ವಿವಿ ಬಾಗಿಲಿಗೆ ನಮಸ್ಕರಿಸಿ ಬಲಗಾಲಿಟ್ಟು ಒಳ ಬಂದ ನೂತನ ಕುಲಪತಿ!

ತುಮಕೂರು ವಿಶ್ವವಿದ್ಯಾಲಯಕ್ಕೆ ನೂತನ ಕುಲಪತಿಯಾಗಿ ಪ್ರೊ.ವೆಂಕಟೇಶ್ವರಲುರನ್ನ ನೇಮಕವಾಗಿದ್ದಾರೆ. ರಾಜ್ಯಪಾಲರ ಆದೇಶ ಹಿನ್ನೆಲೆ ಇಂದು ನೂತನ ಕುಲಪತಿಗಳು ಅಧಿಕಾರ ಸ್ವೀಕರಿಸಿದ್ರು. ಆ ಕುರಿತ ವರದಿ ಇಲ್ಲಿದೆ ನೋಡಿ
ವಿಷ್ಯೂಲ್ ಪ್ಲೋ..
ತುಮಕೂರು ವಿಶ್ವವಿದ್ಯಾಲಯಕ್ಕೆ ನೂತನ ಕುಲಪತಿಗಳಾಗಿ ಪ್ರೊ.ವೆಂಕಟೇಶ್ವರಲು ನೇಮಕವಾಗಿದ್ದಾರೆ. ಇಂದು ಪ್ರಭಾರ ಕುಲಪತಿ ಕೇಶವರಿಂದ ಅಧಿಕಾರ ಸ್ವೀಕರಿಸಿದ ನೂತನ ಕುಲಪತಿಗಳು, ವಿವಿ ಬಾಗಿಲಿಗೆ ನಮಸ್ಕರಿಸಿ ಬಲಗಾಲಿಟ್ಟು ಒಳಗೆ ಬರುವ ಮೂಲಕ ಕುಲಪತಿ ಕುರ್ಚಿ ಅಲಂಕರಿಸಿದ್ರು. ಕುವೆಂಪು ವಿಶ್ವವಿದ್ಯಾಲಯದ ಪ್ರಾಣಿಶಾಸ್ತç ವಿಭಾಗದಲ್ಲಿ ಪ್ರಾಧ್ಯಪಕರಾಗಿದ್ದ, ವೆಂಕಟೇಶ್ವರಲು ಐದನೇ ಕುಲಪತಿಯಾಗಿ ತುಮಕೂರು ವಿವಿಗೆ ನೇಮಕಗೊಂಡಿದ್ದಾರೆ. ಅಪಾರ ಸಿಬ್ಬಂದಿ ವರ್ಗ, ಪ್ರಾಧ್ಯಪಕ ವರ್ಗ ಅವರಿಗೆ ಹೂವಿನ ಗುಚ್ಚ ನೀಡಿ ಆತ್ಮೀಯತೆಯಿಂದ ಬರಮಾಡಿಕೊಂಡಿತು
ಪ್ರೊ.ವೆಂಕಟೇಶ್ವರಲು (ವಿಸಿ)
ನೂತನ ಕುಲಪತಿಗಳ ಮುಂದೆ ನೆನೆಗುದಿಗೆ ಬಿದ್ದಿರುವ ವಿವಿ ಕ್ಯಾಂಪಸ್, ರಾಷ್ಟಿçÃಯ ಶಿಕ್ಷಣ ನೀತಿ ಅಳವಡಿಕೆ, ಅತಿಥಿ ಉಪನ್ಯಾಸಕರ ಸಂಕಷ್ಟ, ಸೇರಿದಂತೆ ಪ್ರಮುಖವಾದ ಸವಾಲುಗಳಿವೆ. ಅತಿಥಿ ಉಪನ್ಯಾಸಕರ ಸಮಸ್ಯೆ ನಿವಾರಣೆಗೆ ಹಾಗೂ ವಿದ್ಯಾರ್ಥಿಗಳ ಶ್ರೋಯೋಭಿವೃದ್ಧಿಗೆ ಮೊದಲ ಆದ್ಯತೆ ನೀಡುವು ಮಾತುಗಳನ್ನಾಡಿದರು. ಅಲ್ಲದೆ ತುಮಕೂರು ಜನ ಒಳ್ಳೆಯವರು ಅವರ ನಿರೀಕ್ಷೆಯಂತೆ ಉತ್ತಮ ಕೆಲಸ ಮಾಡುವ ಆಶಯ ವ್ಯಕ್ತಪಡಿಸಿದರು.
ಪ್ರೊ.ವೆಂಕಟೇಶ್ವರಲು (ವಿಸಿ)
ಈ ಹಿಂದೆ ಇದೇ ವಿವಿಯಲ್ಲಿ ಕುಲಸಚಿವರಾಗಿ ಕಾರ್ಯನಿರ್ವಹಿಸಿದ್ದ, ಪ್ರೊ. ವೆಂಕಟೇಶ್ವರಲು ಅಧಿಕಾರ ಸ್ವೀಕರಿಸಿದ್ದಾರೆ. ವಿವಿಯ ಸಿಬ್ಬಂದಿಗಳು ಹೊಸಬರೇನಲ್ಲ, ಎಲ್ಲರ ಸಹಕಾರದ ಮಂತ್ರ ಜಪಿಸಿದ್ದಾರೆ. ಮುಂದಿನ ದಿನಗಳಲ್ಲಿ ವಿವಿಯ ಅಭಿವೃದ್ದಿಗೆ ಯಾವ ರೀತಿ ಶ್ರಮಿಸಲಿದ್ದಾರೆ ಕಾದು ನೋಡಬೇಕು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಶುಗರ್ ಸ್ಪೈಕ್ ಅನ್ನು ತಡೆಗಟ್ಟಲು ನಿಮ್ಮ ಆಹಾರದಲ್ಲಿ ಜಾಮೂನ್ ಅನ್ನು ಸೇರಿಸುವ 5 ವಿಧಾನಗಳು

