ಪ್ರಿಯಾಂಕ‌ ಆಗಮನದಿಂದ ರಾಜಕೀಯ ವಲಯದಲ್ಲಿ ಬದಲಾವಣೆ

ಭವಿಷ್ಯದಲ್ಲಿ ಕಾಂಗ್ರೆಸ್ ಪಕ್ಷದ ನಾಯಕತ್ವ ವಹಿಸಿಕೊಳ್ಳಲಿರುವ ಎ.ಐ.ಸಿ.ಸಿ‌. ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಆಗಮನದಿಂದ ರಾಜ್ಯದ ಮಹಿಳೆಯರಿಗೂ ನಾಯಕತ್ವದ ಅವಕಾಶ ಸಿಗಲಿದೆ ಎಂದು ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಹೇಳಿದರು.ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ನಾ ನಾಯಕಿ ಕಾರ್ಯಕ್ರಮದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಹಿಳಾ ನಾಯಕತ್ವಕ್ಕೂ ಕಾಂಗ್ರೆಸ್  ಪಕ್ಷಕ್ಕೂ ಅವಿನಾಭಾವ ಸಂಬಂಧವಿದೆ ಮಾಜಿ ಪ್ರಧಾನ‌‌ಮಂತ್ರಿ ಇಂದಿರಾ ಗಾಂಧೀ ಪಕ್ಷದ ನೇತೃತ್ವ ವಹಿಸಿದಾಗ ಅವರೇ ಅಧಿಕಾರ ಹಿಡಿದು ಸುದೀರ್ಘ ಆಡಳಿತ ನೆಡೆಸಿದ್ದರು  ನಂತರ ಸೋನಿಯಾ ಗಾಂಧೀ ಅಧ್ಯಕ್ಷರಾದಾಗ ಪಕ್ಷ ಅಧಿಕಾರಕ್ಕೆ ಬಂದಿತ್ತು ಕಾಂಗ್ರೆಸ್ ಪಕ್ಷವೂ ಮಹಿಳೆಯರನ್ನ ಸಮಾನವಾಗಿ ಕಂಡು ರಾಜಕೀಯ ಸ್ಥಾನಮಾನ‌ನೀಡಿದೆ ಅದರಂತೆ ಭವಿಷ್ಯದಲ್ಲಿ ಪ್ರಿಯಾಂಕ ಗಾಂಧೀ ಅವರೂ ಸಹ ಹೆಚ್ಚಿನ ಆಸಕ್ತಿ ವಹಿಸಿ ನಾ ನಾಯಕಿ ಎಂಬ ವಿನೂತನ ಕಾರ್ಯಕ್ರಮ‌ಮಾಡಿ ಮಹಿಳೆಯರಿಗೆ ಶಕ್ತಿ ತುಂಬಲು ಬರುತ್ತಿದ್ದಾರೆ ಇದೇ ಜನವರಿ 16 ರಂದು ಪ್ರತಿ ಬೂತ್ ಮಟ್ಟದಿಂದ ಮಹಿಳೆಯರನ್ನ ಸಮಾವೇಶಕ್ಕೆ ಕಳುಹಿಸಲಾಗುವುದು ಎಂದರು.ಕೆಪಿಸಿಸಿ ಎಸ್ಟಿ ಘಟಕ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ  ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಹಿಳೆಯರ ಅಭಿವೃದ್ದಿಗೆ ವಿಶೇಷ ಯೋಜನೆ  ರೂಪಿಸಿ ಅವರನ್ನ ಸ್ವಾವಲಂಬಿಗಳನ್ನಾಗಿ ಮಾಡಲಾಗಿತ್ತು ಇಂದಿನ. ಬಿಜೆಪಿ ಸರ್ಕಾರ ಯಾವುದೇ ವಿಶೇಷ ಯೋಜನೆ ನೀಡದೆ ಮಹಿಳೆಯರಿಗೆ ,ವಿದ್ಯಾರ್ಥಿನಿಯರಿಗೆ ವಂಚಿಸಿದೆ ಎಂದು ಹೇಳಿದರು ಕೆಪಿಸಿಸಿ  ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್ ಮಾತನಾಡಿ ಮಹಿಳೆಯರು ಕೇವಲ ಮತಚಲಾಯಿಸಲು ಸೀಮಿತವಲ್ಲ ರಾಜಕೀಯ ಚಟುವಟಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಪ್ರತಿ ಬೂತ್ ಮಟ್ಟದಲ್ಲಿ ಮಹಿಳಾ ಸಂಘಟನೆ ಬಲಗೊಳ್ಳಬೇಕಿದೆ ಅದಕ್ಕಾಗಿ ಜನವರಿ 16  ನಂತರ ವಿಧಾನ ಸಭಾ ಕ್ಷೇತ್ರದ ಎಲ್ಲಾ ಬೂತ್ ಗಳಲ್ಲಿ ಮಹಿಳೆಯರಿಗೆ ಅವಕಾಶಮಾಡಿಕೊಟ್ಟು ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮಹಿಳಾ ಅಧ್ಯಕ್ಷರಿಗೆ ಸೂಚಿಸಿದರುಇದೇ ವೇಳೆ ಮುಖಂಡ  ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಮಾತನಾಡಿದರು.ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕೆಂಚಮ್ಮ ಧನ್ಯಕುಮಾರ್ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳಾ ಸಬಲೀಕರಣವನ್ನ ಮರೆತಿದ್ದಾರೆಂದರು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್  ಉಪಾಧ್ಯಕ್ಷರು ಗೋಡೆ ಪ್ರಕಾಶ್ , ಜಿಲ್ಲಾ ಎಸ್ಸಿ ಉಪಾಧ್ಯಕ್ಷರು ಶಂಭುಲಿಂಗಪ್ಪ ಜಿಲ್ಲಾ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ , ಕೆಪಿಸಿಸಿ ಎಸ್ಸಿ ಸದಸ್ಯ ಸಿ ತಿಪ್ಪೇಸ್ವಾಮಿ , ಮಾಜಿ ತಾ.ಪಂ.ಸದಸ್ಯ ಕುಬೇಂದ್ರಪ್ಪ ,  ಗ್ರಾ.ಪಂ.ಅಧ್ಯಕ್ಷೆ ಪಂಕಜಾ ಶಂಕರಪ್ಪ , ಗ್ರಾ.ಪಂ.ಸದಸ್ಯ ಬಂಗಾರಪ್ಪ , ಸಣ್ಣ ಓಬಯ್ಯ ,ಮುಖಂಡರಾದ ಬಿ.ಲೋಕೇಶ್. ರೇವಣ್ಣ  ಸೊಕ್ಕೆ ರಾಜಣ್ಣ ,ಗೌರಿಪುರ ಷಣ್ಮುಖ ಸ್ವಾಮಿ ಮಹಿಳಾ ಕಾರ್ಯದರ್ಶಿ ಸಾವಿತ್ರಮ್ಮ ಶರಣಮ್ಮ ಹಲವರು ಇದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಲೆ ಏರಿಕೆ ಮೋದಿ ಕಳವಳ

