ಪುಣೆ: ಮಾರಕಾಸ್ತ್ರಗಳನ್ನು ಹಿಡಿದು ಮೆಡಿಕಲ್ ಶಾಪ್ ಸಿಬ್ಬಂದಿಯ ಮೇಲೆ ದಾಳಿ ನಡೆಸಿದ ಗ್ಯಾಂಗ್

 

 

ಪುಣೆ: ಮಚ್ಚುಗಳನ್ನು ಹಿಡಿದ ಆರು ಜನರ ಗುಂಪು ಮೆಡಿಕಲ್ ಶಾಪ್‌ನ ಸಿಬ್ಬಂದಿಯ ಮೇಲೆ ದಾಳಿ ನಡೆಸಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪಿಂಪ್ರಿ-ಚಿಂಚ್‌ವಾಡ್‌ನಲ್ಲಿ ಶನಿವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಘಾತಕಾರಿ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಾರಕಾಸ್ತ್ರಗಳನ್ನು ಹಿಡಿದಿದ್ದ ಗ್ಯಾಂಗ್ ಮೆಡಿಕಲ್ ಶಾಪ್‌ಗೆ ನುಗ್ಗಿ ಸಿಬ್ಬಂದಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದು, ವೀಡಿಯೊದಲ್ಲಿ ಕಂಡುಬಂದಿದೆ.

ಅಂಗಡಿಯನ್ನು ಧ್ವಂಸಗೊಳಿಸಿದ ಈ ಗುಂಪು ಕೌಂಟರ್‌ನಲ್ಲಿರುವ ಇತರ ಸಿಬ್ಬಂದಿಗೆ ಬೆದರಿಕೆ ಹಾಕುವುದು ಕಂಡುಬಂದಿದೆ.

ಮೆಡಿಕಲ್‌ ಶಾಪ್‌ ಮೇಲೆ ದಾಳಿ ನಡೆಸುವ ಮುನ್ನಈ ಗ್ಯಾಂಗ್ ಕಾಮ್‌ಗರ್‌ ನಗರ ಪ್ರದೇಶದಲ್ಲಿ ಕೆಲ ವಾಹನಗಳನ್ನು ಧ್ವಂಸಗೊಳಿಸಿದೆ.

ಇಂತಹ ಗ್ಯಾಂಗ್‌ಗಳನ್ನು ಒಳಗೊಂಡ ಇದೇ ರೀತಿಯ ದಾಳಿಗಳು ಪುಣೆಯಲ್ಲೂ ವರದಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ ಇಂತಹ 100 ಘಟನೆಗಳು ವರದಿಯಾಗಿವೆ.

ಇತ್ತೀಚೆಗೆ ರಾಜ್ಯ ವಿಧಾನಸಭೆಯಲ್ಲಿ ಇದೇ ವಿಚಾರದಲ್ಲಿ ಗದ್ದಲ ನಡೆದ ಹೊರತಾಗಿಯೂ ಮಚ್ಚುಗಳನ್ನು ಹಿಡಿದು ಜನರನ್ನು ಹೆದರಿಸುವ ಘಟನೆಗಳು ಮಹಾರಾಷ್ಟ್ರದ ಕೆಲವು ಜಿಲ್ಲೆಗಳಲ್ಲಿ ಹೆಚ್ಚುತ್ತಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಅಧಿಕೃತ ಅಭ್ಯರ್ಥಿ ಬಿಜೆಪಿ ಪಕ್ಷದಿಂದ ಅಭಯ್ ಪಾಟೀಲ್ ಶಾಪುರ್..!

Sun Apr 30 , 2023
ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಅಧಿಕೃತ ಅಭ್ಯರ್ಥಿ ಬಿಜೆಪಿ ಪಕ್ಷದಿಂದ ಅಭಯ್ ಪಾಟೀಲ್ ಶಾಪುರ್ ಭಾಗದಲ್ಲಿ ಮತಯಾಚನೆ ರ್ಯಾಲಿ ಹಮ್ಮಿಕೊಂಡಿದ್ದರು. ಕ್ಷೇತ್ರದ ಮತದಾರರು ಅಭಯ್ ಪಾಟೀಲ್ ಮತಯಾಚನೆ ಸಂದರ್ಭದಲ್ಲಿ ಮನೆ ಮನೆಗೆ ತೆರಳಿದಾಗ ಕ್ಷೇತ್ರದ ಮತದಾರರು ಮಾಲೆ ಹಾಕುತ್ತ ಹೂವಿನ ಸುರುಮಳೆಯನ್ನೇ ಸುರಿಸುತ್ತಾ ಮಹಿಳೆಯರು ಆರ್ಥಿ ಬೆಳಗುವ ಮುಖಾಂತರ ಅಭ್ಯರ್ಥಿ ಅಭಯ್ ಪಾಟೀಲರನ್ನು ಸ್ವಾಗತಿಸಿದರು. ಶಹಪುರ್ ಭಾಗದಲ್ಲಿ ಮತದಾರರು ಅಬ್ಬೆ ಪಾಟೀಲರಿಗೆ ಬಿಜೆಪಿಗೆ ಮತ ನೀಡಲು ಅಭಯ ಪಾಟೀಲರನ್ನು ಸ್ವೀಟ್ ತಿಳಿಸುತ್ತಾ […]

Advertisement

Wordpress Social Share Plugin powered by Ultimatelysocial