು ಶ್ವಾಸನಾಳದ ಕುಗ್ಗುವಿಕೆಗೆ ಕಾರಣವಾಗುತ್ತದೆ. ಇದರಿಂದ ರಾತ್ರಿ ಮಲಗಿದ ವೇಳೆ ಉಸಿರಾಟ ಪ್ರಕ್ರಿಯೆಯಲ್ಲಿ ಗಾಳಿಯನ್ನು ಹೊರಹಾಕುವಾಗ ಅದು ಗೊರಕೆಯಂಥ ಸದ್ದನ್ನು ಹುಟ್ಟಿಸುತ್ತದೆ. ನಿಮ್ಮ ಮನೆಯವರೊಂದಿಗೆ ನೀವು […]

Advertisement

Wordpress Social Share Plugin powered by Ultimatelysocial