Sat Jan 14 , 2023
ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ಪ್ರಧಾನಿ ನರೇಂದ್ರಮೋದಿ ಅವರು ಕಳವಳ ವ್ಯಕ್ತಪಡಿಸಿದ್ದು, ಆಹಾರ ಧಾನ್ಯಗಳು, ಇಂಧನ ಮತ್ತು ರಸಗೊಬ್ಬರಗಳ ಬೆಲೆ ಏರಿಕೆ, ಕೋವಿಡ್‌ನ ಆರ್ಥಿಕ ಪರಿಣಾಮ ಮತ್ತು ಹವಾಮಾನ ಬದಲಾವಣೆಯಲ್ಲಿ ಉಂಟಾಗುವ ನೈಸರ್ಗಿಕ ವಿಕೋಪಗಳು ಕಳವಳಕಾರಿ ಎಂದಿದ್ದಾರೆ.ದೆಹಲಿಯಲ್ಲಿಂದು ವಾಯ್ಸ್ ಆಫ್ ಗ್ಲೋಬಲ್ ಸೌಥ್ ಶೃಂಗಸಭೆಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ನರೇಂದ್ರಮೋದಿ ಅವರು. ಜಗತ್ತು ಬಿಕ್ಕಟ್ಟಿನ ಸ್ಥಿತಿಯಲ್ಲಿದೆ ಎಂಬುದು ಸ್ಪಷ್ಟ ಈ ಸ್ಥಿರತೆಯ ಸ್ಥಿತಿ ಎಷ್ಟು ಕಾಲ ಇರುತ್ತದೆ […]

Advertisement

Wordpress Social Share Plugin powered by Ultimatelysocial