ಹರಪನಹಳ್ಳಿ ಪಟ್ಟಣದಲ್ಲಿ ಹೆಲ್ಮೆಟ್ ಜಾಗೃತಿ ಅಭಿಯಾನ-ಹಸಿರು ನಿಶಾನೆ ತೋರಿಸಿ ಅಭಿಯಾನ ಉದ್ಘಾಟನೆ

ಹರಪನಹಳ್ಳಿ ಪಟ್ಟಣದಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಕೆ.ಕುಮಾರ ನೇತೃತ್ವದಲ್ಲಿ ನಡೆದ ಬೈಕ್  ರಾಲಿ ಮೂಲಕ ಹೆಲ್ಮೆಟ್ ಜಾಗೃತಿ ಅಭಿಯಾನಕ್ಕೆ ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ ಹಸಿರು ನಿಶಾನೆ ತೋರಿಸಿ ಉದ್ಘಾಟಿಸಿದರು. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುತ್ತಾ ಅಪಘಾತವಾದಲ್ಲಿ ಹೆಚ್ಚು ಸಾವು ಸಂಭವಿಸುತ್ತಿರುವ ಪರಿಣಾಮ ಹೆಲ್ಮೆಟ್ ಕಡ್ಡಾಯ ಮಾಡಲಾಗುತ್ತಿದ್ದು

ದಂಡ ಅಥವಾ ಹೆಲ್ಮೆಟ್ ಖರೀದಿ ಸ್ಥಳದಲ್ಲೇ ಮಾಡುತ್ತಾ ಜಾಗೃತಿ ಅಭಿಯಾನ ಕೈಗೊಂಡಿದ್ದೇವೆ. ಪ್ರತಿ ದಿನ ಪಟ್ಟಣದ ನಾಲ್ಕು ವೃತ್ತಗಳಲ್ಲಿ ಮದ್ಯಾಹ್ನದ ವರಗೆ ದಂಡ ಅಥವಾ ಹೆಲ್ಮೆಟ್ ಖರೀದಿಗೆ ಅವಕಾಶ ನೀಡುತ್ತೇವೆ. ನಂತರ ಕಡ್ಡಾಯವಾಗಿ ದಂಡ ಕಟ್ಟಬೇಕು ಹಾಗೂ ಪ್ರಕರಣ ದಾಖಲು ಮಾಡುತ್ತೇವೆ. ಆದ್ದರಿಂದ ವಾಹನ ಸವಾರರು ನಿರ್ಲಕ್ಷ ತೋರಿಸದೇ ಹೆಲ್ಮೆಟ್ ಧರಿಸಿ ದ್ವಿಚಕ್ರವಾಹನ ನಡೆಸಬೇಕು ಎಂದರು.

Please follow and like us:

Leave a Reply

Your email address will not be published. Required fields are marked *

Next Post

ಉತ್ತರ ಪ್ರದೇಶ ಅತ್ಯಾಚಾರ ಖಂಡಿಸಿ ಪ್ರತಿಭಟನೆ-ಕಾಂಗ್ರೆಸ್ ಪಕ್ಷದಿಂದ ಬೃಹತ್ ಪ್ರತಿಭಟನೆ

Sat Oct 10 , 2020
ಹೊಸಪೇಟೆ ನಗರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ  ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡಲಾಯಿತು.ಬಳ್ಳಾರಿ  ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಉತ್ತರ ಪ್ರದೇಶದ ಹಥರಾಸ್ ಎಂಬಲ್ಲಿ ದಲಿತ ಯುವತಿಯ ಮೇಲೆ ಅತ್ಯಾಚಾರ ನಡೆಸಿ, ಅಮಾನವೀಯವಾಗಿ ಹತ್ಯೆ ನಡೆಸಿದವರ ವಿರುದ್ಧ ಕ್ರಮ ಜರುಗಿಸಲು ಓತ್ತಾಯ ಬಿಜೆಪಿ ಹಾಗೂ ಉತ್ತರ ಪ್ರದೇಶ ಸರ್ಕಾರಗಳು ಕೈಗೊಳ್ಳುತ್ತಿರುವ ಜನಧ್ವನಿ ಧಮನದ ವಿರುದ್ಧ ಹೊಸಪೇಟೆ ನಗರ ಕಾಲೇಜು ರಸ್ತೆಯ ಪರ್ವಾಜ್ ಪ್ಲಾಜಾದ ಕಾಂಗ್ರೆಸ್ ಪಕ್ಷದ ಕಚೇರಿಯಿಂದ  ನಗರದ ರೋಟರಿ ವೃತ್ತದವರಗೆ […]

Advertisement

Wordpress Social Share Plugin powered by Ultimatelysocial