ಯುಪಿ ವಿಧಾನಪರಿಷತ್ ಚುನಾವಣೆ: ಬಿಜೆಪಿಗೆ ಭರ್ಜರಿ ಗೆಲುವು.

ಕ್ನೋ: ಉತ್ತರಪ್ರದೇಶದಲ್ಲಿ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಐದರ ಪೈಕಿ ನಾಲ್ಕು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು ಮತ್ತು ಸ್ವತಂತ್ರ ಅಭ್ಯರ್ಥಿ ಒಂದು ಸ್ಥಾನವನ್ನು ಗೆದ್ದಿದ್ದಾರೆ. ಸಮಾಜವಾದಿ ಪಕ್ಷ ಎಲ್ಲ ಐದು ಸ್ಥಾನಗಳಲ್ಲಿ ಸೋಲು ಕಂಡಿದೆ.

ಬರೇಲಿ ಮೊರಾದಾಬಾದ್ ಶಿಕ್ಷಕರ ಕ್ಷೇತ್ರವನ್ನು ಬಿಜೆಪಿ ಗೆದ್ದುಕೊಂಡಿದೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಜೈಪಾಲ್ ಸಿಂಗ್ ಗೆಲುವು ಸಾಧಿಸಿದ್ದಾರೆ. ಗೋರಖ್‌ಪುರ ಫೈಜಾಬಾದ್ ಬ್ಲಾಕ್, ಕಾನ್ಪುರ ಪದವೀಧರ ಕ್ಷೇತ್ರದಲ್ಲೂ ಬಿಜೆಪಿ ಗೆಲುವು ಸಾಧಿಸಿದೆ.

ಕಾನ್ಪುರದಲ್ಲಿ ಶಿಕ್ಷಕ ಕ್ಷೇತ್ರದ ಎಂಎಲ್‌ಸಿ ಮತ ಎಣಿಕೆ ವೇಳೆ ಟೇಬಲ್ ಸಂಖ್ಯೆ 12ರಲ್ಲಿ ಬೇರೆ ಬೇರೆ ಕೆಂಪು ಬಣ್ಣದ ಬ್ಯಾಲೆಟ್ ಪೇಪರ್ ಹೊರಬಂದಾಗ ಏಜೆಂಟ್ ಗಲಾಟೆ ಮಾಡಿದ್ದು, ಜಿಲ್ಲಾಧಿಕಾರಿಗಳು ಆಗಮಿಸಿ ಪತ್ರವನ್ನು ಪರಿಶೀಲಿಸಿದಾಗ ಪ್ರತ್ಯೇಕ ಮತಪತ್ರ ಹೊರಬಿದ್ದಿದೆ.

ಸಮಾಜವಾದಿ ಪಕ್ಷಕ್ಕೆ ವಿಪಕ್ಷ ಸ್ಥಾನ ಪಡೆಯಲು ಕನಿಷ್ಠ ಒಂದು ಸಥನವನ್ನು ಗೆಲ್ಲಬೇಕಾಗಿತ್ತು, ಆದರೆ ಅದು ವಿಫಲವಾಗಿದೆ. 100 ಸದಸ್ಯರ ಕೌನ್ಸಿಲ್‌ನಲ್ಲಿಸಮಾಜವಾದಿ ಪಕ್ಷ ಪ್ರಸ್ತುತ 9 ಸ್ಥಾನಗಳನ್ನು ಹೊಂದಿತ್ತು. 10 ಸ್ಥಾನಗಳನ್ನು ಹೊಂದಿರುವ ಪಕ್ಷ ವಿಪಕ್ಷ ಸ್ಥಾನವನ್ನು ಪಡೆದುಕೊಳ್ಳಬಹುದು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

How to Negotiate a Mutually Effective Relationship

Sat Feb 4 , 2023
Sugar dating is a mutually beneficial romance that is usually short-term. It permits each to have a better life with no worries. That eliminates the highs and lows of standard romantic connections, where there is normally jealousy, fighting, and cheating. The agreement between the sweets dad and the sugars baby […]

Advertisement

Wordpress Social Share Plugin powered by Ultimatelysocial