ಪಾಲ್ ಜೂಲಿಯಸ್ ರಾಯ್‍ಟರ್ ಸುದ್ದಿಸಂಸ್ಥೆಯ ಸ್ಥಾಪಕರು.

 

ಪಾಲ್ ಜೂಲಿಯಸ್ ರಾಯ್ಟರ್ ರಾಯ್ಟರ್ ಸುದ್ದಿಸಂಸ್ಥೆಯ ಸ್ಥಾಪಕರು. ಮುಂದೆ ಅವರ ಫ್ರೆಹೆರ್ ವಾನ್ ರಾಯ್ಟರ್ ಎಂದು ಹೆಸರಾದರು. ಇಂದು ಅವರ ಸಂಸ್ಮರಣೆ ದಿನ.ಪಾಲ್ ಜೂಲಿಯಸ್ ಹಿಂದಿನ ಪಶ್ಚಿಮ ಜರ್ಮನಿಯ ಕಾಸಲ್ ಎಂಬಲ್ಲಿ 1816 ಜುಲೈ 21 ರಂದು ಜನಿಸಿದರು. ಯಹೂದ್ಯರಾದ ಈತ 1844 ರಲ್ಲಿ ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಿ ರಾಯ್ಟರ್ ಎಂಬುದನ್ನು ತಮ್ಮ ಹೆಸರಿಗೆ ಸೇರಿಸಿಕೊಂಡರು.ಪಾಲ್ ಜೂಲಿಯಸ್ ಜರ್ಮನಿಯ ಗಾಟೆನ್ಜೆನ್ನಲ್ಲಿದ್ದ ತಮ್ಮ ಚಿಕ್ಕಪ್ಪನ ಬ್ಯಾಂಕಿನಲ್ಲಿ ಗುಮಾಸ್ತರಾಗಿದ್ದರು. ಆಗ ಇವರಿಗೆ ಎಲೆಕ್ಟ್ರಾನಿಕ್ ಸುದ್ದಿ ಮಾಧ್ಯಮದ ಬಗ್ಗೆ ಸಂಶೋಧನೆ ನಡೆಸುತ್ತಿದ್ದ ಪ್ರಸಿದ್ಧ ಭೌತವಿಜ್ಞಾನಿ ಹಾಗೂ ಗಣಿತಜ್ಞ ಕಾರ್ಲ್ ಫ್ರೆಡ್ರಿಕ್ ಗಾಸ್ ಅವರ ಪರಿಚಯವಾಯಿತು.ಪಾಲ್ ಜೂಲಿಯಸ್ ರಾಯ್ಟರ್ 1840ರಲ್ಲಿ ಬರ್ಲಿನ್ನ ಒಂದು ಪ್ರಕಾಶನ ಸಂಸ್ಥೆ ಸೇರಿ ರಾಜಕೀಯಕ್ಕೆ ಸಂಬಂಧಿಸಿದ ಅನೇಕ ಕಿರು ಹೊತ್ತಿಗೆಗಳನ್ನು ಪ್ರಕಟಿಸಿದರು. ಇದರಿಂದಾಗಿ ಅಧಿಕಾರಿಗಳ ಆಗ್ರಹಕ್ಕೆ ಗುರಿಯಾಗಿ 1848ರಲ್ಲಿ ಬರ್ಲಿನ್ ಬಿಟ್ಟು ಪ್ಯಾರಿಸ್ಗೆ ಬಂದರು. ಇಲ್ಲಿಂದ ಪ್ರಕಟಿತ ಸುದ್ದಿಗಳ ಮುಖ್ಯಾಂಶಗಳನ್ನೂ ವಾಣಿಜ್ಯ ಸುದ್ದಿಗಳನ್ನೂ ಭಾಷಾಂತರಿಸಿ ಜರ್ಮನಿಯ ಪತ್ರಿಕೆಗಳಿಗೆ ಒದಗಿಸಲಾರಂಭಿಸಿದರು.ಪಾಲ್ ಜೂಲಿಯಸ್ ರಾಯ್ಟರ್ 1850ರಲ್ಲಿ ಜರ್ಮನಿಯ ಅಕೆನ್ ಪಟ್ಟಣದಿಂದ ಬೆಲ್ಜಿಯಮ್ನ ಬ್ರಸೆಲ್ಸ್ ನಗರಕ್ಕೆ ಪಾರಿವಾಳಗಳ ಮೂಲಕ ಸುದ್ದಿ ರವಾನಿಸುವ ವ್ಯವಸ್ಥೆಯನ್ನು ಸ್ಥಾಪಿಸಿದರು. 1851 ನವೆಂಬರ್ 13ರಂದು ಇಂಗ್ಲೆಂಡಿನಲ್ಲಿ ತಂತಿ ವ್ಯವಸ್ಥೆ ಜಾರಿಗೆ ಬಂದದ್ದು ಸುದ್ದಿಸಂಸ್ಥೆಗಳ ಬೆಳವಣಿಗೆಗೆ ವರವಾಯಿತು. 1851ರಲ್ಲಿ ಇವರು ತಂತಿಯ ಮೂಲಕ ಸುದ್ದಿಯನ್ನು ವಿತರಿಸುವ ತಮ್ಮ ರಾಯ್ಟರ್ ಸುದ್ದಿ ಸಂಸ್ಥೆಯನ್ನು ಲಂಡನ್ನಿನ ಸ್ಟಾಕ್ ಎಕ್ಸ್ಚೇಂಜ್ ಕಟ್ಟಡದಲ್ಲಿ ಪ್ರಾರಂಭಿಸಿದರು.ಪ್ರಥಮವಾಗಿ ಲಂಡನ್ ಮತ್ತು ಪ್ಯಾರಿಸ್ ನಗರಗಳ ನಡುವೆ ವಾಣಿಜ್ಯ ಮಾಹಿತಿಯನ್ನು ಶೀಘ್ರವಾಗಿ ತಲುಪಿಸುವ ಜಾಲ ರಾಯ್ಟರ್ನಿಂದ ಪ್ರಾರಂಭವಾಯಿತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶ್ರೀದೇವಿ ಭಾರತ ಚಲನಚಿತ್ರರಂಗ ಕಂಡ ಪ್ರತಿಭಾನ್ವಿತ ನಟಿ.

