ಮುಂಬೈನ ಫಿಲ್ಮ್ ಸಿಟಿಯಲ್ಲಿರುವ ಬಿಗ್ ಬಾಸ್ ಮನೆಗೆ ಬೆಂಕಿ!

ಮುಂಬೈ: ಮುಂಬೈನ ಫಿಲ್ಮ್ ಸಿಟಿಯಲ್ಲಿರುವ ಬಿಗ್ ಬಾಸ್ ಮನೆಗೆ ಬೆಂಕಿ ಹೊತ್ತಿಕೊಂಡು ಧಗಧಗ ಉರಿಯುತ್ತಿದೆ. ಸ್ಥಳಕ್ಕೆ ನಾಲ್ಕು ಅಗ್ನಿಶಾಮಕ ವಾಹನಗಳನ್ನು ದೌಡಾಯಿಸಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ.ಈ ಮನೆಯನ್ನು ಹಿಂದಿಯ ಬಿಗ್‌ಬಾಸ್‌ ಸೀಜನ್‌ 15ಗೆಂದು ಅಣಿಗೊಳಿಸಲಾಗಿತ್ತು.ಆದರೆ ಕೆಲ ದಿನಗಳ ಹಿಂದಷ್ಟೇ ಈ ಸೀಸನ್‌ ಫಿನಾಲೆ ಮುಗಿದಿದೆ. ಈ ಹಿನ್ನೆಲೆಯಲ್ಲಿ ಬೆಂಕಿಯಿಂದ ಯಾವುದೇ ಪ್ರಾಣಾಪಾಯಾಗಲಿಲ್ಲ. ಆದರೆ ಬೆಂಕಿ ಏಕೆ ಹೊತ್ತಿಕೊಂಡಿದೆ ಎಂಬ ಬಗ್ಗೆ ಇದುವರೆಗೆ ತಿಳಿದುಬಂದಿಲ್ಲ.ನಟ ಸಲ್ಮಾನ್ ಖಾನ್ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದು, ಜನವರಿ 30ರಂದು ಸೀಜನ್‌ 15 ಕೊನೆಗೊಂಡಿತ್ತು. ನಟಿ ತೇಜಸ್ವಿ ಪ್ರಕಾಶ್ ವಿಜೇತೆಯಾಗಿ ಹೊರಹೊಮ್ಮಿದ್ದರು. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನ್ಯೂಜಿಲೆಂಡ್ COVID-19 ನ 810 ಹೊಸ ಸಮುದಾಯ ಪ್ರಕರಣಗಳನ್ನು ವರದಿ ಮಾಡಿದೆ

Sun Feb 13 , 2022
  ನ್ಯೂಜಿಲೆಂಡ್ ಭಾನುವಾರ 810 COVID-19 ನ ಹೊಸ ಸಮುದಾಯ ಪ್ರಕರಣಗಳನ್ನು ವರದಿ ಮಾಡಿದೆ ಎಂದು ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. 810 ಹೊಸ ಸಮುದಾಯ ಸೋಂಕುಗಳಲ್ಲಿ, 623 ದೊಡ್ಡ ನಗರವಾದ ಆಕ್ಲೆಂಡ್‌ನಲ್ಲಿವೆ, 81 ವೈಕಾಟೊದಲ್ಲಿ, 15 ರಾಜಧಾನಿ ವೆಲ್ಲಿಂಗ್‌ಟನ್‌ನಲ್ಲಿ, 14 ದಕ್ಷಿಣ ಪ್ರದೇಶದಲ್ಲಿ, 13 ನಾರ್ತ್‌ಲ್ಯಾಂಡ್‌ನಲ್ಲಿ, 11 ಬೇ ಆಫ್ ಪ್ಲೆಂಟಿಯಲ್ಲಿ, 11 ಲೇಕ್ಸ್ ಪ್ರದೇಶದಲ್ಲಿ, 10 ಹಟ್ ವ್ಯಾಲಿಯಲ್ಲಿ ಎಂಟು, ಹಾಕ್ಸ್ ಕೊಲ್ಲಿಯಲ್ಲಿ ಎಂಟು, ವಾಂಗನುಯಿಯಲ್ಲಿ ಆರು, […]

Advertisement

Wordpress Social Share Plugin powered by Ultimatelysocial