ಅಮೀರ್ ಖಾನ್ ಮೊದಲ ಬಾರಿಗೆ ಸಿಖ್ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ!

ಕಳೆದ ವರ್ಷವೇ ಬಿಡುಗಡೆ ಆಗಬೇಕಿದ್ದ ‘ಕೆಜಿಎಫ್ 2’ ಸಿನಿಮಾ ಈ ವರ್ಷಕ್ಕೆ ಮುಂದೂಡಲ್ಪಟ್ಟಿದೆ. ಏಪ್ರಿಲ್ 14 ಕ್ಕೆ ರಾಕಿ ಭಾಯ್ ಬೆಳ್ಳಿತೆರೆ ಮೇಲೆ ಅಬ್ಬರಿಸಲಿದ್ದಾರೆ.ಎರಡನೇ ಅಲೆ ಬಳಿಕ ಹಲವು ಸಿನಿಮಾಗಳು ನಾ ಮುಂದು ತಾ ಮುಂದು ಎಂದು ಸಿನಿಮಾ ಬಿಡುಗಡೆ ಮಾಡಲು ಹರಸಾಹಸ ಬಡುತ್ತಿರಬೇಕಾದರೆ ‘ಕೆಜಿಎಫ್ 2’ ಸಿನಿಮಾದ ಬಿಡುಗಡೆಯನ್ನು ಹಲವು ತಿಂಗಳು ಮುಂದಕ್ಕೆ ಹಾಕಿ ಏಪ್ರಿಲ್ 14ರ ದಿನಾಂಕವನ್ನು ತಮಗಾಗಿ ಮೀಸಲಿಟ್ಟಿಕೊಂಡಿತ್ತು ಚಿತ್ರತಂಡ.ಏಪ್ರಿಲ್ 14 ರಂದು ಪಂಜಾಬಿಗಳ ಪವಿತ್ರ ಹಬ್ಬ ಬೈಸಾಕಿ ಇದ್ದು ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದಲ್ಲಿ ಅಮೀರ್ ಖಾನ್ ಮೊದಲ ಬಾರಿಗೆ ಸಿಖ್ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಾರಣ ಅದೇ ದಿನ ಸಿನಿಮಾವನ್ನು ಬಿಡುಗಡೆ ಮಾಡಲು ಅಮೀರ್ ಖಾನ್ ಇಚ್ಛಿಸಿದ್ದರು. ‘ಕೆಜಿಎಫ್ 2’ ಸಿನಿಮಾದ ಬಿಡುಗಡೆ ದಿನಾಂಕದಂದೇ ತಮ್ಮ ಸಿನಿಮಾ ಬಿಡುಗಡೆ ಮಾಡುತ್ತಿರುವುದಕ್ಕೆ ಯಶ್ ಹಾಗೂ ನಿರ್ಮಾಪಕರ ಬಳಿ ಕ್ಷಮೆ ಕೇಳಿದ್ದಾಗಿ ಅಮೀರ್ ಖಾನ್ ಹೇಳಿದ್ದರು.ಕೊರೊನಾ ದೃಷ್ಟಿಯಿಂದ ಹಾಗೂ ಇತರ ಸಿನಿಮಾಗಳು ಒಡ್ಡಬಹುದಾದ ಪ್ರತಿಸ್ಪರ್ಧೆಯ ದೃಷ್ಟಿಯಿಂದಲೂ ಈ ದಿನಾಂಕ ಸೇಫ್ ಎಂದುಕೊಳ್ಳಲಾಗಿತ್ತು. ಆದರೆ ಬಾಲಿವುಡ್ ನಟ ಅಮೀರ್ ಖಾನ್ ತಮ್ಮ ಹೊಸ ಸಿನಿಮಾ ‘ಲಾಲ್ ಸಿಂಗ್ ಛಡ್ಡಾ’ವನ್ನು ಅಂದೇ ಬಿಡುಗಡೆ ಮಾಡುವುದಾಗಿ ಘೋಷಿಸಿ ಗೊಂದಲ ಉಂಟು ಮಾಡಿದ್ದರು. ಆದರೆ ಈಗ ಅಮೀರ್ ಖಾನ್ ಏಪ್ರಿಲ್ 14 ರಿಂದ ಮುಂದೆ ಹೋಗಿದ್ದು ತಮ್ಮ ಸಿನಿಮಾ ಬಿಡುಗಡೆಗೆ ಹೊಸ ದಿನಾಂಕ ಪ್ರಕಟಿಸಿದ್ದಾರೆ.ಆದರೆ ಈಗ ತಮ್ಮ ಬಿಡುಗಡೆ ದಿನಾಂಕವನ್ನು ಆಗಸ್ಟ್ 11 ಕ್ಕೆ ಮುಂದೂಡಿಕೊಂಡಿದ್ದಾರೆ ಅಮೀರ್ ಖಾನ್. ಸಿನಿಮಾವು ನಿರೀಕ್ಷಿತ ಸಮಯದಲ್ಲಿ ಪೂರ್ಣ ಆಗದ ಕಾರಣ ಈ ನಿರ್ಣಯವನ್ನು ಅಮೀರ್ ಖಾನ್ ಹಾಗೂ ಚಿತ್ರತಂಡ ತೆಗೆದುಕೊಂಡಿದೆ. ಆಗಸ್ಟ್ 11 ರಂದು ಪ್ರಭಾಸ್ ನಟನೆಯ ‘ಆದಿಪುರುಷ್’ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಅಮೀರ್ ಖಾನ್ ಸಿನಿಮಾ ಬಿಡುಗಡೆ ಆಗುತ್ತಿರುವ ಕಾರಣ ಅವರು ತಮ್ಮ ಸಿನಿಮಾ ಬಿಡುಗಡೆ ಮುಂದಕ್ಕೆ ಹಾಕಿಕೊಂಡಿದ್ದಾರೆ.’ಲಾಲ್ ಸಿಂಗ್ ಛಡ್ಡಾ’ ಸಿನಿಮಾ ಮುಂದೂಡಲ್ಪಟ್ಟಿದೆ ಎಂದ ಮಾತ್ರಕ್ಕೆ ‘ಕೆಜಿಎಫ್ 2’ ಸಿನಿಮಾಕ್ಕೆ ಎದುರಾಳಿಯೇ ಇಲ್ಲ ಎಂದೇನೂ ಇಲ್ಲ. ಏಪ್ರಿಲ್ 14 ರಂದು ನಟ ಶಾಹಿದ್ ಕಪೂರ್ ನಟನೆಯ ಹಿಂದಿ ಸಿನಿಮಾ ‘ಜೆರ್ಸಿ’ ಬಿಡುಗಡೆ ಆಗಲಿದೆ. ತೆಲುಗಿನಲ್ಲಿ ನಾನಿ ನಟಿಸಿದ್ದ ರಾಷ್ಟ್ರಪ್ರಶಸ್ತಿ ವಿಜೇತ ‘ಜೆರ್ಸಿ’ ಸಿನಿಮಾದ ರೀಮೇಕ್ ಈ ಸಿನಿಮಾ. ಆದರೆ ಈ ಸಿನಿಮಾವು ‘ಕೆಜಿಎಫ್ 2’ ಗೆ ಪ್ರಬಲ ಪೈಪೋಟಿ ಕೊಡಲಾರದು ಎಂದೇ ಹೇಳಲಾಗುತ್ತಿದೆ. ಮತ್ತೊಂದು ಸಂಗತಿಯೆಂದರೆ ಶಾಹಿದ್ ಕಪೂರ್‌ರ ‘ಜೆರ್ಸಿ’ ಸಿನಿಮಾದ ಬಿಡುಗಡೆಯೂ ಮುಂದಕ್ಕೆ ಹೋಗುವ ಸಾಧ್ಯತೆ ಇದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Bangalore :ಕೋವಿಡ್ ಐಸಿಯು ಸೌಲಭ್ಯ ವಿಸ್ತರಿಸಿರುವುದಾಗಿ ಘೋಷಣೆ ನಾರಾಯಣ ಹೆಲ್ತ್ ಕೆರ್ ಇಂದ ಘೋಷಣೆ

