ಶಾಲಾ ಮಕ್ಶಳು ಮತ್ತು ವಿಕಲನ ಚೇತನರಿಂದ ಮತದಾನ ಜಾಗೃತಿಗಾಗಿ‌ ಕಾರ್ಯಕ್ರಮ!

ಬೀದರ ಜಿಲ್ಲಾ ಸ್ವೀಪ್ ಸಮಿತಿ ಔರಾದ ಬಾ ತಾಲ್ಲೂಕು ಸ್ವೀಪ್ ಸಮಿತಿಯ, ತಾಲೂಕಾ ಪಂಚಾಯತ ಔರಾದ ಬಾ ರವರ ಸಹಯೋಗದಲ್ಲಿ ಮತದಾನದ ಕುರಿತು ಅರಿವು ಮೂಡಿಸಲು ರವಿವಾರ ದಿನದಂದು ಶಾಲಾ ಮಕ್ಕಳು ಮತ್ತು ವಿಶೇಷ ಚೇತನರ ಬೈಕ್ ರ್ಯಾಲಿಗೆ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲ್ಲೂಕು ಪಂಚಾಯತ ಔರಾದ ಬಾ ರವರು ಚಾಲನೆ ನೀಡಿದರು.

ಔರಾದ ಬಾಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ದ್ವಜಾ ರೋಹಣ ಮತ್ತು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಪ್ರತಿಜ್ಞೆ ಮಾಡುವ ಮೂಲಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ತಾಲ್ಲೂಕ ಪಂಚಾಯತ ಔರಾದ ಬಾ ಕಛೇರಿಯ ವರೆಗೆ ಕಾಲ್ನಡಿಗೆ ಮತ್ತು ವಿಕಲನ ಚೇತನರಿಂದ ಬೈಕ್ ರ್ಯಾಲಿ ಮೂಲಕ ಸಂಚರಿಸಿ ಮತದಾನದ ಕುರಿತು ಜಾಗೃತಿ ಮೂಡಿಸಿದರು.

ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ, ವಿಶೇಷ ಚೇತನರಿಗೆ ಮತಚಲಾಯಿಸಲು ಎಲ್ಲ ಮತಗಟ್ಟೆಗಳಲ್ಲಿ ವ್ಹೀಲ್ ಚೇರ್ ಹಾಗೂ ರ್ಯಾಂಪ್ ವ್ಯವಸ್ಥೆ‌ ಮಾಡಲಾಗಿದೆ. ಮೇ 10 ರಂದು ವಿಧಾನಸಭಾ ಚುನಾವಣೆಗೆ ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಬೇಕು. ತಮ್ಮ ಗ್ರಾಮಗಳ ಎಲ್ಲ ವಿಶೇಷ ಚೇತನರೂ ಕೂಡ ಕಡ್ಡಾಯವಾಗಿ ಮತದಾನ ಮಾಡಲು ಕರೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕಾ ಕಾರ್ಯನಿರ್ವಾಹಕ ಅಧಿಕಾರಿಗಳು, ಕಮಲನಗರ ತಾಲೂಕ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕಾ ಚುನಾವಣಾ ಅಧಿಕಾರಿಗಳು, ತಾಲ್ಲೂಕು ವಿವಿಧೋದ್ದೇಶಗಳ ಪುನರ್ವಸತಿ ಕಾರ್ಯಕರ್ತರು MRWಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಾಧ್ಯಾಪಕರು ಮತ್ತು ಮಕ್ಕಳು, ಹಾಗೂ ತಾಲೂಕಾ ಪಂಚಾಯತ ಸಿಬ್ಬಂದಿ ವರ್ಗದವರು, ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಾರ್ಯನಿರ್ವಾಹಕ ಅಧಿಕಾರಿಗಳಾದ ಬೀರೆಂದ್ರಸಿಂಗ್‌ ಠಾಕೂರ್, ಕಮಲನಗರ ತಾಲೂಕ ಪಂಚಾಯತನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶೀವಕುಮಾರ್‌ ಘಾಟೆ, ಸಹಾಯಕ ನಿರ್ದೇಶಕರಾದ ಸುದೇಶಕುಮಾರ ಕೋಡ್ಡೆ, ತಾಲೂಕು ಪಂಚಾಯತಿಯ ವ್ಯಾವಸ್ಥಾಪಕರಾದ ಸಂಜುಕುಮಾರ,ಹಾಗೂ ಔರಾದ ಬಾ ತಾಲೂಕಿನ ಚುನಾವಣಾ ಅಧಿಕಾರಿಗಳಾದ ಜೀತೆಂದ್ರನಾಥ್‌ ಸುಬ್ಬುರ್‌, ಬಸವರಾಜ್‌ ದೇಶಮುಖ್‌ ಕಾರ್ಯಕರ್ತರು,ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳು ಹಾಗೂ ಶಾಲಾ ಮಕ್ಕಳು, ಮತ್ತು ಔರಾದ ತಾಲೂಕ ಪಂಚಾಯತಿನ ಸಿಬ್ಬಂದಿ ವರ್ಗದವರು ಹಾಜರಿದ್ದು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪುಣೆ: ಮಾರಕಾಸ್ತ್ರಗಳನ್ನು ಹಿಡಿದು ಮೆಡಿಕಲ್ ಶಾಪ್ ಸಿಬ್ಬಂದಿಯ ಮೇಲೆ ದಾಳಿ ನಡೆಸಿದ ಗ್ಯಾಂಗ್

Sun Apr 30 , 2023
    ಪುಣೆ: ಮಚ್ಚುಗಳನ್ನು ಹಿಡಿದ ಆರು ಜನರ ಗುಂಪು ಮೆಡಿಕಲ್ ಶಾಪ್‌ನ ಸಿಬ್ಬಂದಿಯ ಮೇಲೆ ದಾಳಿ ನಡೆಸಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪಿಂಪ್ರಿ-ಚಿಂಚ್‌ವಾಡ್‌ನಲ್ಲಿ ಶನಿವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಘಾತಕಾರಿ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾರಕಾಸ್ತ್ರಗಳನ್ನು ಹಿಡಿದಿದ್ದ ಗ್ಯಾಂಗ್ ಮೆಡಿಕಲ್ ಶಾಪ್‌ಗೆ ನುಗ್ಗಿ ಸಿಬ್ಬಂದಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದು, ವೀಡಿಯೊದಲ್ಲಿ ಕಂಡುಬಂದಿದೆ. ಅಂಗಡಿಯನ್ನು ಧ್ವಂಸಗೊಳಿಸಿದ ಈ ಗುಂಪು ಕೌಂಟರ್‌ನಲ್ಲಿರುವ ಇತರ ಸಿಬ್ಬಂದಿಗೆ ಬೆದರಿಕೆ […]

Advertisement

Wordpress Social Share Plugin powered by Ultimatelysocial