ಮರಳಿ ಗೂಡು ಸೇರಿದ ಶಬರಿ ಮಲೆಯಲ್ಲಿ ಬಿಟ್ಟ ಪಾರಿವಾಳ…

ಚಿತ್ರದುರ್ಗ ಜನವರಿ 4: ಚಿತ್ರದುರ್ಗದಲ್ಲಿ ಆಶ್ಚರ್ಯಕರ ಸಂಗತಿಯೊಂದು ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾ. ಮೇಗಳಹಟ್ಟಿ ಗ್ರಾಮದಲ್ಲಿ ಪಾರಿವಾಳ ಪವಾಡ ಮಾಡಿದೆ. ಶಬರಿ ಮಲೆ ಯಾತ್ರೆಯಲ್ಲಿ ಬಿಟ್ಟ ಪಾರಿವಾಳ ಮರಳಿ ತನ್ನ ಗೂಡಿಗೆ ಸೇರಿದೆ. ಕೇರಳದಲ್ಲಿ ಬಿಟ್ಟ ಮಾಲಾದಾರಿಯ ಪಾರಿವಾಳ ಮರಳಿ ಗೂಡಿಗೆ ಬಂದಿದೆ.

ಮೇಗಳಹಟ್ಟಿ ಗ್ರಾಮದ ವೆಂಕಟೇಶ್ ಅವರ ಪಾರಿವಾಳ ಜ.30 ರಂದು ಶಬರಿಮಲೆಯಲ್ಲಿ ಹಾರಿ ಬಿಟ್ಟಿದ್ದರು. ನಾಲ್ಕು ದಿನಗಳ ಬಳಿಕ ಆ ಪಾರಿವಾಳ ಮೇಗಳಹಟ್ಟಿ ಗ್ರಾಮಕ್ಕೆ ಆಗಮಿಸಿದೆ. ಪಾರಿವಾಳ ಆಗಮಿಸಿದ್ದನ್ನು ಕಂಡು ಗ್ರಾಮಸ್ಥರಲ್ಲಿ ಅಚ್ಚರಿ ಹುಟ್ಟುಹಾಕಿದೆ.

ಕೇರಳ ರಾಜ್ಯದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನವು ವಿಶ್ವ ವಿಖ್ಯಾತ ದೇವಸ್ಥಾನಗಳಲ್ಲಿ ಒಂದಾಗಿದೆ. ಈ ದೇವಸ್ಥಾನದ ಐತಿಹ್ಯಗಳೇ ಸಾಕು ನಮ್ಮನ್ನು ವಿಸ್ಮಯಗೊಳಿಸಲು. ಹೀಗಿರುವಾಗ ಪಾರಿವಾಳ ಅಯ್ಯಪ್ಪನ ಆಶೀರ್ವಾದ ಪಡೆದು ಪುನ: ಆಗಮಿಸಿದೆ ಎಂದು ಹೇಳಲಾಗುತ್ತದೆ.

ಶಬರಿಮಲೆ ಎಂದೊಡನೆ ಎಲ್ಲರಿಗೂ ಅಯ್ಯಪ್ಪ ಸ್ವಾಮಿಯ ಹೆಸರು ತಟ್ಟನೆ ಮನಸ್ಸಿಗೆ ಬರುವುದು ಖಂಡಿತ.ಪಶ್ಚಿಮ ಘಟ್ಟ ಪರ್ವತ ಶ್ರೇಣಿಗಳಲ್ಲಿ ನೆಲೆಗೊಂಡಿರುವ ಈ ಪವಿತ್ರ ಯಾತ್ರಾ ಸ್ಥಳವು ಕೇರಳ ರಾಜ್ಯದ ಪತನಂತಿಟ್ಟ ಜಿಲ್ಲೆಯ ಪೆರುನಾಡ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿದೆ.

ಧಾರ್ಮಿಕ ದಂತಕಥೆಯ ಪ್ರಕಾರ, ಸಾಗರ ಮಂಥನದ ಸಮಯದಲ್ಲಿ, ಭಗವಾನ್ ವಿಷ್ಣುವಿನ ಮೋಹಿನಿ ರೂಪದಿಂದ ಆಕರ್ಷಿತನಾಗುತ್ತಾರೆ ಮತ್ತು ಈ ಕಾರಣದಿಂದಾಗಿ, ಒಂದು ಮಗು ಜನಿಸಿತು. ಅದನ್ನು ಪಂಪಾ ನದಿಯ ತೀರದಲ್ಲಿ ಬಿಡಲಾಗುತ್ತದೆ . ಈ ಸಮಯದಲ್ಲಿ, ರಾಜ ರಾಜಶೇಖರ ಅವರನ್ನು 12 ವರ್ಷಗಳ ಕಾಲ ಬೆಳೆಸಿದರು. ಈ ಮಗುವನ್ನೇ ನಂತರ ಅಯ್ಯಪ್ಪ ಸ್ವಾಮಿ ಎಂದು ಕರೆಯಲಾಯಿತು.

