ಇಂದು ಕುದ್ರೋಳಿಗೆ ಸಿಎಂ ಭೇಟಿ…. ಸಂಜೆ 3 ರಿಂದ 7 ರವರೆಗೆ ಭಕ್ತರ ಪ್ರವೇಶಕ್ಕೆ ನಿರ್ಬಂಧ

ಮಂಗಳೂರು ಅಕ್ಟೋಬರ್ 13:ಇಂದು ಕರಾವಳಿ ಪ್ರವಾಸ ಮಾಡಲಿರುವ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸಂಜೆ ಕುದ್ರೋಳಿಗೆ ಭೇಟಿ ನೀಡಲಿದ್ದು, ಈ ಸಂದರ್ಭ ಭಕ್ತಾಧಿಗಳಿಗೆ ದೇವಸ್ಥಾನ ಪ್ರವೇಶ ನಿರ್ಬಂಧಿಸಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳೂರು ದಸರಾ ಮಹೋತ್ಸವಕ್ಕೆ ಇಂದು ಸಂಜೆ 5ಗಂಟೆಗೆ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಸಂಜೆ 3.00ರಿಂದ 7.00ಗಂಟೆಯವರೆಗೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಭಕ್ತಾದಿಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ರಾತ್ರಿ 7.00ರಿಂದ ಎಂದಿನಂತೆ ಭಕ್ತಾದಿಗಳಿಗೆ ದರುಶನಕ್ಕೆ ಅವಕಾಶ ನೀಡಲಾತ್ತದೆ.

ಇನ್ನು ಮುಖ್ಯಮಂತ್ರಿ ಆಗಮಿಸುವ ಹಿನ್ನಲೆಯಲ್ಲಿ ಭದ್ರತಾ ದೃಷ್ಟಿಯಿಂದ ಹಾಗೂ ಹಿರಿಯ ಅಧಿಕಾರಿಗಳ ಸೂಚನೆ ಹಿನ್ನಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಭಕ್ತಾದಿಗಳು ಸಹಕರಿಸಬೇಕೆಂದು ದೇವಳದ ಅಧ್ಯಕ್ಷ ಎಚ್.ಎಸ್. ಸಾಯಿರಾಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಚಿಕ್ಕಬಳ್ಳಾಪುರ: ಭಾರಿ ಮಳೆಗೆ ಕೆರೆ ಕಟ್ಟೆ ಒಡೆದು ಅಪಾರ ಬೆಳೆ ಹಾನಿ

Wed Oct 13 , 2021
  ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಚೊಕ್ಕನಹಳ್ಳಿಯಲ್ಲಿ ಕೆರೆ ಕಟ್ಟೆ ಒಡೆದ ಪರಿಣಾಮ ಹಾನಿ ಸಂಭವಿಸಿದೆ. ಕುಶಾವತಿ ನದಿ ತುಂಬಿ ಹರಿದ ಪರಿಣಾಮ ಬಟ್ಲಹಳ್ಳಿ ಮುಖ್ಯರಸ್ತೆ ಬಂದ್ ಆಗಿದೆ.ಶಿಡ್ಲಘಟ್ಟ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಹಲವೆಡೆ ಅಪಾರ ಹಾನಿ ಸಂಭವಿಸಿದೆ. ಶಿಡ್ಲಘಟ್ಟ ತಾಲೂಕಿನ ಚೊಕ್ಕನಹಳ್ಳಿ ಗ್ರಾಮದ ಬಳಿ ನಾರಾಯಣರೆಡ್ಡಿ ಕೆರೆ ಕಟ್ಟೆ ಒಡೆದು ಅಪಾರ ಬೆಳೆ ನೀರುಪಾಲಾಗಿದೆ. ಭತ್ತ, ರಾಗಿ, ಕಡಲೇಕಾಯಿ ಸೇರಿ ಅಪಾರ ಬೆಳೆ ನೀರುಪಾಲಾಗಿದ್ದು, ದಿಬ್ಬೂರಹಳ್ಳಿ ಪೊಲೀಸ್ ಠಾಣಾ […]

Advertisement

Wordpress Social Share Plugin powered by Ultimatelysocial