Thu Jul 21 , 2022
ಕಪ್ಪು ಪ್ಲಮ್ ಅಥವಾ ಜಾವಾ ಪ್ಲಮ್ ಎಂದೂ ಕರೆಯಲ್ಪಡುವ ಜಾಮೂನ್ ಮಾನ್ಸೂನ್ ಸಮಯದಲ್ಲಿ ಹೇರಳವಾಗಿರುತ್ತದೆ, ಇದು ಋತುಮಾನದ ಸೋಂಕುಗಳ ವಿರುದ್ಧ ರೋಗನಿರೋಧಕ ಶಕ್ತಿಯನ್ನು ನಿರ್ಮಿಸಲು ಸೂಕ್ತ ಸಮಯವಾಗಿದೆ. ಮಧುಮೇಹ ಹೊಂದಿರುವ ಜನರು ವಿಶೇಷವಾಗಿ ಜಾಮೂನ್ ಅನ್ನು ಎದುರು ನೋಡುತ್ತಾರೆ ಏಕೆಂದರೆ ರುಚಿಕರವಾದ ಹಣ್ಣು ಮತ್ತು ಅದರ ಬೀಜವು ದೇಹದಲ್ಲಿ ಸಕ್ಕರೆಯ ಬಿಡುಗಡೆಯನ್ನು ನಿಧಾನಗೊಳಿಸುತ್ತದೆ. ಮಧುಮೇಹ ಚಿಕಿತ್ಸೆಗಾಗಿ ಆಯುರ್ವೇದದಲ್ಲಿ ಜಾಮೂನ್ ಅನ್ನು ವ್ಯಾಪಕವಾಗಿ ಬಳಸಲಾಗುತ್ತದೆ ಏಕೆಂದರೆ ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು […]

Advertisement

Wordpress Social Share Plugin powered by Ultimatelysocial