ಅಯ್ಯಪ್ಪ ಸ್ವಾಮಿ ಬ್ರಹ್ಮಚಾರಿ ಮತ್ತು ತಪಸ್ವಿಯಾಗಿದ್ದರು. ಅದಕ್ಕಾಗಿಯೇ 10 ರಿಂದ 50 ವರ್ಷ ವಯಸ್ಸಿನ ಹುಡುಗಿಯರು ಮತ್ತು ಮಹಿಳೆಯರು ಈ ದೇವಸ್ಥಾನಕ್ಕೆ ಪ್ರವೇಶಿಸಲು ಅವಕಾಶವಿಲ್ಲ. ಅಯ್ಯಪ್ಪ ದೇವರು ಬ್ರಹ್ಮಚಾರಿಯಾಗಿರುವ ಕಾರಣದಿಂದ ಮಹಿಳೆಯರಿಗೆ ಮಂದಿರಕ್ಕೆ ಪ್ರವೇಶಿಸಲು ಅವಕಾಶವಿಲ್ಲ. ಅಲ್ಲದೆ ಹಿಂದೂ ಧರ್ಮದ ಪ್ರಕಾರ ಋತುಮತಿಯಾಗುವ ವಯಸ್ಸಿನ ಹೆಣ್ಣು ಮಕ್ಕಳನ್ನು ದೇವಾಲಯದ ಒಳಗೆ ಬರಲು ಅವಕಾಶವಿಲ್ಲ ಎಂಬ ದಂತಕಥೆಯ ಸಲುವಾಗಿ ಈ ವಯಸ್ಸಿನ ಒಳಗಿನ ಹೆಂಗಸರನ್ನು ದೇವಾಲಯದೊಳಗೆ ಬಿಡುವುದಿಲ್ಲ. ಅಲ್ಲದೆ ಅಯ್ಯಪ್ಪ ಸ್ವತಃ ಬ್ರಹ್ಮಚಾರಿಯಾಗಿರುವುದರಿಂದಾಗಿ ಸಹ ಈ ಪದ್ಧತಿಯನ್ನು ಅನುಸರಿಸಲಾಗುತ್ತದೆ ಎಂಬುದು ನಡೆದುಕೊಂಡು ಬಂದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

5 ಸಾವಿರ ಜನರ ಮುಂದೆ ಟ್ರೈಲರ್ ಬಿಡುಗಡೆ!

Thu Jan 5 , 2023
ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಬಿ.ಎಸ್.ಲಿಂಗದೇವರು ನಿರ್ದೇಶನದಲ್ಲಿ ಮೂಡಿ ಬಂದಿರುವ, ಹಾನಗಲ್ಲ ಕುಮಾರಸ್ವಾಮಿಗಳ ಜೀವನವನ್ನು ಆಧರಿಸಿದ ‘ವಿರಾಟಪುರ ವಿರಾಗಿ’ ಸಿನಿಮಾದ ಟ್ರೈಲರ್ ಗದಗನಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಿದೆ. ಈ ಟ್ರೈಲರ್ ಬಿಡುಗಡೆ ಸಮಾರಂಭಕ್ಕೆ ಐದು ಸಾವಿರಕ್ಕೂ ಹೆಚ್ಚು ಜನರು, ನಾಡಿನ ಅನೇಕ ಮಠಾಧೀಶರು ಹಾಗೂ ಜನಪ್ರತಿನಿಧಿಗಳು ಸಾಕ್ಷಿಯಾಗಿದ್ದು ವಿಶೇಷ.ಕಾರ್ಯಕ್ರಮಕ್ಕೂ ಮುನ್ನ 6 ರಥಗಳು ರಾಜ್ಯದ ವಿವಿಧ ಭಾಗಗಳಿಂದ ಹೊರಟು 7000 ಕಿಮೀ ಪ್ರಯಾಣ ಮಾಡಿ, 400ಕ್ಕೂ ಹೆಚ್ಚು ಸಭೆ ನಡೆಸಿ ಸುಮಾರು […]

Advertisement

Wordpress Social Share Plugin powered by Ultimatelysocial