Wed Feb 16 , 2022
  o ದೇಶದ ಪ್ರಮುಖ ಆರೋಗ್ಯ ಸೇವೆ ಒದಗಿಸುವ ಆಸ್ಪತ್ರೆ ಸಮೂಹವಾದ ನಾರಾಯಣ ಹೆಲ್ತ್ ಇಂದು ತನ್ನ ಕೋವಿಡ್ ಐಸಿಯು ಸೌಲಭ್ಯಗಳನ್ನು ವಿಸ್ತರಿಸಿರುವುದಾಗಿ ಘೋಷಿಸಿದೆ. ಪ್ರಮುಖ ಜಾಗತಿಕ ಹೂಡಿಕೆ ಬ್ಯಾಂಕ್‌ ಗೋಲ್ಡ್‌ಮನ್ ಫ್ಯಾಕ್ಸ್ ಮತ್ತು ಆದರ ಸಹಯೋಗದೊಂದಿಗೆ ಕಂಪೆನಿಯು ಬೆಂಗಳೂರಿನ ತನ್ನ ಪ್ರಮುಖ ಘಟಕವಾದ ನಾರಾಯಣ ಹೆಲ್ತ್ ಸಿಟಿಯಲ್ಲಿ ಆಧುನಿಕ 100 ಹಾಸಿಗೆಗಳ ಕೋಪಿಡ್ ಐಸಿಯು ಸೌಲಭ್ಯವನ್ನು ಪ್ರಾರಂಭಿಸಿದ. ಈ ಸೌಲಭ್ಯವನ್ನು ರಾಷ್ಟ್ರೀಯ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಮತ್ತು […]

Advertisement

Wordpress Social Share Plugin powered by Ultimatelysocial