Sun Feb 26 , 2023
2018ರ ಫೆಬ್ರವರಿ 25ರಂದು ಬೆಳಿಗ್ಗೆ ಎದ್ದಾಗ ಒಂದು ದಿಗಿಲಿನ ಸುದ್ಧಿ. ನಾನು ಎಂದೆಂದೂ ಚಿರಯೌವನೆ ಎಂದು ಭಾವಿಸಿದ್ದ ಮನೋಜ್ಞ ನಟಿ ಶ್ರೀದೇವಿ ನಿಧನರಾದರು ಎಂದರೆ ಏನೋ ಕಳೆದುಕೊಂಡ ಭಾವ ಉದ್ಭವವಾಯ್ತು. ಶ್ರೀದೇವಿ ಭಾರತ ಚಲನಚಿತ್ರರಂಗ ಕಂಡ ಪ್ರತಿಭಾನ್ವಿತ ನಟಿಯರಲ್ಲೊಬ್ಬರು. ಅವರು 1963ರ ಆಗಸ್ಟ್ 13ರಂದು ಜನಿಸಿದರು. ಇನ್ನೂ ನಾಲ್ಕು ವರ್ಷವಿದ್ದಾಗಲೇ ಅವರು ಚಿತ್ರರಂಗದಲ್ಲಿ ಬಾಲನಟಿಯಾಗಿ ಹೊರಹೊಮ್ಮಿದ್ದರು. 1975ರ ಸಮಯದಲ್ಲಿ ತೆರೆಕಂಡ ಪ್ರಖ್ಯಾತ ಹಿಂದೀ ಚಲನಚಿತ್ರ ‘ಜೂಲಿ’ಯಲ್ಲಿಯೂ ಬಾಲನಟಿಯಾಗಿ ಅಭಿನಯಿಸಿದ್ದರು. ಕನ್ನಡ […]

Advertisement

Wordpress Social Share Plugin powered by Ultimatelysocial